ಫ್ಯಾಮಿಲಿ ಪ್ಯಾಕ್ “ಆರೆಂಜ್’
Team Udayavani, Dec 3, 2018, 11:15 AM IST
ಗಣೇಶ್ ಅಭಿನಯದ “ಚಮಕ್’ ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ಅವರ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಇದೀಗ “ಆರೆಂಜ್’ ರುಚಿ ಸವಿಯಲು ಅಭಿಮಾನಿಗಳು ಜೋಶ್‌ನಲ್ಲಿದ್ದಾರೆ. “ಜೂಮ್’ ಚಿತ್ರದ ಬಳಿಕ ಗಣೇಶ್ ಮತ್ತು ಪ್ರಶಾಂತ್‌ರಾಜ್ ಕಾಂಬಿನೇಶನ್‌ನ ಚಿತ್ರವಿದು. “ಆರೆಂಜ್’ ಬಿಡುಗಡೆಗೆ ಕೇವಲ ಬೆರಳೆಣಿಕೆ ದಿನಗಳಷ್ಟೇ ಬಾಕಿ. ಈ ಕುರಿತು ನಟ ಗಣೇಶ್ ಜೊತೆ ಒಂದು ಚಿಟ್‌ಚಾಟ್.
* ನಿಮ್ಮ “ಆರೆಂಜ್’ ಟೇಸ್ಟ್ ಹೇಗಿರುತ್ತೆ?
ಇದು ಪಕ್ಕಾ ಮನರಂಜನೆಯ ಚಿತ್ರ. “ಆರೆಂಜ್’ ಸಿಹಿಯಷ್ಟೇ ಸಿನಿಮಾದೊಳಗಿನ ಅಂಶಗಳೂ ಕೂಡ ರುಚಿಸುತ್ತದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್. ತುಂಬಾನೇ ಮಜವಾದಂತಹ ಫನ್ ಸಿಗುತ್ತದೆ. ಜೊತೆಗೆ ಎಮೋಶನಲ್ ಕೂಡ ಚಿತ್ರದಲ್ಲಿದೆ. ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಹ ಪ್ಯಾಕೇಜ್ ಈ ಆರೆಂಜ್. ಆರೆಂಜ್ ಜ್ಯೂಸ್ ಹೇಗೆ ಆರೋಗ್ಯಕ್ಕೆ ಒಳ್ಳೆಯಧ್ದೋ, ಹಾಗೆ, ಆರೆಂಜ್ ಚಿತ್ರ ಕೂಡ ಮನಸ್ಸಿಗೆ ಮುದ ನೀಡುತ್ತೆ ಎಂಬ ಗ್ಯಾರಂಟಿ ಕೊಡ್ತೀನಿ.
* ಮತ್ತೂಮ್ಮೆ ಹಿಟ್ ಕಾಂಬಿನೇಷನ್ ಒಟ್ಟಾಗಿದೀರಿ?
ಹೌದು, “ಜೂಮ್’ ಪಕ್ಕಾ ಮನರಂಜನೆಯಾಗಿ ಮೂಡಿಬಂದಿತ್ತು. ಅಲ್ಲಿ ಕಥೆ, ಸನ್ನಿವೇಶಗಳು ಎಲ್ಲರಿಗೂ ಇಷ್ಟವಾಗಿದ್ದವು. ಜನರು ಚಿತ್ರ ನೋಡಿ ಮೆಚ್ಚಿಕೊಂಡಿದ್ದರು. ಮತ್ತದೇ ಕಾಂಬಿನೇಶನ್‌ನಲ್ಲಿ ಈ ಚಿತ್ರ ಮಾಡಬೇಕು ಅಂದಾಗ, “ಜೂಮ್’ಗಿಂತಲೂ ಚೆನ್ನಾಗಿರುವ ಚಿತ್ರ ಕೊಡಬೇಕು ಎಂಬ ಜವಾಬ್ದಾರಿ ಇತ್ತು. ಅದು ಸಂಪೂರ್ಣಗೊಂಡಿರುವ ಚಿತ್ರವಿದು. ಅದೇ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಕೊಟ್ಟಿದೆ. ಸಾಮಾನ್ಯವಾಗಿ ಕಾಂಬಿನೇಶನ್ ಅಂದಾಗ, ಎಲ್ಲರಿಗೂ ಒಂದು ನಿರೀಕ್ಷೆ ಇದ್ದೇ ಇರುತ್ತೆ. ಸಕ್ಸಸ್ ಕೊಟ್ಟವರು ಇಲ್ಲೇನು ಮಾಡಬಹುದು ಎಂಬ ನಿರೀಕ್ಷೆ ಮತ್ತು ಪ್ರಶ್ನೆ ಸಹಜ. ಖಂಡಿತ ಆ ನಿರೀಕ್ಷೆ ಸುಳ್ಳಾಗೋದಿಲ್ಲ.
* ನಿಮಗೆ ಡಿಸೆಂಬರ್ ಅನ್ನೋದು ಅದೃಷ್ಟವಂತೆ ಹೌದಾ?
ಅದೇನೋ ಗೊತ್ತಿಲ್ಲ. ಡಿಸೆಂಬರ್‌ನಲ್ಲಿ ನನ್ನ ಅಭಿನಯದ ಐದಾರು ಚಿತ್ರಗಳು ಬಿಡುಗಡೆಯಾಗಿವೆ. ಅವೆಲ್ಲವೂ ಗೆಲುವು ಕೊಟ್ಟಿವೆ. ಹಾಗಾಗಿ, ಡಿಸೆಂಬರ್ ಗಣೇಶ್‌ಗೆ ಅದೃಷ್ಟದ ತಿಂಗಳು ಅಂತಾನೇ ಹೇಳುತ್ತಾರೆ. ಅದು ನಿಜಾ ಕೂಡ. ಇನ್ನೊಂದು ವಿಶೇಷವೆಂದರೆ, ಡಿಸೆಂಬರ್‌ನಲ್ಲಿ ಜನರ ಮೂಡ್ ಕೂಡ ಚೆನ್ನಾಗಿರುತ್ತೆ. ಯಾಕೆಂದರೆ, ವರ್ಷದ ಅಂತ್ಯ, ಹೊಸ ವರ್ಷದ ಆಗಮನ ಬೇರೆ. ಇದರ ಮಧ್ಯೆ ಖುಷಿಯೂ ಸೇರಿರುತ್ತದೆ. ವರ್ಷದ ಅಂತ್ಯದಲ್ಲಿ ಕ್ರಿಸ್‌ಮಸ್ ಹಬ್ಬ. ರಜಾಮಜಾ ಹೀಗೆ ಒಂದಷ್ಟು ಕಾರಣಗಳು ಸಿಗುವುದರಿಂದ ಡಿಸೆಂಬರ್‌ನಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಹಾಗೆ ನೋಡಿದರೆ, ಕಳೆದ ತಿಂಗಳೇ “ಆರೆಂಜ್’ ರಿಲೀಸ್ ಆಗಬೇಕಿತ್ತು. ಆಗಲಿಲ್ಲ. “ಚಮಕ್’ ನಂತರ ಚಿತ್ರ ಬರುತ್ತಿದೆ. ನನಗೂ ಸಹಜವಾಗಿ ಕುತೂಹಲವಿದೆ.
* ಆರೆಂಜ್ ಯಾವ ಕಾರಣಕ್ಕೆ ಇಷ್ಟವಾಗಬಹುದು?
ಮೊದಲಿಗೆ ಇದೊಂದು ಫ್ಯಾಮಿಲಿ ಎಂಟರ್‌ಟೈನರ್. ಎಲ್ಲರೂ ನೋಡಬಹುದಾದ ಚಿತ್ರ. ಎರಡನೆಯದು ಫ್ಯಾಮಿಲಿ ಮತ್ತು ಯೂತ್ಸ್ ಟಾರ್ಗೆಟ್ ಮಾಡಿ ಮಾಡಿದ ಚಿತ್ರ. ಮೂರನೆಯದು ಈಗಾಗಲೇ ಟ್ರೇಲರ್, ಹಾಡುಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. “ಗೋಲ್ಡ್ ಗೋಲ್ಡ್ ಟೈಟಲ್ ಟ್ರಾಕ್ ಸಾಂಗ್ ಹಿಟ್ ಆಗಿದೆ. ಸಿನಿಮಾಗೆ ಸಾಂಗ್ಸ್, ಟ್ರೇಲರ್ ಆಹ್ವಾನ ಪತ್ರಿಕೆ. ಹಾಗಾಗಿ, ಅದನ್ನು ನೋಡಿದವರಿಗೆ “ಆರೆಂಜ್’ ಸವಿಬೇಕೆಂಬ ಖುಷಿ ಇದ್ದೇ ಇರುತ್ತೆ. ಇನ್ನು, ಸಕ್ಸಸ್ ಕಾಂಬಿನೇಷನ್ ಚಿತ್ರ ಎಂಬುದು ನಂಬಿಕೆ ಹೆಚ್ಚಿಸಿದೆ. ಸ್ಕ್ರೀನ್‌ಪ್ಲೇ ಹೊಸದಾಗಿದೆ. ಕ್ಲೈಮ್ಯಾಕ್ಸ್ ತುಂಬಾನೇ ಇಷ್ಟ ಆಗುತ್ತೆ. ಮಧ್ಯಂತರದ ಹೊತ್ತಿಗೆ, ಆರೆಂಜ್ ಟೇಸ್ಟ್ ಹೊಸತಾಗಿದೆ ಎನಿಸುತ್ತದೆ.
* ನಿಮ್ಮ ಅಭಿಮಾನಿಗಳಿಗೆ ಏನೆಲ್ಲ ಇದೆ?
ನನ್ನ ಅಭಿಮಾನಿಗಳು ಬಯಸೋದು ಒಂದು ಫನ್. ಅದು ಮುಖ್ಯವಾಗಿ ಇಲ್ಲಿದೆ. ಉಳಿದಂತೆ ಕಚಗುಳಿ ಇಡುವ ಮಾತುಗಳಿವೆ. ಇವೆಲ್ಲದರ ಜೊತೆಗೆ ಆ್ಯಕ್ಷನ್ ಕೂಡ ಇಲ್ಲಿದೆ. ಆರಂಭದಲ್ಲೊಂದು ಹಾಡು ಬರುತ್ತೆ. ಅದು ಈಗಾಗಲೇ ಅಭಿಮಾನಿಗಳಿಗೆ ಇಷ್ಟವಾಗಿದೆ. ಚಿತ್ರದಲ್ಲೂ ಅದನ್ನು ನೋಡಿದರೆ, ಖಂಡಿತ ಅಭಿಮಾನಿಗಳು ಖುಷಿಪಡುತ್ತಾರೆ. ನಿರ್ದೇಶಕ ಪ್ರಶಾಂತ್‌ರಾಜ್ ಮತ್ತು ಸಂಗೀತ ನಿರ್ದೇಶಕ ತಮನ್ ಅವರಿಗೆ ಆ ಕ್ರೆಡಿಟ್ ಸೇರುತ್ತೆ.
* ಮುಂದಾ…?
ಸದ್ಯಕ್ಕೆ ಡಿಸೆಂಬರ್ 7 ರಂದು “ಆರೆಂಜ್’ ಬಿಡುಗಡೆಯಾಗುತ್ತಿದೆ. ಇನ್ನು, “ಗಿಮಿಕ್’ ಚಿತ್ರ ಕೂಡ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಅದು ಬಿಟ್ಟರೆ, ಒಂದಷ್ಟು ಕಥೆಗಳನ್ನು ಕೇಳಿದ್ದೇನೆ. ಕೆಲವು ಮಾತುಕತೆ ಆಗಬೇಕಿದೆ. ಉಳಿದಂತೆ, ನನ್ನದೇ ಬ್ಯಾನರ್‌ನಲ್ಲಿ ಬಹುನಿರೀಕ್ಷೆಯ “ಗೀತಾ’ ಚಿತ್ರ ಶುರುವಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dhruva Sarja ಮಾರ್ಟಿನ್ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್ ಮೆಹ್ತಾ
Case of Kondana; ‘ಖುಷಿ’ಗೆ ವಿಭಿನ್ನ ಪಾತ್ರದ ಮೇಲೆ ಭರ್ಜರಿ ನಿರೀಕ್ಷೆ…
Aradhana; ಕಾಟೇರಾದಲ್ಲಿ ನಾನು ಸ್ಟ್ರಾಂಗ್ ಗರ್ಲ್; ಮಾಲಾಶ್ರೀ ಪುತ್ರಿಯ ಗ್ರ್ಯಾಂಡ್ ಎಂಟ್ರಿ
ಪಂಜುರ್ಲಿ ಕೋಲದಲ್ಲಿ ದೈವ ಬಣ್ಣ ತೆಗೆದು ಪ್ರಸಾದ ನೀಡಿದ್ದು ಮರೆಯಲಾಗದ್ದು; ರಿಷಬ್ ಶೆಟ್ಟಿ
ಸಾರ್ವಜನಿಕರೇ ಆನ್‌ಲೈನ್ ಆಮಿಷಕ್ಕೆ ಮಾರುಹೋಗದಿರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.