ಭೂಗರ್ಭದಲ್ಲೂ ಕಾರ್ಯಾಚರಣೆ ಮಾಡುವ ಡ್ರೋನ್
Team Udayavani, Dec 2, 2018, 11:55 AM IST
ಬೆಂಗಳೂರು: ಭೂಮಿಯ ಮೇಲಿರುವ ವಸ್ತುಗಳನ್ನು ಸೆರೆಹಿಡಿದು ತರುವುದು ಮಾತ್ರವಲ್ಲ; ಭೂಗರ್ಭದಲ್ಲಿರುವ ವಸ್ತುಗಳನ್ನೂ ಪತ್ತೆಹಚ್ಚುವ ಡ್ರೋನ್ ಬಂದಿದೆ. ಟೆರ್ರಾ ಡ್ರೋನ್ ಇಂಡಿಯಾ ಕಂಪೆನಿಯು ಇಂತಹದ್ದೊಂದು ಭೂಮಿಯಿಂದ ಸುಮಾರು ಒಂದು ಕಿ.ಮೀ. ಆಳದಲ್ಲಿರುವ ವಸ್ತುಗಳನ್ನು ಪತ್ತೆಹಚ್ಚುವ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ. ಹೀಗೆ ಸುರಂಗವನ್ನು ಜಾಲಾಡುವ ವಿಶ್ವದ ಮೊದಲ ಡ್ರೋನ್ ಇದಾಗಿದೆ ಎಂದು ಆ ಕಂಪೆನಿ ಹೇಳಿಕೊಂಡಿದೆ.
ಸಾಮಾನ್ಯವಾಗಿ ಇದನ್ನು ರಕ್ಷಣಾ ಇಲಾಖೆ ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಳಸಬಹುದು. ಶತ್ರುಗಳು ಭೂಮಿಯ ಒಳಗಡೆ ಸ್ಫೋಟಕ ವಸ್ತುಗಳನ್ನು ಇಟ್ಟಿದ್ದರೆ, ಇದರಿಂದ ಸುಲಭವಾಗಿ ಕಂಡುಹಿಡಿಯಬಹುದು. ಅದೇ ರೀತಿ, ಭೂಮಿಯಿಂದ ಎಷ್ಟು ಆಳದಲ್ಲಿ ಅದಿರು ಇದೆ ಎಂಬುದನ್ನು ಇದು ಮಾಹಿತಿ ನೀಡುತ್ತದೆ. ಪರಿಣಾಮ ಸಮಯ ಮತ್ತು ಹಣ ವ್ಯಯ ಆಗುವುದನ್ನು ತಪ್ಪಿಸಬಹುದು.
ಅಷ್ಟೇ ಅಲ್ಲ, ಯಾವುದಾದರೂ ರೈಲ್ವೆ ಟನಲ್ ನಿರ್ಮಾಣ ಯೋಜನೆ ಸಂದರ್ಭದಲ್ಲೂ ಇದು ಅನುಕೂಲ ಆಗಲಿದೆ. ಆ ಮಾರ್ಗದಲ್ಲಿ ಹಾದುಹೋಗಿರುವ ಪೈಪ್ಲೈನ್, ಕೇಬಲ್ ಮತ್ತಿತರ ಯುಟಿಲಿಟಿಗಳ ಸಂಪೂರ್ಣ ಚಿತ್ರಣವನ್ನು ಇದು ನೀಡುತ್ತದೆ. ಅದನ್ನು ಆಧರಿಸಿ ಯೋಜನೆ ರೂಪುರೇಷೆ ನಿರ್ಧರಿಸಬಹುದು ಎಂದು ಬ್ಯುಸಿನೆಸ್ ಡೆವಲಪ್ಮೆಂಟ್ ಕಾರ್ಯನಿರ್ವಾಹಕ ಸಂಕಿತ್ ಬಾಗರ್ ಮಾಹಿತಿ ನೀಡಿದರು.
ಈಗಿರುವ ವ್ಯವಸ್ಥೆಯಲ್ಲಿ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುತ್ತಿದೆ. ಆದರೆ, ಡ್ರೋನ್ನಲ್ಲಿ ಅಳವಡಿಸಿರುವ ಲೈಡಾರ್ನ ಲೇಸರ್ ಕಿರಣಗಳು ಭೂಗರ್ಭ ಹೊಕ್ಕು ಅಲ್ಲಿನ ವಸ್ತುಗಳನ್ನು ಪತ್ತೆಹಚ್ಚುತ್ತವೆ. ಇದಕ್ಕೆ ನಾಲ್ಕು ಚಕ್ರಗಳಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ಚಲಿಸುತ್ತದೆ, ನೀರಿನಲ್ಲೂ ಹರಿದಾಡುತ್ತದೆ. ಆಗಸದಲ್ಲಿ ಹಾರಾಟವನ್ನೂ ನಡೆಸುತ್ತದೆ.
ಸುಮಾರು 300 ಗ್ರಾಂ ಇದರ ತೂಕ. 600 ಮೀಟರ್ನಿಂದ ಒಂದು ಕಿ.ಮೀ. ಆಳದವರೆಗಿನ ಮಾಹಿತಿ ನೀಡುತ್ತದೆ. ಯೂರೋಪ್, ಅಮೆರಿಕ ಸೇರಿದಂತೆ ಹತ್ತಾರು ದೇಶಗಳಲ್ಲಿ ಇದು ಈಗಾಗಲೇ ಬಳಕೆಯಲ್ಲಿದೆ. ಭಾರತವನ್ನು ಇನ್ನೂ ಪ್ರವೇಶಿಸಿಲ್ಲ. ಈ ಸಂಬಂಧ ನಾಗರಿಕ ವಿಮಾನಯಾನದ ಮಹಾನಿರ್ದೇಶನಾಲಯದ ಅನುಮತಿ ಎದುರುನೋಡುತ್ತಿದ್ದೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್ ಕಾಂಚನ್ ಆಯ್ಕೆ
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್
Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.