ಶಾರದಾ ಪೀಠ ಪುನರಾರಂಭಿಸಿ: ಮೋದಿಗೆ ಮೆಹಬೂಬಾ ಪತ್ರ
Team Udayavani, Dec 3, 2018, 12:54 PM IST
ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಇರುವ ಶಾರದಾ ಪೀಠ ಕ್ಷೇತ್ರದ ಯಾತ್ರೆ ಪುನರಾರಂಭಿಸಬೇಕೆಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಇತ್ತೀಚೆಗೆ, ಪಾಕಿಸ್ಥಾನದ ಕರ್ತಾರ್ಪುರದಲ್ಲಿರುವ ಸಿಕ್ಖರ ಪುಣ್ಯಕ್ಷೇತ್ರಕ್ಕೆ ಭಾರತೀಯ ಭಕ್ತರು ಹೋಗಿಬರಲು ಅನುಕೂಲವಾಗುವಂಥ “ಕರ್ತಾ ರ್ಪುರ ಕಾರಿಡಾರ್ ಯೋಜನೆ’ಗೆ ಉಭಯ ದೇಶಗಳು ಚಾಲನೆ ನೀಡಿವೆ. ಹಾಗೆಯೇ, 7ನೇ ಶತಮಾನದಲ್ಲಿ ಆದಿ ಶಂಕರಾಚಾರ್ಯರಿಂದ ಸ್ಥಾಪಿತವಾಗಿರುವ, ಪಿಒಕೆಯಲ್ಲಿರುವ ಶಾರದಾ ಪೀಠಕ್ಕೆ ಹಿಂದೂಗಳು ಹೋಗಿಬರುವಂತೆ ಅನುಕೂಲ ಕಲ್ಪಿಸಬೇಕೆಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದೇ ವೇಳೆ, ಗಡಿ ನಿಯಂತ್ರಣ ರೇಖೆಯಿಂದ ಉಭಯ ದೇಶಗಳ ನಡುವಿನ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಎಲ್ಲಾ ಹೆದ್ದಾರಿಗಳನ್ನು ಪುನಃ ಸಂಚಾರಕ್ಕ ಮುಕ್ತವಾಗಿಸಬೇಕೆಂದು ಜಮ್ಮು ಕಾಶ್ಮೀರದ ಮತ್ತೂಬ್ಬ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೇಂದ್ರವನ್ನು ಆಗ್ರಹಿಸಿದ್ದಾರೆ. ಕರ್ತಾರ್ಪುರ ವಿಚಾರದಲ್ಲಿ ತೋರಿದ ಉತ್ಸಾÖವನ್ನೇ ಹೆದ್ದಾರಿ ಪುನರಾರಂಭ ವಿಚಾರದಲ್ಲೂ ತೋರಬೇಕೆಂದು ತಾಕೀತು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.