ಪ್ರಾಥಮಿಕ ಶಾಲೆಗೆ ಸಿಇಒ ಭೇಟಿ
Team Udayavani, Dec 6, 2018, 3:00 PM IST
ಶಹಾಪುರ: ವಿದ್ಯಾರ್ಥಿಗಳ ವಿಕಾಸಕ್ಕೆ ಅವರಲ್ಲಿ ಮೌಲ್ಯಯುಕ್ತ ಗುಣ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಈ ದಿಸೆಯಲ್ಲಿ ನಿರಂತರ ಪ್ರಯತ್ನ ಅಗತ್ಯವೆಂದು ಜಿಪಂ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದರು.
ಗಾಂಧಿ ಚೌಕ್ ಬಡಾವಣೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಶಾಲಾ ತರಗತಿ ವೀಕ್ಷಿಸಿದರು. ಅಲ್ಲದೆ ವಿದ್ಯಾರ್ಥಿಗಳಿಗೆ ಹಲವು ಪ್ರಶ್ನೆ ಕೇಳಿದರು. ವರ್ಗ ಕೋಣೆಯಲ್ಲಿನ ಮಾಹಿತಿ ಪಟಗಳನ್ನು ವೀಕ್ಷಿಸಿದರು. ಕಪ್ಪು ಹಲಗೆ ಹೆಚ್ಚಾಗಿ ಬಳಸಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಸಿ.ಆರ್.ಸಿ, ಜಗಧೀಶ ಗೋಟ್ಲಾ, ಸಿರಾಜ್.ಕೆ. ಮುಖ್ಯಗುರು ಮಲ್ಕಪ್ಪ ಮತ್ತು ಶಿಕ್ಷಕರು ಇದ್ದರು.
ಶಿಸ್ತು ಕಾಣದಿದ್ದರೆ ಕಠಿಣ ಕ್ರಮ ಪಟ್ಟಣದ ದೇವಿ ನಗರದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ಜಿಪಂ ಸಿಇಒ ಕವಿತಾ ಮನ್ನಿಕೇರಿ ಅವರು, ಅಂಗನವಾಡಿ ಕೇಂದ್ರ ಪರಿಶೀಲನೆ ನಡೆಸಿದರು. ಕೇಂದ್ರದಲ್ಲಿ ಒಟ್ಟು ಮಕ್ಕಳ ಸಂಖ್ಯೆ 28 ಇದ್ದು, ಅದರಲ್ಲಿ 15 ಮಕ್ಕಳು ಹಾಜರಿರುವುದು ಕಂಡು ಬಂತು. ಅಲ್ಲದೆ ಅಪೌಷ್ಟಿಕತೆ ಹೊಂದಿದ ಮಕ್ಕಳೆಷ್ಟಿದ್ದಾರೆ ಎಂದು ಕೇಳಿದರು. ಅಪೌಷ್ಟಿಕತೆಯಿದ ಕೂಡಿರುವ ಯಾವುದೇ ಮಕ್ಕಳಿಲ್ಲ ಎಂದು ಶಿಕ್ಷಕಿ ಉತ್ತರಿಸಿದರು.
ಮುಖ್ಯವಾಗಿ ಮಕ್ಕಳಲ್ಲಿ ಶಿಸ್ತು ರೂಢಿಸಿ, ಶೈಕ್ಷಣಿಕವಾಗಿ ಬೆಳೆಯಲು ಶಿಸ್ತು ಮುಖ್ಯ. ನೀವು ಸಮವಸ್ತ್ರ ಧರಿಸಿ ಶಿಸ್ತಿನಿಂದ ಮಕ್ಕಳಿಗೂ ಕಲಿಸಿ ಎಂದು ಸಲಹೆ ನೀಡಿದರು. ಯಾವೊಂದು ಮಗುವು ಅಪೌಷ್ಟಿಕತೆಯಿಂದ ಕೂಡಿರಬಾರದು. ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ತಿಳಿಸಿದರು. ಇನ್ಮುಂದೆ ಸಮರ್ಪಕವಾಗಿ ಕೇಂದ್ರದಲ್ಲಿ ಶಿಸ್ತು ಕಂಡು ಬರದಿದ್ದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.