ತೆಲಂಗಾಣ ರಾಜ್ಯಪಾಲರ ಪೌರೋಹಿತ್ಯದಲ್ಲಿ ವಿವಾಹ
Team Udayavani, Dec 3, 2018, 6:55 AM IST
ಗಂಗಾವತಿ: ತೆಲಂಗಾಣ ರಾಜ್ಯಪಾಲರ ಸೂಚನೆಯಂತೆ ಸಮೀಪದ ವಿದ್ಯಾನಗರದ ಶ್ರೀರಾಮ ಮಂದಿರದಲ್ಲಿ ಪ್ರೇಮಿಗಳಾದ ನಿರಂಜನಿ ಮನ್ನೆ ಮತ್ತು ವೆಂಕಟ ಭಾರ್ಗವ್ ಅವರ ಮದುವೆ ಪೊಲೀಸರ ಬಿಗಿಭದ್ರತೆ ನಡುವೆ ಭಾನುವಾರ ನೆರವೇರಿತು.
ಸಿದ್ದಾಪೂರ ಗ್ರಾಮದ ನಿರಂಜನಿ ಮನ್ನೆ ಮತ್ತು ಉಳೇನೂರಿನ ವೆಂಕಟ ಭಾರ್ಗವ್ ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಪರಸ್ಪರ ಪರಿಚಯವಾಗಿದ್ದು, ಇದು ಪ್ರೇಮಕ್ಕೆ ತಿರುಗಿ ಮದುವೆ ಹಂತಕ್ಕೆ ಬಂದಿದೆ. ಮನೆಯವರು ಈ ಮದುವೆಗೆ ನಿರಾಕರಿಸಿದ್ದ ಸಂದರ್ಭದಲ್ಲಿ ಪ್ರೇಮಿಗಳು ಹೈದ್ರಾಬಾದ್‌ನ ಮಹಿಳಾ ಮಂಡಳಿಯ ನೆರವಿನಿಂದ ತೆಲಂಗಾಣ ರಾಜ್ಯಪಾಲ ನರಸಿಂಹನ್ ಅವರನ್ನು ಭೇಟಿಯಾಗಿ ಸಹಾಯ ಕೋರಿದ್ದರು. ರಾಜ್ಯಪಾಲ ನರಸಿಂಹನ್ ಅವರು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿ ಮದುವೆಯಾಗಲು ಸಹಕರಿಸುವಂತೆ ಸೂಚಿಸಿದ್ದರು. ಈ ಸಂದರ್ಭದಲ್ಲಿ ಯುವಕ, ಯುವತಿ ಕಡೆಯವರು ಪರಸ್ಪರ ಜಗಳವಾಡಿಕೊಂಡಿದ್ದರು. ತೆಲಂಗಾಣ ಪೊಲೀಸರು ಪ್ರೇಮಿಗಳನ್ನು ಕರೆತಂದು ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರಿಗೆ ಒಪ್ಪಿಸಿ, ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಭಾನುವಾರ ಬೆಳಗ್ಗೆ ವಿದ್ಯಾನಗರದ ಶ್ರೀರಾಮ ಮಂದಿರದಲ್ಲಿ ಪೊಲೀಸ್ ಬಿಗಿಭದ್ರತೆ ನಡುವೆ ವಿವಾಹ ಜರುಗಿತು. ಯುವಕನ ತಾಯಿ ಹೈದರಾಬಾದ್ ಮೂಲದವರು.
ಇಬ್ಬರು ವಯಸ್ಕರಾಗಿದ್ದರಿಂದ ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಯುವತಿ ಮನೆಯವರು ಒಪ್ಪುತ್ತಿಲ್ಲವಾದ್ದರಿಂದ ಮದುವೆಯ ಸಂದರ್ಭದಲ್ಲಿ ಗಲಾಟೆಯಾಗುವ ಸಂಭವ ಇರುವುದರಿಂದ ತಮಗೆ ಪೊಲೀಸ್ ಭದ್ರತೆ ನೀಡುವಂತೆ ಪ್ರೇಮಿಗಳಿಬ್ಬರು ಕೋರಿದ್ದರಿಂದ ಭದ್ರತೆ ನೀಡಲಾಗಿದೆ.
– ಸಂತೋಷ ಬನಹಟ್ಟಿ, ಡಿವೈಎಸ್‌ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್
Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.