ಲೈಫ್ ಕ್ಯಾಮೆರಾ ಆ್ಯಕ್ಷನ್
Team Udayavani, Dec 4, 2018, 6:00 AM IST
ಗುಡ್ ಮಾರ್ನಿಂಗ್ ವಿಯೆಟ್ನಾಂ (1987)
ನಿರ್ದೇಶಕ: ಬ್ಯಾರ್ರಿ ಲೆವಿನ್ಸನ್
ಅವಧಿ: 121 ನಿಮಿಷ
ಇವತ್ತಿಗೂ ವಿಯೆಟ್ನಾಂ ಮಾತ್ರವೇ ಏಕೆ, ಜಗತ್ತಿನ ಸಿನಿಪ್ರೇಮಿಗಳಿಗೆ “ಗುಡ್ ಮಾರ್ನಿಂಗ್ ವಿಯೆಟ್ನಾಂ…’ ಎಂಬ ಸಾಲು ಕೇಳಿದರೆ, ಮೈಮನದಲ್ಲಿ ರೋಮಾಂಚನದ ಮಿಂಚೊಂದು ಹುಟ್ಟುತ್ತೆ. ಅದೊಂದು ಯುದ್ಧ. ಮುಂದೆ ಮಹಾ ಸೋಲು ಕಾದಿದೆ, ನಮ್ಮಿಂದ ಏನೂ ಆಗದು ಎಂದು ವಿಯೆಟ್ನಾಂ ಸೈನಿಕರೆಲ್ಲ ಬಸವಳಿದು ಕೂತಿರುತ್ತಾರೆ. ಮೇಜರ್, ತಾನು ಯಾವುದೋ ಪ್ರದೇಶದಲ್ಲಿ ಎಂದೋ ಕೇಳಿದ ವಿದೂಷಕನ ಸ್ವಭಾವದ ರೇಡಿಯೋ ಜಾಕಿಯನ್ನು ಕರೆತರುತ್ತಾನೆ. ಸೈನಿಕರನ್ನು ಹುರಿದುಂಬಿಸುವ ಹೊಣೆಯನ್ನು ಆತನಿಗೆ ವಹಿಸುತ್ತಾನೆ. ಆತ ನಿತ್ಯವೂ “ಗುಡ್ ಮಾರ್ನಿಂಗ್ ವಿಯೆಟ್ನಾಂ’ ಎನ್ನುವ ಮೂಲಕ, ಯುದ್ಧದ ವರ್ಣನೆಯಲ್ಲೂ ಹಾಸ್ಯಭಾವವನ್ನು ಬೆರೆಸಿ, ತನ್ನ ದೇಶದ ಸೈನಿಕರಿಗೆ ಧೈರ್ಯ ತುಂಬುತ್ತಿರುತ್ತಾನೆ. ಸಪ್ಪೆ ಆಗಿ, ಬದುಕಿನ ಆಸೆಯನ್ನೇ ತೊರೆದಿದ್ದ ಸೈನಿಕರ ಮೊಗಗಳು ಅರಳುತ್ತವೆ.
ಆದರೆ, ಕೆಲ ದಿನಗಳಲ್ಲೇ ಈತನ ಕಾಮೆಂಟರಿ ಧಾಟಿಯ ಮಾತುಗಳಿಗೆ ಕೆಲವು ಸೈನಿಕರಿಂದ ವಿರೋಧವೂ ಎದುರಾಗುತ್ತೆ. ರೇಡಿಯೋ ಜಾಕಿ, ತನ್ನ ಪ್ರೇಯಸಿಯನ್ನು ಹುಡುಕುತ್ತಾ, ಹಳ್ಳಿಗೆಲ್ಲೋ ಹೋದಾಗ, ಮತ್ತೆ ಸೈನಿಕರ ಒತ್ತಾಯದ ಮೇರೆಗೆ ಆತನನ್ನು ಕರೆಸಿಕೊಳ್ಳುತ್ತಾರೆ. ನೇರವಾಗಿ ಯುದ್ಧಭೂಮಿಯಲ್ಲೇ ಹೋಗಿ, ತನ್ನ ವಿದೂಷಕ ಮಾತುಗಳಿಂದ ಸೇನೆಯ ಗೆಲುವಿಗೆ ಕಾರಣನಾಗುತ್ತಾನೆ. ರೇಡಿಯೋ ಜಾಕಿಯಾಗಿ ನಟಿಸಿದ ರಾಬಿನ್ ವಿಲಿಯಮ್ಸ್, ನೋಡುಗನ ಬದುಕಿನುದ್ದಕ್ಕೂ ಕಾಡುವಂಥ, ಎಂಥ ಸಂದಿಗ್ಧತೆಯಲ್ಲೂ ಸ್ಫೂರ್ತಿಯಾಗಿ ಕಣ್ಮುಂದೆ ಬರುವಂತೆ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.