ಈದುವಿನಲ್ಲಿ ಮತ್ತೆ ಶಸ್ತ್ರ ಸಜ್ಜಿತ ತಂಡ ?
Team Udayavani, Dec 2, 2018, 6:00 AM IST
ಕಾರ್ಕಳ: ತಾಲೂಕಿನ ಈದು ಗ್ರಾಮದ ಪಶ್ಚಿಮ ಘಟ್ಟದ ತಪ್ಪಲು ಭಾಗದ ಕೆಲವು ಮನೆಗಳಿಗೆ ಒಟ್ಟು 13 ಜನರ ಶಸ್ತ್ರ ಸಜ್ಜಿತ ತಂಡ ನ. 29ರಂದು ಭೇಟಿ ನೀಡಿದೆ ಎಂಬ ಮಾಹಿತಿ ಕೇಳಿಬಂದಿದೆ. ಇಲ್ಲಿನ ಬಾರೆ, ಮಂಜೊಟ್ಟು ಭಾಗಗಳಿಗೆ ಗುರುವಾರ ಭೇಟಿ ನೀಡಿದ್ದರೆ, ಬೊಲ್ಲೊಟ್ಟು ಭಾಗಕ್ಕೆ ಬುಧವಾರವೇ ಭೇಟಿ ನೀಡಿತ್ತೆನ್ನಲಾಗಿದೆ. ಸಂಜೆ ಅಂದಾಜು 6.30ರ ವೇಳೆಗೆ ಅಲ್ಲಿನ ನಾಲ್ಕೈದು ಮನೆ ಗಳಿಗೆ ಭೇಟಿ ನೀಡಿ, ಕೆಲ ಹೊತ್ತು ಕಳೆದಿದೆ. ಮನೆಯ ವರೊಂದಿಗೆ ಕೆಲವು ವಿಷಯವನ್ನು ಚರ್ಚಿಸಿತಲ್ಲದೆ, ರಾತ್ರಿಯ ವೇಳೆಗೆ ಕಾಡಿಗೆ ತೆರಳಿದೆ ಎನ್ನಲಾಗಿದೆ.
ತುಳು-ತೆಲುಗು-ಮಲಯಾಳ
ಮೂವರು ಮಹಿಳೆಯರು ಹಾಗೂ 10 ಪುರುಷರು ತಂಡದಲ್ಲಿದ್ದರು. ತುಳು, ತೆಲುಗು, ಮಲಯಾಳ ಮಾತನಾಡುತ್ತಿದ್ದರು. ನಕ್ಸಲ್ ಸಮವಸ್ತ್ರದಲ್ಲಿದ್ದು, ಬಂದೂಕು ಹೊಂದಿದ್ದರು. ಲ್ಯಾಪ್‌ಟಾಪ್, ಮೊಬೈಲ್ ಇತ್ಯಾದಿ ಅತ್ಯಾಧುನಿಕ ಸಾಧನ ಹೊಂದಿದ್ದರೆಂಬ ಮಾಹಿತಿ ಲಭ್ಯವಾಗಿದೆ.
ಸಮಸ್ಯೆಗಳ ಬಗ್ಗೆ ಪ್ರಶ್ನೆ
ಭೇಟಿ ಸಂದರ್ಭದಲ್ಲಿ ಮಲೆನಾಡಿನ ವಿವಿಧ ಸಮಸ್ಯೆಗಳ ಕುರಿತು ಪ್ರಸ್ತಾವಿಸಿದ್ದಾರೆ. ಆಹಾರ ಪದಾರ್ಥಗಳನ್ನು ಕೇಳಿದ್ದಲ್ಲದೆ ಮನೆಯೊಂದರಲ್ಲಿ ಊಟ ಮಾಡಿ, ಲ್ಯಾಪ್‌ಟಾಪ್ ಚಾರ್ಜ್ ಮಾಡಿಕೊಂಡು ಹಳೆ ಪೇಪರ್‌ಗಳನ್ನು ಪಡೆದೊಯ್ದಿದ್ದಾರೆ.
ಆಗಾಗ ಭೇಟಿ?
ಘಟ್ಟದ ತಪ್ಪಲು ಭಾಗವಾದ ಈ ಪರಿಸರದಲ್ಲಿ ಐದಾರು ವರ್ಷಗಳ ಬಳಿಕ ಹೀಗೆ ತಂಡಗಳು ಪ್ರತ್ಯಕ್ಷವಾಗುತ್ತಿವೆ. ಈ ಹಿಂದೆಯೂ ಕೆಲವು ಸಲ ಇದೇ ರೀತಿ ನಕ್ಸಲರ ತಂಡಗಳು ಭೇಟಿ ನೀಡಿದ್ದವು ಎನ್ನುತ್ತಾರೆ ಸ್ಥಳೀಯರು.
ನೀರಿನ ಕಟ್ಟದ ಸಮಸ್ಯೆ…?
ಈ ಭಾಗದಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿ ರುವ ನೀರಿನ ಕಟ್ಟದ ಸಮಸ್ಯೆಯೊಂದಿದೆ. 10 ಮನೆಗಳಿಗೆ ಪ್ರಯೋಜನಕಾರಿ ಕಟ್ಟಕ್ಕೆ ಸಂಬಂಧಿಸಿ ಸ್ಥಳೀಯರೊಬ್ಬರ ತಕರಾರು ಇದೆ. ಭೇಟಿಗೆ ಇದೂ ಕಾರಣವೇ ಎಂಬ ಸಂಶಯ ಸ್ಥಳೀಯರದ್ದು.
ದೃಢಪಟ್ಟಿಲ್ಲ: ಎಎನ್‌ಎಫ್
ಈದು ಪ್ರದೇಶಕ್ಕೆ ನಕ್ಸಲರು ಬಂದಿರುವುದು ಖಚಿತವಾಗಿಲ್ಲ. ಜನರು ಯಾರನ್ನೋ ನೋಡಿ ಸಂಶಯಪಟ್ಟಿರಲೂಬಹುದು. ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈದು ಭಾಗದಲ್ಲಿ ನಿರಂತರವಾಗಿ ಶೋಧ ನಡೆಯುತ್ತಿದೆ. ಇತ್ತೀಚೆಗೆ ರಾತ್ರಿ ವೇಳೆಯೂ ಶೋಧ ನಡೆಸಲಾಗುತ್ತಿದೆ. 11 ತಂಡಗಳು ಕಾರ್ಯ ನಿರತವಾಗಿದ್ದು, ನ.28ರಂದೂ ನಡೆಸಲಾಗಿತ್ತು ಎನ್ನುತ್ತಾರೆ ಎಎನ್‌ಎಫ್ ಅಧಿಕಾರಿಗಳು.
ಮಾಹಿತಿ ಇಲ್ಲ
ನಕ್ಸಲರು ಬಂದ ಬಗ್ಗೆ ಮಾಹಿತಿ ಇಲ್ಲ. ಎಎನ್‌ಎಫ್ನವರು ಶೋಧ ನಡೆಸುತ್ತಿ ರುತ್ತಾರೆ. ನಿನ್ನೆ ನಾವೂ ಆ ಭಾಗಕ್ಕೆ ಭೇಟಿ ನೀಡಿದ್ದೆವು, ಸುಳಿವು ಸಿಕ್ಕಿಲ್ಲ.
ನಾಸಿರ್ ಹುಸೇನ್, ಗ್ರಾಮಾಂತರ ಠಾಣೆ ಪಿಎಸ್‌ಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
ಪೊಂಗಲ್ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್ ಆಗಲಿರುವ ಚಿತ್ರಗಳ ಪಟ್ಟಿ
Fraud: ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸುವುದಾಗಿ ವಂಚನೆ; ಶಿಕ್ಷಕ ಸೆರೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.