ಲೇಡಿಗೋಶನ್ ಆಸ್ಪತ್ರೆಗೆ 5.7 ಕೋಟಿ ರೂ. ಮಂಜೂರು
Team Udayavani, Dec 6, 2018, 10:56 AM IST
ಮಂಗಳೂರು: ವರ್ಷಕ್ಕೆ ಸುಮಾರು ಆರು ಸಾವಿರ ಶಿಶುಗಳು ಜನಿಸುವ ನಗರದ ಸರಕಾರಿ ಲೇಡಿ ಗೋಶನ್ ಆಸ್ಪತ್ರೆಗೆ ಮೂಲಸೌಲಭ್ಯ ಒದಗಿಸಿ ಎಂದು ವೈದ್ಯರೊಬ್ಬರು ಮಾಡಿದ ಮನವಿಗೆ ಸ್ಪಂದಿಸಿದ ಜನಪ್ರತಿ ನಿಧಿಗಳು ಹೆಚ್ಚುವರಿ ಆರ್ಥಿಕ ಸಹಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಂತ್ರಗಳು, ಪೀಠೊಪಕರಣ ಖರೀದಿಗೆ ಎಂಆರ್‌ಪಿಎಲ್-ಒಎನ್‌ಜಿಸಿ ಕಂಪೆನಿ ಯಿಂದ 5.7 ಕೋಟಿ ರೂ. ಹೆಚ್ಚುವರಿ ಹಣ ಮಂಜೂರಾಗಿದೆ.
ಆಸ್ಪತ್ರೆಯ ಎನ್‌ಐಸಿಯು ವಿಭಾಗದಲ್ಲಿ ಯಂತ್ರೋಪಕರಣಗಳ ಕೊರತೆಯಿಂದಾಗಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ. ವರ್ಷಕ್ಕೆ ಕನಿಷ್ಠ ಆರು ಸಾವಿರ ಶಿಶುಗಳು ಈ ಆಸ್ಪತ್ರೆಯಲ್ಲಿ ಜನ್ಮ ಪಡೆಯುತ್ತಿದ್ದು, ಶೀಘ್ರ ಆಸ್ಪತ್ರೆಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಯೋಜಿಸಬೇಕು ಎಂದು ವೈದ್ಯರಾದ ಡಾ| ಕಿರಣ್ ಬಾಳಿಗಾ ಅವರು ಶಾಸಕ ಡಿ. ವೇದವ್ಯಾಸ ಕಾಮತ್ ಅವರಿಗೆ ಕೆಲವು ದಿನಗಳ ಹಿಂದೆ ವಾಟ್ಸ್ ಆಪ್ ಸಂದೇಶ ರವಾನಿಸಿದ್ದರು. ಈ ಬಗ್ಗೆ ಖುದ್ದು ಮಾತನಾಡಿ, ಸಮಸ್ಯೆಗಳನ್ನು ವಿವರಿಸುವಂತೆ ಶಾಸಕರು ಮರು ಸಂದೇಶ ಕಳುಹಿಸಿದ್ದರು. ಬಳಿಕ ಡಾ| ಕಿರಣ್ ಬಾಳಿಗಾ ಅವರು ಶಾಸಕರನ್ನು ಸಂಪರ್ಕಿಸಿ ತಿಳಿಸಿದ್ದರು. ತತ್‌ಕ್ಷಣವೇ ಸ್ಪಂದಿಸಿದ ಶಾಸಕರು ಹಾಗೂ ಸಂಸದರು, ಎಂಆರ್‌ಪಿಎಲ್-ಒಎನ್‌ಜಿಸಿ ಕಂಪೆನಿಗೆ ಲಿಖೀತವಾಗಿ ಮನವಿ ಮಾಡಿ ಆಸ್ಪತ್ರೆಗೆ ಹೆಚ್ಚುವರಿ ಆರ್ಥಿಕ ಸಹಾಯ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಂಆರ್‌ಪಿಎಲ್- ಒನ್‌ಜಿಸಿ ಕಂಪೆನಿಯು ಲೇಡಿಗೋಶನ್ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ತನ್ನ ಸಿಆರ್‌ಎಸ್ ನಿಧಿಯಡಿ ಹಣ ನೀಡಿತ್ತು. ಆದರೆ ಅಲ್ಲಿ ಮೂಲ ಅಗತ್ಯಗಳಾದ ಯಂತ್ರೋಪಕರಣಗಳು ಮತ್ತು ಪೀಠೊಪಕರಣಗಳ ಖರೀದಿಗೆ ಆರ್ಥಿಕ ಸಂಪನ್ಮೂಲದ ಆವಶ್ಯಕತೆ ಇತ್ತು. ಅದರಿಂದ ವೈದ್ಯಾಧಿಕಾರಿಗಳು ಮತ್ತು ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.