ಮೊಗರ್ಪಣೆ ಸೇತುವೆ: ಶಿಥಿಲ ಮೇಲ್ಪದರ ದುರಸ್ತಿ
Team Udayavani, Dec 2, 2018, 12:05 PM IST
ಸುಳ್ಯ : ಮಾಣಿ-ಮೈಸೂರು ಹೆದ್ದಾರಿಯ ಮೊಗರ್ಪಣೆ ಸೇತುವೆ ಮೇಲ್ಪದರ ಶಿಥಿಲ ಸ್ಥಿತಿಯಿಂದ ಕೊನೆಗೂ ಮುಕ್ತಿ ಪಡೆದಿದೆ. ಶನಿವಾರ ಹೊಂಡ ಮುಚ್ಚುವ ದುರಸ್ತಿ ಕಾರ್ಯ ನಡೆಯಿತು. ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ಆಗಿ ಮೇಲ್ದರ್ಜೆಗೆ ಏರಿ ಕೆಲ ದಿನಗಳ ಹಿಂದೆ 275ಕ್ಕೆ ಅಧಿಕೃತವಾಗಿ ಸೇರ್ಪಡೆ ಗೊಂಡ ಬಳಿಕ ರಾಷ್ಟ್ರೀಯ ಹೆದ್ದಾರಿ ಇಲಾಖೆ ನೇತೃತ್ವದಲ್ಲಿ ಈ ದುರಸ್ತಿ ಕಾರ್ಯ ನಡೆದಿದೆ. ಮೇಲ್ಪದರಕ್ಕೆ ಡಾಮರು ಹಾಕಿ ಬಿರುಕು ಮುಚ್ಚಲಾಗಿದೆ. ಕೆಲ ಸಮಯಗಳ ಹಿಂದೆ ಸೇತುವೆ ಮೇಲೆ ಆರೇಳು ಭಾಗದಲ್ಲಿ ಬಿರುಕು ಬಿಟ್ಟು ಕಬ್ಬಿಣದ ಸರಳುಗಳು ಮೇಲೆದ್ದಿದ್ದವು. ಇದರಿಂದ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.
ರಸ್ತೆ ಹೊಂಡಕ್ಕೆ ತೇಪೆ
ಮಾಣಿ-ಸಂಪಾಜೆ ರಸ್ತೆಯ ಪೈಚಾರಿನಿಂದ ಗಾಂಧಿನಗರದ ತನಕ ರಸ್ತೆ ಹೊಂಡ ಮುಚ್ಚುವ ಕಾರ್ಯ ಭರದಿಂದ ಸಾಗಿದೆ. ಶುಕ್ರವಾರ ಪೈಚಾರು ಬಳಿ ಹೊಂಡ ಮುಚ್ಚಲಾಗಿತ್ತು. ಶನಿವಾರ ಎರಡನೇ ಹಂತದ ಡಾಮರು ಹಾಕುವ ಕಾರ್ಯ ಪೂರ್ಣಗೊಂಡಿದೆ. ಜ್ಯೋತಿ ಸರ್ಕಲ್ ಹಂಪ್, ಶ್ರೀರಾಮ ಪೇಟೆ, ಗಾಂಧಿನಗರ ಸಹಿತ ನಾನಾ ಕಡೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಇದೀಗ ಅಲೆಲ್ಲಾ ಹೊಂಡಕ್ಕೆ ತೇಪೆ ಹಾಕಲಾಗುತ್ತಿದೆ.
‘ಸುದಿನ’ ವರದಿ ಮಾಡಿತ್ತು
ಮೊಗರ್ಪಣೆ ಸೇತುವೆ ಅವ್ಯವಸ್ಥೆ ಬಗ್ಗೆ ಜು. 2ರಂದು ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಕೆಆರ್‌ಡಿಸಿಎಲ್ ಇಲಾಖೆ ಮರುದಿನವೇ ಮೇಲ್ಪದರ ಶಿಥಿಲ ಸ್ಥಳಕ್ಕೆ ಜಲ್ಲಿಮಿಶ್ರಿತ ಪರಿಕರ ತುಂಬಿಸಿ ತೇಪೆ ಕಾಮಗಾರಿ ಮಾಡಿತ್ತು. ಅದು ಒಂದೇ ವಾರದಲ್ಲಿ ಎದ್ದು ಹೋಗಿ ಕಾಮಗಾರಿ ಗಟ್ಟಿತನ ಬಹಿರಂಗಗೊಂಡಿತ್ತು.
ಅದಾದ ಬಳಿಕ ತೇಪೆ ಹಾಕುವ ಪ್ರಯತ್ನ ನಡೆಯಿತ್ತಾದರೂ ಅದು ನಿಲ್ಲಲಿಲ್ಲ. ವಿಪರೀತ ಮಳೆ ಕಾರಣ ಕಾಮಗಾರಿ ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಇಲಾಖೆ ದುರಸ್ತಿಯನ್ನು ಮುಂದೂಡಿತ್ತು. ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಸೇರ್ಪಡೆಗೊಂಡ ಅನಂತರ ನ. 16ರಂದು ‘ಮೊಗರ್ಪಣೆ ಸೇತುವೆ ಮೇಲ್ಪದರ ಮತ್ತಷ್ಟು ಶಿಥಿಲ’ ಎಂಬ ಬಗ್ಗೆ ಸುದಿನ ವರದಿ ಪ್ರಕಟಿಸಿತ್ತು. ಇದೀಗ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.