ಅಯೋಧ್ಯೆ ರಾಮಮಂದಿರ ನಿರ್ಮಾಣ ಶತಃಸಿದ್ಧ
Team Udayavani, Dec 2, 2018, 10:15 AM IST
ಸೇಡಂ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸರ್ವೋತ್ಛ ನ್ಯಾಯಾಲಯದ ನಿಲುವು ಅಸಮಾಧಾನ ತಂದಿದ್ದು, ರಾಮಮಂದಿರ ನಿರ್ಮಾಣ ಶತಸಿದ್ಧವಾಗಿದೆ ಎಂದು ವಿಶ್ವಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವಜಿ ಹೆಗಡೆ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೀಪಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಹಿಂದೂಗಳ ಭಾವನೆ ಧಿಕ್ಕರಿಸುವ ರೀತಿಯಲ್ಲಿ ವ್ಯವಸ್ಥೆಗಳು
ನಿರ್ಮಾಣವಾಗಿವೆ. ಹಿಂದೂಗಳನ್ನು ಹತ್ತಿಕ್ಕುವ ಷಡ್ಯಂತ್ರ ತೆರೆಮರೆಯಲ್ಲಿ ನಡೆಯುತ್ತಿದೆ. ಧರ್ಮ, ಸಂಸ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಅಸುರ ಶಕ್ತಿಗಳ ಸಂಹಾರಕ್ಕೆ ಸ್ತ್ರೀಶಕ್ತಿ ಒಂದಾಗಬೇಕಾಗಿದೆ ಎಂದರು.
ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ವಿಚಾರ ಅಪ್ರಸ್ತುತ. ಏಕೆಂದರೆ ಅಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಆದರೆ ವಯಸ್ಸಿನ ಮಿತಿ ಇದೆ. ಉದ್ದೇಶ ಪೂರ್ವಕವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಹಿಂದೂ ಧರ್ಮದ ಆಚರಣೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಶಿವಶಂಕರೇಶ್ವರ ಮಠದ ಶಿವಶಂಕರ ಸ್ವಾಮೀಜಿ, ಯಾದಗಿರಿ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ, ಸುಲೇಪೇಟ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ, ಡಾ| ಭಾಗ್ಯಶ್ರೀ ಪಾಟೀಲ, ಸಿಪಿಐ ಶಂಕರಗೌಡ ಪಾಟೀಲ, ವಿಹಿಂಪ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್, ಮಾತೃಶಕ್ತಿ ಪ್ರಮುಖೆ ಭಾಗ್ಯಲಕ್ಷ್ಮೀ ನಾಯಿಕೋಡಿ, ಮಾಧವಿ ಐನಾಪುರ ಹಾಜರಿದ್ದರು.
ವೈದಿಕ ಪಂಡಿತ ಸತ್ಯನಾರಾಯಣ ಮಹಾರಾಜ ದೀಪಲಕ್ಷ್ಮೀ ಪೂಜಾ ಪದ್ಧತಿ ಬೋಧಿ ಸಿದರು. ವಿಭಾಗೀಯ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿ ರಾಜಕುಮಾರ ಗೀತೆ ಹಾಡಿದರು. ಪ್ರಕಾಶ ಕುಲಕರ್ಣಿ ಓಂಕಾರ ಪಠಿಸಿದರು. ಸಾಧನಾ ಸಂಗಡಿಗರು ಪ್ರಾರ್ಥಿಸಿದರು. ಸಾಧನಾ ನೀಲಂಗಿ ಸ್ವಾಗತಿಸಿ, ಪರಿಚಯಿಸಿದರು. ಆರತಿ ಕಡಗಂಚಿ ನಿರೂಪಿಸಿದರು, ಅವಿನಾಶ ಮಡಿವಾಳ ವಂದಿಸಿದರು.
ಲವ್ ಜಿಹಾದ್‌ಗೆ ಪ್ರತಿ ವರ್ಷ 1.5 ಲಕ್ಷ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಹಿಂದೂಗಳ ಶಕ್ತಿಯನ್ನು ನೇರವಾಗಿ ಕುಗ್ಗಿಸಲಾಗದ ಶಕ್ತಿಗಳು, ಬೆನ್ನಿಗೆ ಚೂರಿ ಹಾಕುವ ಕೆಲಸಕ್ಕೆ ಕೈ ಹಾಕಿವೆ. ಯುವತಿಯರು ಈ ಕುರಿತು ಜಾಗೃತರಾಗಿರುವ ಅವಶ್ಯಕತೆ ಇದೆ. ಲವ ಜಿಹಾದ್ ಜಾಲದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಎಚ್ಚರಿಕೆವಹಿಸುವ ಅವಶ್ಯಕತೆ ಇದೆ.
ಕೇಶವಜಿ ಹೆಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
MUST WATCH
ಹೊಸ ಸೇರ್ಪಡೆ
Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್ ಹೈಕಮಾಂಡ್ ತಾಕೀತು
Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.