ಶ್ರೀದಿಶ್ ಪೂಜಾರಿಯ ವೈದ್ಯಕೀಯ ಚಿಕಿತ್ಸೆಯ ಆರ್ಥಿಕ ನೆರವಿಗಾಗಿ ಮನವಿ
Team Udayavani, Dec 6, 2018, 5:14 PM IST
ಮುಂಬಯಿ: ಅಂಧೇರಿ ಪೂರ್ವದ ಕೊಂಡಿವಿಟಾ ಶ್ರೀ ರಾಮಕೃಷ್ಣ ಮಂದಿರ ಸಮೀಪದ ಲತೀಫ್ ಕಾಂಪೌಂಡ್ ನಿವಾಸಿ, ಸೈಂಟ್ ಜೋನ್ ಕಾಲೇಜ್ ಮರೋಲ್ ಇಲ್ಲಿ ಈಗಾಗಲೇ ಎಚ್‌ಎಸ್‌ಸಿ ಪೂರೈಸಿರುವ 18ರ ಹರೆಯದ ಶ್ರೀದಿಶ್ ಪೂಜಾರಿ ಇವರು ಆಕಸ್ಮಿಕವಾಗಿ ಹೈಪೆರಕ್ಯೂಟ್ ಇಂಫಾಕ್ಟ್ ಭೀಕರ ಕಾಯಿಲೆಯಿಂದ ಬಳಲುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಪ್ರಸ್ತುತ ಅಂಧೇರಿ ಪೂರ್ವದ ಹೋಲಿ ಸ್ಪಿರಿಟ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯಕಾರಿ ಶಸ್ತ್ರಕ್ರಿಯೆ ಹಾಗೂ ಚಿಕಿತ್ಸೆಗೆ ಸುಮಾರು 12 ಲಕ್ಷ ರೂ. ಖರ್ಚಾಗಲಿದೆ ಎಂದು ವೈದ್ಯರು ತಿಳಿಸಿ¨ªಾರೆ. ಶ್ರೀದಿಶ್ ಅವರ ತಂದೆ ಬಾಕೂìರು ಭಾಸ್ಕರ್ ಪೂಜಾರಿ ಅವರು ರಿûಾ ಚಾಲಕರಾಗಿ ದುಡಿಯುತ್ತಿದ್ದು, ಮಗಳು ಶ್ರೀನಿಧಿ ಪೂಜಾರಿ ಉನ್ನತ ಶಿಕ್ಷಣವನ್ನು ಇನ್ನಷ್ಟೇ ಪೂರ್ಣಗೊಳಿಸಬೇಕಾಗಿದೆ. ಆರ್ಥಿಕವಾಗಿ ಯಾವುದೇ ಆದಾಯವನ್ನು ಹೊಂದಿರದ ಕುಟುಂಬವು ಇಷ್ಟೊಂದು ಮೊತ್ತವನ್ನು ಭರಿಸಲಾಗದೆ ಕಂಗೆಟ್ಟಿದ್ದಾರೆ.
ಈಗಾಗಲೇ ಸಹೋದರಿ ಶ್ರೀನಿಧಿ ತನ್ನ ತಮ್ಮನ ಶಸ್ತ್ರಚಿಕಿತ್ಸೆಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆರ್ಥಿಕ ನೆರವಿಗಾಗಿ ಮನವಿ ಮಾಡಿಕೊಂಡಿದ್ದು ಕೆಲವು ಸಹೃದಯಿಗಳು ಕಿಂಚಿತ್ ಸ್ಪಂದನೆ ನೀಡಿ¨ªಾರೆ. ದೊಡ್ಡ ಮೊತ್ತದ ಚಿಕಿತ್ಸೆಯಾದ್ದರಿಂದ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿರುವ ಶ್ರೀದಿಶ್‌ಗೆ ತುಳು ಕನ್ನಡಿಗರೆಲ್ಲರ ಸಹಾಯ ಹಸ್ತದ ಅಗತ್ಯವಿದೆ. ಆರ್ಥಿಕವಾಗಿ ಸಹಕರಿಸಲಿಚ್ಛಿಸುವ ದಾನಿಗಳು ಮತ್ತು ಸಂಘ-ಸಂಸ್ಥೆಗಳು ಶ್ರೀನಿಧಿ ಪೂಜಾರಿ, ಭಾರತ್ ಬ್ಯಾಂಕ್, ಖಾತೆ ಕ್ರಮಾಂಕ 006810100011554, ಐಎಫ್‌ಎಸ್‌ಸಿ ಕೋಡ್: ಬಿಸಿಬಿಎಂ 0000069 ಇಲ್ಲಿಗೆ ಜಮಾವಣೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ 9594552966 ಈ ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.