ಅಮೆರಿಕ, ಚೀನ ನಡುವಿನ “ತೆರಿಗೆ ಸಮರ’ ಮುಂದಕ್ಕೆ
Team Udayavani, Dec 3, 2018, 12:30 PM IST
ಬ್ಯುನೋಸ್ ಏರ್ಸ್: ಜಗತ್ತಿನ ಎರಡು ದೈತ್ಯ ಆರ್ಥಿಕ ಶಕ್ತಿಗಳಾದ ಅಮೆರಿಕ, ಚೀನ ದೇಶಗಳ ನಡುವಿನ “ತೆರಿಗೆ ಸಮರ’ ತಾತ್ಕಾಲಿಕವಾಗಿ ಮುಂದಕ್ಕೆ ಹೋಗಿದೆ. ಜಿ-20 ಶೃಂಗಸಭೆಗಾಗಿ ಬ್ಯುನೋಸ್ ಐರಿಸ್‌ಗೆ ಆಗಮಿ ಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಸಭೆಯ ಬಳಿಕ ಶುಕ್ರವಾರ ರಾತ್ರಿ ನಡೆಸಿದ ಮಾತುಕತೆ ತಕ್ಕಮಟ್ಟಿಗೆ ಫಲಪ್ರದ ವಾಗಿದ್ದು, ಅಮೆರಿಕ ಪ್ರವೇಶಿಸುವ ಚೀನದ ಉತ್ಪನ್ನ ಗಳಿಗೆ ಮೇಲಿನ ತೆರಿಗೆ ಹೆಚ್ಚಿಸುವ ನಿರ್ಧಾರವನ್ನು 90 ದಿನಗಳ ಕಾಲ ಮುಂದೂಡಲು ಟ್ರಂಪ್ ನಿರ್ಧರಿಸಿದ್ದಾರೆ.
ಪ್ರತಿ ವರ್ಷ, ಅಮೆರಿಕ ಪ್ರವೇಶಿಸುವ ಚೀನದ ಉತ್ಪನ್ನಗಳಿಂದ ಅಂದಾಜು 14 ಲಕ್ಷ ಕೋಟಿ ರೂ.ಗಳಷ್ಟು ವಹಿವಾಟು ನಡೆಯುತ್ತದೆ. ಇದರ ಮೇಲೆ ಸದ್ಯಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಅದನ್ನು ಶೇ. 25ಕ್ಕೆ ಹೆಚ್ಚಿಸಲು ಟ್ರಂಪ್ ನಿರ್ಧರಿಸಿದ್ದರು. ಇದು ಜಾರಿ ಯಾದರೆ, ಚೀನಾ ಕೂಡ ತನ್ನ ನೆಲ ಪ್ರವೇಶಿಸುವ ಅಮೆರಿಕದ ಸಾಮಗ್ರಿಗಳಿಗೆ ದುಬಾರಿ ತೆರಿಗೆ ಹೇರಲು ನಿರ್ಧರಿಸಿತ್ತು. ಇದು ಜಾರಿಯಾಗಿದ್ದರೆ ಅದು ವಿಶ್ವದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.