ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟ
Team Udayavani, Dec 2, 2018, 7:00 AM IST
ಬೆಂಗಳೂರು: 2018ನೇ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು,ಉದಯವಾಣಿಯ ಚಿಕ್ಕಬಳ್ಳಾಪುರ ಜಿಲ್ಲಾ ವರದಿಗಾರ ಕಾಗತಿ ನಾಗರಾಜ್ ಮತ್ತು ಕೆ.ಆರ್.ಪೇಟೆ ವರದಿಗಾರ ಎಚ್.ಬಿ.ಮಂಜುನಾಥ್ ಸೇರಿದಂತೆ 50 ಮಂದಿ ಪತ್ರಕರ್ತರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ದರಾಜು ನೇತೃತ್ವದಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದ್ದು, “ಡಾ.ಬಿ.ಆರ್.ಅಂಬೇಡ್ಕರ್ ಮೂಲಕ ನಾಯಕ ವಿಶೇಷ ಪ್ರಶಸ್ತಿ’ಗೆ ಹಿರಿಯ ಪತ್ರಕರ್ತ ಡಾ.ಸಿ.ಎಸ್.ದ್ವಾರಕನಾಥ್, ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ “ಆಂದೋಲನ ಪ್ರಶಸ್ತಿ’ಗೆ “ಕೋಲಾರ ವಾಣಿ, ಅತ್ಯುತ್ತಮ ಸಿನಿಮಾ ಪತ್ರಕರ್ತರಿಗೆ ನೀಡುವ “ಅರಗಿಣಿ ಪ್ರಶಸ್ತಿ’ಗೆ ಕನ್ನಡ ಪ್ರಭದ ಸಿನಿಮಾ ವರದಿಗಾರ ದೇಶಾದ್ರಿಹೊಸ್ಮನೆ, ಸಾಮಾಜಿಕ ಸಮಸ್ಯೆ ಲೇಖನಕ್ಕೆ ನೀಡುವ “ಅಭಿಮಾನಿ ಪ್ರಶಸ್ತಿ’ಗೆ ಪರಮೇಶ್ವರ ಭಟ್, ಮಾನವೀಯತೆ ಸಮಸ್ಯೆಗೆ ನೀಡುವ “ಮೈಸೂರು ದಿಗಂತ ಪ್ರಶಸ್ತಿ’ಗೆ ಇಂದು ಸಂಜೆಯ ಜಿ.ಎನ್.ನಾಗರಾಜು ಆಯ್ಕೆಯಾಗಿದ್ದಾರೆ ಎಂದು ಮಾಧ್ಯಮ ಅಕಾಡೆಮಿಯ ಪ್ರಕಟಣೆ ತಿಳಿಸಿದೆ. ವಿಶೇಷ ಪ್ರಶಸ್ತಿ 50 ಸಾವಿರ ರೂ. ನಗದು ಮತ್ತು ಪ್ರಶಸ್ತಿ ಫಲಕ ವಾರ್ಷಿಕ ಪ್ರಶಸ್ತಿ 25 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಹೊಂದಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ:
ಪ್ರೇಮಕುಮಾರ್ ಹರಿಯೆಬ್ಬೆ (ಪ್ರಜಾವಾಣಿ),ವಿಶ್ವನಾಥ ಸುವರ್ಣ (ಛಾಯಾಗ್ರಾಹಕರು), ಮೋಹನ್ ಹೆಗಡೆ ( ವಿಜಯವಾಣಿ), ಭಾನು ತೇಜ್ (ಎಕನಾಮಿಕ್ ಟೈಮ್ಸ್), ಬಿ.ಎಸ್.ಸತೀಶ್ ಕುಮಾರ್ ( ದಿ ಹಿಂದೂ), ಜಿ.ಎಂ.ರವಿಕುಮಾರ್ ( ಬಿ.ಟಿ.ವಿ), ಕೆ.ಎನ್.ಚನ್ನೇಗೌಡ (ವಿಜಯವಾಣಿ), ಮರಿಯಪ್ಪ ಕೆ.ಜಿ. (ಪ್ರಜಾವಾಣಿ), ಸಾಲೋಮನ್ (ಆಂದೋಲನ), ಆಯೋಶಾ ಖಾನಂ (ದೂರದರ್ಶನ), ಅಬ್ದುಲ್ ಖಾಲಿಕ್ (ಡೆಲಿ ಪಾಸಬಾಸ್), ಎಂ.ಅನಿಲ್ ಕುಮಾರ್ (ನ್ಯೂಸ್ 9), ಕೆ.ಎನ್.ನಾಗೇಶ್ ಕುಮಾರ್ ( ಸಿನಿಮಾ ಛಾಯಾಗ್ರಹಕರು), ಹರಿಪ್ರಸಾದ್ (ಟಿ.ವಿ.9), ಈಶ್ವರ್ ಶಿವಣ್ಣ ( ಛಾಯಾಗ್ರಹಕರು ಬೆಂಗಳೂರು ಮಿರರ್), ಬಸವರಾಜ ಬೂಸಾರೆ (ಸಮಾಜ ಮುಖೀ), ಮೋಹನ್ ಕುಮಾರ್ (ಛಾಯಾಗ್ರಹಕರು), ದೊಡ್ಡ ಬೊಮ್ಮಯ್ಯ ( ಸಂಜೆ ವಾಣಿ), ರಾಮು ಪಾಟೀಲ್ ( ಇಂಡಿಯನ್ ಎಕ್ಸ್ ಪ್ರಸ್), ರಾಜು ವಿಜಾಪುರ ( ಡೆಕ್ಕನ್ ಹೆರಾಲ್ಡ್), ರಾಜು ನಾದಾಫ್ (ವಿಜಯ ಕರ್ನಾಟಕ), ಉಮೇಶ್ ಪೂಜಾರ್ (ಸವಿನುಡಿ), ಎಸ್.ವಿ.ಶಿವಪ್ಪಯ್ಯನ ಮಠ (ವಿಶ್ವವಾಣಿ), ಶಶಿಕುಮಾರ್ ಪಾಟೀಲ್ ( ಯುವ ರಂಗ), ಶಿವರಾಂ ಅಸುಂಡಿ (ನ್ಯೂಸ್ 18), ಕೆ.ಜೆ.ಸುರೇಶ್ ( ಪ್ರಜಾಟಿವಿ), ಪಿ.ಪರಮೇಶ್ವರ್ (ಸುದ್ದಿ ಮೂಲ), ಎಂ.ಪಾಷಾ ( ಈಶಾನ್ಯ ಟೈಮ್ಸ್), ಶರಣಪ್ಪ ಬಾಚಲಾಪುರ (ನ್ಯೂಸ್ 18), ಸುಭಾಷ್ ಹದಲೂರು (ಸುದಿನ), ಸುಲೋಚನೇಶ್ ಹೂಗಾರ (ಸಂಜೆ ದರ್ಪಣ), ಎಚ್.ಬಿ.ವೈದ್ಯನಾಥ್ (ನಾವಿಕ), ಪ್ರಕಾಶ್ ಕುಗ್ವೆ (ಪ್ರಜಾವಾಣಿ), ಕಂಕ ಮೂರ್ತಿ ( ಸಂಯುಕ್ತ ಕರ್ನಾಟಕ), ಜೆ.ಆರ್.ಕೆಂಚೇಗೌಡ (ಪ್ರಚೋದಯ), ಮೀರಾ ಅಯ್ಯಪ್ಪ ( ಸ್ಟಾರ್ ಆಫ್ ಮೈಸೂರು), ಕೆ.ಎನ್.ರವಿಕುಮಾರ್ (ಕನ್ನಡ ಪ್ರಭ), ಎಚ್.ಬಿ. ಮಂಜುನಾಥ್ (ಉದಯವಾಣಿ), ನಂದೀಶ್ (ನ್ಯೂಸ್ 18), ಪಾ.ಶ್ರೀ.ಅನಂತರಾಂ (ವಿಜಯವಾಣಿ), ವಿನ್ಸನ್ ಕೆನಡಿ (ವಾರ್ತಾ ಭಾರತಿ), ಕಾಗತಿ ನಾಗರಾಜ್ (ಉದಯವಾಣಿ), ಗಂಗಹನುಮಯ್ಯ (ಅಮೃತವಾಣಿ), ವೆಂಕಟಸ್ವಾಮಿ (ಸಂಜೆ ಸಮಾಚಾರ), ಶ್ರೀಜಾ (ಡಿಜಿಟಲ್ ಮೀಡಿಯಾ), ಪ್ರಕಾಶ್ ಶೆಟ್ಟಿ (ವ್ಯಂಗ್ಯಚಿತ್ರಕಾರ), ಸತೀಶ್ ಕುಮಾರ್ ಶೆಟ್ಟಿ( ಕಸ್ತೂರಿ), ಕೆ.ಎಸ್.ಜನಾರ್ಧನ್ ( ಈ ಸಂಜೆ), ಎನ್.ಎಸ್.ಸುಭಾಶ್ಚಂದ್ರ (ಇಂಡಿಯನ್ ಎಕ್ಸ್‌ಪ್ರೆಸ್), ಮಂಜುಶ್ರೀ ಕಾಡಕೋಳ ( ಪ್ರಜಾವಾಣಿ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ
Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.