ಬಿಜೆಪಿಯ 2ನೇ ಹಂತದ ಹೋರಾಟ ಶುರು
Team Udayavani, Dec 4, 2018, 11:42 AM IST
ತಿರುವನಂತಪುರ: ಶಬರಿಮಲೆ ದೇಗುಲ ವಿಚಾರದಲ್ಲಿ ಕೇರಳದಲ್ಲಿನ ಎಲ್.ಡಿ.ಎಫ್. ಸರಕಾರಜನರ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, 2ನೇ ಹಂತದ ಹೋರಾಟವಾಗಿ ಕೇರಳ ವಿಧಾನಸಭೆ ಎದುರು ಸರಣಿ ಉಪವಾಸ ಮತ್ತು ಪ್ರತಿಭಟನೆಯನ್ನು ಆರಂಭಿಸಿದೆ. ಸೋಮವಾರ ಪಕ್ಷದ ನಾಯಕಿ ಸರೋಜ್ ಪಾಂಡೆ ಇದಕ್ಕೆ ಚಾಲನೆ ನೀಡಿದ್ದು, ಬಿಜೆಪಿ ನಾಯಕ ಎ.ಎನ್.ರಾಧಾಕೃಷ್ಣನ್ ನೇತೃತ್ವದಲ್ಲಿ ನಿರಶನ ಶುರುವಾಗಿದೆ. 14 ಜಿಲ್ಲೆಗಳ ನಾಯಕರು ಮತ್ತು ಕಾರ್ಯಕರ್ತರೂ ಇದರಲ್ಲಿ ಭಾಗಿಯಾಗಿದ್ದಾರೆ.
ತಿರುವನಂತಪುರದಲ್ಲಿ ನಿರಶನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಸಂಸದೆ ಸರೋಜ್ ಪಾಂಡೆ, ಶಬರಿಮಲೆ ವಿಚಾರವನ್ನು ಸಂಸತ್‌ನಲ್ಲಿ ಪ್ರಸ್ತಾವಿಸುತ್ತೇವೆ. ಚರ್ಚೆಗೆ ದಾರಿ ಯಾವತ್ತೂ ಮುಕ್ತವಾಗಿರಬೇಕು ಎಂದಿದ್ದಾರೆ. ಕೇರಳ ಸರಕಾರ ಶಬರಿಮಲೆ ವಿಚಾರವನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂದೂ ದೂರಿದ್ದಾರೆ.
ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ಮಾತನಾಡಿ ‘ಕೇರಳದಲ್ಲೀಗ ಅರಣ್ಯ ನ್ಯಾಯ ಪಾಲನೆಯಾಗುತ್ತಿದೆ. ಸಿಪಿಎಂನ ಸಂವಿಧಾನ ಪರಮೋಚ್ಚವಾದದ್ದಲ್ಲ. ಸಾರ್ವಕಾಲಿಕವಾಗಿ ಒಪ್ಪಿಕೊಂಡ ಭಾರತದ ಸಂವಿಧಾನವೇ ಶ್ರೇಷ್ಠವಾದದ್ದು’ ಎಂದರು. ಕೇರಳ ವಿಧಾನಸಭೆಯಲ್ಲಿಯೂ ಶಬರಿ ಮಲೆ ವಿವಾದ ಕೋಲಾಹಲಕ್ಕೆ ಕಾರಣವಾಗಿದೆ. ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಡುವೆ ವಾಗ್ವಾದ ನಡೆದಿದೆ. ಕಲಾಪ ಆರಂಭವಾಗುತ್ತಲೇ ಯುಡಿಎಫ್ನ ಮೂವರು ಶಾಸಕರು ಸದನದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸಿದರು.
ಶಾ ನಾಯಕರೇ?: ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಚೆನ್ನಿತ್ತಲ ವಿರುದ್ಧ ಹರಿಹಾಯ್ದು “ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಕಾಂಗ್ರೆಸ್ ನಾಯಕರು ವರ್ತಿಸುತ್ತಿದ್ದಾರೆ. ಅವರ ನಾಯಕ ರಾಹುಲ್ ಗಾಂಧಿಯೋ, ಅಮಿತ್ ಶಾ ಅವರೋ? ವಿಧಾನ ಸಭೆಯ ಹೊರಗೆ ಬಿಜೆಪಿ ನಾಯಕರು ಸತ್ಯಾಗ್ರಹ ನಡೆಸುವ ಘೋಷಣೆ ಮಾಡಿದಾಗಲೇ ಪ್ರತಿಪಕ್ಷ ಯುಡಿಎಫ್ ಶಾಸಕರು ಸದನದಲ್ಲಿ ನಿರಶನ ಘೋಷಿಸುತ್ತಾರೆ ಎಂದು ತಾವು ತಿಳಿದದ್ದು ಸರಿ ಎಂದಿದ್ದಾರೆ ಸಿಎಂ ಪಿಣರಾಯಿ. ಈ ಮಾತುಗಳಿಗೆ ವಿಪಕ್ಷ ಸದಸ್ಯರು ಕ್ರುದ್ಧಗೊಂಡು ಧರಣಿ ನಡೆಸಿ, ಬಳಿಕ ಸಭಾತ್ಯಾಗ ಮಾಡಿದರು.
ಬಂಗಾಲ ಕೊಲ್ಲಿಗೆ ಎಸೆಯುತ್ತೇವೆ: ಪ್ರಹ್ಲಾದ ಜೋಶಿ
ಧಾರವಾಡ ಕ್ಷೇತ್ರದ ಸಂಸದ ಪ್ರಹ್ಲಾದ್ ಜೋಶಿ, ಕೇರಳದಲ್ಲಿನ ಎಲ್‌ಡಿಎಫ್ ಸರಕಾರದಿಂದ ಶಬರಿಮಲೆಯ ಸಂಪ್ರದಾಯ ನಾಶವಾಗುತ್ತಿದೆ. ರಾಜ್ಯದ ಪರಿಸ್ಥಿತಿ ಅಧ್ಯಯನ ಮಾಡಿ, ಪಕ್ಷದ ಅಧ್ಯಕ್ಷ ಅಮಿತ್ ಶಾಗೆ ವರದಿ ಸಲ್ಲಿಸಲಿದ್ದೇವೆ ಎಂದಿದ್ದಾರೆ. ಬ್ರಿಟಿಷರ ಅವಧಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತೇ ಹೊರತು, ವಿವಿಧ ನಂಬಿಕೆಗಳನ್ನು ಹೊಂದಿದ ಭಕ್ತರ ವಿರುದ್ಧವಲ್ಲ ಎಂದಿದ್ದಾರೆ. ಜತೆಗೆ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಜತೆಗೆ ಐಪಿಎಸ್ ಅಧಿಕಾರಿ ಯತೀಶ್ ಚಂದ್ರ ಅನುಚಿತವಾಗಿ ವರ್ತಿಸಿದ್ದು ಖಂಡನೀಯ. ಅವರ ವಿರುದ್ಧ ಸಂಸತ್‌ನಲ್ಲಿ ಹಕ್ಕುಚ್ಯುತಿ ಮಂಡಿಸಲು ಸಚಿವರಿಗೆ ಮನವಿ ಮಾಡುವುದಾಗಿಯೂ ಹೇಳಿದ್ದಾರೆ. ಕೇರಳ ರಾಜ್ಯ ಸರಕಾರಇದೇ ರೀತಿಯ ಧೋರಣೆ ಅನುಸರಿಸುತ್ತಿದ್ದರೆ, ಅದನ್ನು ಕಿತ್ತು ಬಂಗಾಲ ಕೊಲ್ಲಿಗೆ ಎಸೆಯುತ್ತೇವೆ ಎಂದೂ ಜೋಶಿ ಎಚ್ಚರಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.