ಟೊಮೆಟೊ ಕೀ ಬಾತ್
Team Udayavani, Dec 5, 2018, 6:00 AM IST
ವರ್ಷ ಪೂರ್ತಿ ಅಡುಗೆಮನೆಯಲ್ಲಿ ಇರುವ, ಎಲ್ಲ ಹೆಂಗಳೆಯರ ಅಚ್ಚುಮೆಚ್ಚಿನ ತರಕಾರಿ ಟೊಮೆಟೊ. ಹಣ್ಣಿನಂತೆ ಕೆಂಪಾಗಿ ಇರುವ ಈ ತರಕಾರಿಯನ್ನು ಹಸಿಯಾಗಿ ಸೇವಿಸಿದರೂ ದೇಹಕ್ಕೆ ಒಳ್ಳೆಯದು. ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮೆಗ್ನೇಷಿಯಂ ಮುಂತಾದ ಲವಣಗಳನ್ನು, ಬಿ. 1, ಬಿ. 2, ಸಿ, ಎ ಮುಂತಾದ ವಿಟಮಿನ್‌ಗಳನ್ನು ಹೇರಳವಾಗಿ ಹೊಂದಿರುವ ಟೊಮೆಟೊ, ಉತ್ತಮ ಸೌಂದರ್ಯವರ್ಧಕವೂ ಹೌದು.
• ಚೆನ್ನಾಗಿ ಹಣ್ಣಾದ ಟೊಮೆಟೊವನ್ನು ಅರ್ಧಕ್ಕೆ ಕತ್ತರಿಸಿ, ಅದರಿಂದ ಮುಖಕ್ಕೆ ಮಸಾಜ್ ಮಾಡಿದರೆ, ತ್ವಚೆ ಕೋಮಲವಾಗಿ, ಮುಖದ ಕಾಂತಿ ಹೆಚ್ಚುತ್ತದೆ.
• ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಇಡೀ ಟೊಮೆಟೊ ಹಣ್ಣನ್ನು ಸೇವಿಸಿದರೆ ತೂಕ ಕಡಿಮೆಯಾಗುತ್ತದೆ.
• ಟೊಮೆಟೊ ಹಣ್ಣಿನ ರಸಕ್ಕೆ ಜೇನುತುಪ್ಪ ಬೆರೆಸಿ ಮುಖಕ್ಕೆ ಲೇಪಿಸಿದರೆ ಚರ್ಮದ ಕಪ್ಪು ಕಲೆಗಳು ಮಾಯವಾಗುತ್ತವೆ.
• ಟೊಮೆಟೊ ಹಣ್ಣನ್ನು ಉರುಟಾಗಿ ಕತ್ತರಿಸಿ, ಕಣ್ಣಿನ ಮೇಲೆ ಅರ್ಧ ಗಂಟೆ ಇಟ್ಟುಕೊಂಡರೆ ಕಣ್ಣುರಿ ಕಡಿಮೆಯಾಗುತ್ತದೆ ಹಾಗೂ ಸುತ್ತಲಿನ ಕಪ್ಪು ವರ್ತುಲ ನಿವಾರಣೆಯಾಗುತ್ತದೆ.
• ಚಳಿಗಾಲದಲ್ಲಿ ಕಾಲು ಒಡೆದು, ಬಿರುಕು ಬಿಟ್ಟಿದ್ದರೆ, ಉಪ್ಪು ಬೆರೆಸಿದ ನೀರಲ್ಲಿ ಹತ್ತು ನಿಮಿಷ ಕಾಲನ್ನಿಟ್ಟು, ನಂತರ ಟೊಮೆಟೊ ರಸ, ಅರಿಶಿನ ಹಾಗೂ ಕೊಬ್ಬರಿ ಎಣ್ಣೆ ಲೇಪಿಸಿ ತಿಕ್ಕಬೇಕು.
• ಹಸಿ ಟೊಮೆಟೊ ಸೇವನೆಯಿಂದ, ದೇಹದಲ್ಲಿ ವಿಟಮಿನ್ ಸಿ ಹೆಚ್ಚಾಗಿ, ಚಳಿಗಾಲದಲ್ಲಿ ತುಟಿ ಒಡೆಯುವುದಿಲ್ಲ.
• ಬೇಸಿಗೆಯಲ್ಲಿ ಟೊಮೆಟೊ ರಸ ಹಾಗೂ ಮೊಸರನ್ನು ಒಟ್ಟಿಗೆ ಸೇರಿಸಿ, ಸೇವಿಸಿದರೆ ಚರ್ಮದ ಆರೋಗ್ಯ ಹೆಚ್ಚುತ್ತದೆ.
• ಟೊಮೆಟೊವನ್ನು ಬೇಯಿಸಿ, ಕಿವುಚಿ, ಅದಕ್ಕೆ ತುಳಸಿ ರಸ ಹಾಗೂ ಪನ್ನೀರು ಸೇರಿಸಿ ಮುಖಕ್ಕೆ ಲೇಪಿಸಿದರೆ ಸೌಂದರ್ಯ ಹೆಚ್ಚುತ್ತದೆ.
ಹರ್ಷಿತಾ ಕುಲಾಲ… ಕಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.