ಮುರಳಿ ವಿಜಯ್ ಶತಕ:ಅಭ್ಯಾಸ ಪಂದ್ಯ ನೀರಸ ಡ್ರಾ
Team Udayavani, Dec 2, 2018, 6:00 AM IST
ಸಿಡ್ನಿ: ಅಭ್ಯಾಸ ಪಂದ್ಯದಲ್ಲಿ ಆರಂಭಕಾರ ಮುರಳಿ ವಿಜಯ್ ಆತ್ಮವಿಶ್ವಾಸಭರಿತ ಶತಕವೊಂದನ್ನು ಬಾರಿಸಿ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಅಣಿಯಾಗಿದ್ದಾರೆ. ಜತೆಗಾರ ಕೆ.ಎಲ್. ರಾಹುಲ್ ಕೂಡ ಅರ್ಧ ಶತಕವೊಂದನ್ನು ಹೊಡೆದು ಫಾರ್ಮ್ಗೆ ಮರಳಿ8ದ ಸೂಚನೆ ನೀಡಿದ್ದಾರೆ. ಇವರಿಬ್ಬರ ಸಾಹಸದಿಂದ ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ 2ಕ್ಕೆ 211 ರನ್ ಗಳಿಸಿದ ವೇಳೆ ಪಂದ್ಯಕ್ಕೆ ಡ್ರಾ ಮುದ್ರೆ ಬಿತ್ತು.
ಮೊದಲ ಸರದಿಯಲ್ಲಿ ಬ್ಯಾಟಿಂಗಿಗೆ ಇಳಿಯದಿದ್ದ ವಿಜಯ್ ಆಕ್ರಮಣಕಾರಿ ಆಟವಾಡಿ 132 ಎಸೆತಗಳಿಂದ 129 ರನ್ ಬಾರಿಸಿದರು (16 ಬೌಂಡರಿ, 5 ಸಿಕ್ಸರ್). ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 3 ರನ್ ಮಾಡಿ ನಿರಾಸೆ ಮೂಡಿಸಿದ್ದ ರಾಹುಲ್ 98 ಎಸೆತ ಎದುರಿಸಿ 62 ರನ್ ಹೊಡೆದರು (8 ಬೌಂಡರಿ, 1 ಸಿಕ್ಸರ್).
ಆದರೆ ಭಾರತ ಬೌಲಿಂಗ್ ಮಾತ್ರ ಸಂಪೂರ್ಣವಾಗಿ ಲಯ ಕಳೆದುಕೊಂಡಂತಿತ್ತು. ಕ್ರಿಕೆಟ್ ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 544 ರನ್ ಪೇರಿಸಿದ್ದೇ ಇದಕ್ಕೆ ಸಾಕ್ಷಿ. ಆತಿಥೇಯರಿಗೆ ಕಡಿವಾಣ ಹಾಕಲು ಭಾರತ ಒಟ್ಟು 10 ಮಂದಿಯನ್ನು ಬೌಲಿಂಗ್ ದಾಳಿಗೆ ಇಳಿಸಿತ್ತು. ಹೆಚ್ಚಿನ ಯಶಸ್ಸು ಕಂಡವರು ಮೊಹಮ್ಮದ್ ಶಮಿ (97ಕ್ಕೆ 3). ಅಶ್ವಿನ್ 2 ವಿಕೆಟಿಗಾಗಿ 122 ರನ್ ಬಿಟ್ಟುಕೊಟ್ಟರು. ಉಮೇಶ್ ಯಾದವ್, ಇಶಾಂತ್ ಶರ್ಮ, ವಿರಾಟ್ ಕೊಹ್ಲಿ ತಲಾ ಒಂದು ವಿಕೆಟ್ ಉರುಳಿಸಿದರು. ಆದರೆ ಸಿಡ್ನಿ ಟ್ರ್ಯಾಕ್ ಬೌಲರ್‌ಗಳಿಗೆ ಯಾವುದೇ ರೀತಿಯ ನೆರವು ನೀಡುತ್ತಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.
2 ಶತಕದ ಜತೆಯಾಟ
186 ರನ್ನುಗಳ ಹಿನ್ನಡೆಯ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಮುರಳಿ ವಿಜಯ್-ಲೋಕೇಶ್ ರಾಹುಲ್ ಉತ್ತಮ ಅಡಿಪಾಯ ನಿರ್ಮಿಸಿದರು. 30.4 ಓವರ್‌ಗಳ ತನಕ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಈ ಜೋಡಿ ಮೊದಲ ವಿಕೆಟಿಗೆ 109 ರನ್ ಪೇರಿಸಿತು. ಈ ಹಂತದಲ್ಲಿ ರಾಹುಲ್ ವಿಕೆಟ್ ಉರುಳಿತು.
ಬಳಿಕ ಹನುಮ ವಿಹಾರಿ ಅವರನ್ನು ಕೂಡಿಕೊಂಡ ವಿಜಯ್ ಆಕ್ರಮಣಕಾರಿ ಬ್ಯಾಟಿಂಗಿಗೆ ಮುಂದಾದರು. 2ನೇ ವಿಕೆಟಿಗೆ ಮತ್ತೂಂದು ಶತಕದ ಜತೆಯಾಟ ದಾಖಲಾಯಿತು (102 ರನ್). ವಿಜಯ್ ಔಟಾದೊಡನೆ ಪಂದ್ಯವನ್ನು ಕೊನೆಗೊಳಿಸಲಾಯಿತು. ಆಗ ವಿಹಾರಿ 15 ರನ್ ಮಾಡಿ ಅಜೇಯರಾಗಿದ್ದರು.
ಹ್ಯಾರಿ ನೀಲ್ಸನ್ ಶತಕ
ಆತಿಥೇಯರ ಇನ್ನಿಂಗ್ಸ್ ಬೆಳೆಸುವಲ್ಲಿ ಕೀಪರ್ ಹ್ಯಾರಿ ನೀಲ್ಸೆನ್ ಅವರ ಶತಕದ ಆಟ ಪ್ರಮುಖ ಪಾತ್ರ ವಹಿಸಿತು. 56 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ನೀಲ್ಸೆನ್ 170 ಎಸೆತಗಳಿಂದ ಭರ್ತಿ 100 ರನ್ ಹೊಡೆದರು (9 ಬೌಂಡರಿ). ಆರನ್ ಹಾರ್ಡಿ 86, ಕೆಳ ಕ್ರಮಾಂಕದ ಡೇನಿಯಲ್ ಫಾಲಿನ್ಸ್ 43, ಲ್ಯೂಕ್ ರಾಬಿನ್ಸ್ ಅಜೇಯ 38, ಜಾಕ್ಸನ್ ಕೋಲ್‌ಮಾÂನ್ 36 ರನ್ ಗಳಿಸಿದರು. ಕ್ರಿಕೆಟ್ ಆಸ್ಟ್ರೇಲಿಯ 6ಕ್ಕೆ 356 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು.
ಸಂಕ್ಷಿಪ್ತ ಸ್ಕೋರ್: ಭಾರತ-358 ಮತ್ತು 2 ವಿಕೆಟಿಗೆ 211 (ವಿಜಯ್ 129, ರಾಹುಲ್ 62). ಕ್ರಿಕೆಟ್ ಆಸ್ಟ್ರೇಲಿಯ ಇಲೆವೆನ್-544 (ನೀಲ್ಸೆನ್ 100, ಹಾರ್ಡಿ 86, ಶಾರ್ಟ್ 74, ಬ್ರಿಯಾಂಟ್ 62, ಶಮಿ 97ಕ್ಕೆ 3, ಅಶ್ವಿನ್ 122ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.