ಜ್ಯೋತಿ ಕ್ರೆಡಿಟ್ ಸೊಸೈಟಿಯ ಪುಣೆ ಶಾಖೆ ಲೋಕಾರ್ಪಣೆ
Team Udayavani, Dec 6, 2018, 5:19 PM IST
ಪುಣೆ: ಒಂದು ಸಮಾಜದ ಸಂಘಟನೆ ಹಾಗೂ ಅದರ ಉಪ ಸಂಸ್ಥೆ ಬೆರೆತುಕೊಂಡು ಕಾರ್ಯನಿರ್ವಹಿಸಿದಾಗ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಂದು ಮುಂಬಯಿಯ ಕುಲಾಲ ಸಂಘ ಪ್ರಾಯೋಜಿತ ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಮುಂಬ ಯಿ ಇದರ ಶಾಖೆ ಪುಣೆಯಲ್ಲಿ ಪ್ರಾರಂಭ ಗೊಂಡಿರುವುದು ಸಂತೋಷದ ವಿಷಯ. ತನ್ನ ಸಮಾಜ ಬಾಂಧವರ ಅಭಿವೃದ್ಧಿಯ ದೃಷ್ಟಿ ಮತ್ತು ಸಂಘಟನೆಯ ಬಲವೃದ್ಧಿಗೆ ಪೂರ ಕವಾಗಿ ಕಾರ್ಯವೆಸಗುತ್ತಿರುವ ಜ್ಯೋತಿ ಕೋ. ಆಪರೇಟಿವ್ ಸಂಸ್ಥೆಯ ಬೆಳವಣಿಗೆಯಲ್ಲಿ ನಾವೆಲ್ಲರೂ ಸಹಕಾರವನ್ನು ನೀಡಬೇಕು. ಜ್ಯೋತಿ ಸೊಸೈಟಿ ಜನರ ಕಷ್ಟಗಳಿಗೆ ಬೆಳಕಾಗಿ, ಜೀವನವನ್ನು ಪ್ರಕಾಶಮಾನವಾಗಿ ಬೆಳಗಿ ಜನಸಾಮಾನ್ಯರ ಬದುಕಿಗೆ ದಾರಿ ದೀಪವಾಗಲಿ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿ ಶುಭ ಹಾರೈಸಿದರು.
ಡಿ. 2 ರಂದು ಕುಲಾಲ ಸಂಘ ಮುಂಬಯಿ ಪ್ರಾಯೋಜಿತ ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಮುಂಬಯಿ ಇದರ 6ನೇ ನೂತನ ಪುಣೆಯ ಕಾತ್ರಜ್ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ನಮ್ಮಲ್ಲಿಯ ವಿಚಾರಧಾರೆಗಳನ್ನು, ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅರ್ಥಿಕ ಸಂಪನ್ಮೂಲದ ಅವಶ್ಯಕತೆ ತೋರಿದಾಗ ವಿಶ್ವಾಸವನ್ನಿಟ್ಟು ಸಹಕರಿಸುವ ಜ್ಯೋತಿ ಕ್ರೆಡಿಟ್ ಸೊಸೈಟಿಯ ಸರ್ವ ಯೋಜನೆಗಳನ್ನು ಎಲ್ಲರು ಪಡೆದುಕೊಳ್ಳಬೇಕು. ಪುಣೆಯಲ್ಲಿ ನಿರ್ಮಾ ಣವಾದ ನಮ್ಮ ಬಂಟರ ಸಂಘದ ಭವನವು ಕೂಡಾ ತುಳು ಭಾಂದವರಿಗೆ ಯಾವುದೇ ರೀತಿಯ ಸಭೆ ಸಮಾರಂಭಗಳಿಗೆ ನಮ್ಮಿಂದ ಆಗುವಂಥ ಸಹಕಾರವನ್ನು ನೀಡಲು ಸಿದ್ಧವಿದೆ. ಇಂದು ನನ್ನನ್ನು ಸಮ್ಮಾನಿಸಿ ಗೌರವಿಸಿದ ಜ್ಯೋತಿ ಸೊಸೈಟಿಯ ಭವಿಷ್ಯ ಉಜ್ವಲಗೊಳ್ಳಲಿ ಎಂದರು.
ಜ್ಯೋತಿ ಕೋ. ಆಪರೇಟಿವ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್, ಪುಣೆ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ಮುಂಡ್ಕೂರು, ಅಥಿತಿಗಳಾಗಿ ಆಗಮಿಸಿದ ಪುಣೆ ಶ್ರೀ ಗುರುದೇವ ಸೇವಾ ಬಳಗದ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಡಿ. ಶೆಟ್ಟಿ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಶೇಖರ್ ಪೂಜಾರಿ, ಪುಣೆ ರೆಸ್ಟೋರೆಂಟ್ ಅÂಂಡ್ ಹೊಟೇಲಿಯರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ವಸಂತ್ ಶೆಟ್ಟಿ, ಪುಣೆ ಕುಲಾಲ ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಉಡುಪಿ, ಪಿಂಪ್ರಿ-ಚಿಂಚಾÌಡ್ ಕುಲಾಲ ಸಂಘದ ಸ್ಥಾಪಕ ಅಧ್ಯಕ್ಷ ಅಪ್ಪು ಮೂಲ್ಯ, ಜ್ಯೋತಿ ಕೋ. ಆಪರೇಟಿವ್ ಸೊಸೈಟಿಯ ಉಪ ಕಾರ್ಯಾಧ್ಯಕ್ಷ ಶೇಖರ್ ಮೂಲ್ಯ, ಪುಣೆ ದೇವಾಡಿಗ ಸಂಘದ ಅಧ್ಯಕ್ಷ ನಾರಾಯಣ ದೇವಾಡಿಗ, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್, ಮುಂಬಯಿ ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ, ಅಮೂಲ್ಯ ಮಾಸಿಕದ ಸಂಪಾದಕ ಶಂಕರ್ ಮೂಲ್ಯ ಅವರು ಉಪಸ್ಥಿತರಿದ್ದರು. ಅತಿಥಿ-ಗಣ್ಯರನ್ನು ಕಾರ್ಯಾ ಧ್ಯಕ್ಷ ಗಿರೀಶ್ ಸಾಲ್ಯಾನ್ ಅವರು ಸತ್ಕರಿಸಿದರು. ಪುಣೆಯ ಮತ್ತು ಮುಂಬಯಿ ಯಿಂದ ಆಗಮಿ ಸಿದ ಕುಲಾಲ ಸಂಘ ಮತ್ತು ಸೊಸೈಟಿಯ ಪದಾಧಿಕಾರಿಗಳನ್ನು ಗೌರವಿಸಲಾಯಿತು.
ಜ್ಯೋತಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್ ಅವರು ಮಾತನಾಡಿ, ಕುಲಾಲ ಸಮಾಜದ ಈ ಆರ್ಥಿಕ ಸಂಸ್ಥೆ 37 ವರ್ಷಗಳ ಹಿಂದೆ ಮುಂಬಯಿಯಲ್ಲಿ ಪ್ರಾರಂಭಗೊಂಡು ಇದೀಗ ಮಹಾನಗರ ಬಿಟ್ಟು ಹೊರಗೆ ಮೊದಲ ಬಾರಿಗೆ ಪುಣೆಯಲ್ಲಿ 6 ನೇ ಶಾಖೆಯೊಂದಿಗೆ ಕಾರ್ಯಾರಂಭ ಮಾಡಿದೆ. ಇಂದು ಸೇರಿದ ಗಣ್ಯರು, ಸಮಾಜ ಬಾಂಧವರು ನುಡಿದ ಮಾತು, ಅನಿಸಿಕೆಗಳನ್ನು ಗಮನಿಸಿದಾಗ ನಮ್ಮ ಲೆಕ್ಕಚಾರಕ್ಕಿಂತಲೂ ಹೆಚ್ಚಿನ ವ್ಯವಹಾರ ನಡೆಸಿಕೊಡುವಂತಹ ಭರವಸೆ ನಮಗೆ ಸಿಕ್ಕಿದೆ. ನಿಮ್ಮೆಲ್ಲರ ಸಹಕಾರದಿಂದ ಸಂಸ್ಥೆಯು ಅಭಿವೃದ್ಧಿಯತ್ತ ಸಾಗಲಿ ಎಂದರು.
ಮುಂಬಯಿ ಕುಲಾಲ ಸಂಘದ ಅಧ್ಯಕ್ಷ ದೇವದಾಸ್ ಕುಲಾಲ್ ಮಾತನಾಡಿ, ಸಂಸ್ಥೆಯನ್ನು ಪುಣೆಯಲ್ಲಿ ಪ್ರಾರಂಭಿಸುವ ನಮ್ಮ ಪ್ರಯತ್ನಕ್ಕೆ ಪುಣೆ ಕುಲಾಲ ಸಂಘದ ಅಧ್ಯಕ್ಷ ಹರೀಶ್ ಕುಲಾಲ ಮತ್ತು ಪದಾಧಿಕಾರಿಗಳು, ತುಳು ಕನ್ನಡಿಗರು ತುಂಬು ಹೃದಯದ ಸಹಕಾರ ನೀಡಿದ್ದೀರಿ. ಸೊಸೈಟಿಯ ವ್ಯವಹಾರ ಅಭಿವೃದ್ದಿಯಲ್ಲಿ ತಮ್ಮೆಲ್ಲರ ಇನ್ನು ಹೆಚ್ಚಿನ ಸಹಕಾರ ನಮಗೆ ಬೇಕಿದೆ ಎಂದು ಆಶೀಸಿದರು.
ಪುಣೆ ಕುಲಾಲ ಸಂಘದ ಅಧ್ಯಕ್ಷರಾದ ಹರೀಶ್ ಕುಲಾಲ್ ಮಾತನಾಡಿ, ಪುಣೆಯಲ್ಲಿ ವ್ಯವಹಾರ ಪ್ರಾರಂಭಿಸಿರುವ ನಮ್ಮ ಕುಲಾಲ ಸಮಾಜದ ಈ ಆರ್ಥಿಕ ಸಂಸ್ಥೆಯ ಯಶಸ್ಸಿಗೆ ಬೇಕಾದಂತಹ ಮಾನವ ಸಂಪಲನ್ಮೂಲವನ್ನು ಒಟ್ಟುಗೂಡಿಸಿ ಅರ್ಥಿಕ ಕಾರ್ಯ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಮಾಡುವಂತಹ ಕರ್ತವ್ಯ ನಮ್ಮದು. ಪುಣೆಯ ಎಲ್ಲ ಸಮಾಜದ ಗಣ್ಯರು, ತುಳು ಕನ್ನಡಿಗರ ಸಹಕಾರ ಸಿಗುತ್ತದೆ ಎಂಬ ಭರವಸೆ ನಮ್ಮದು ಎಂದು ಹೇಳಿದರು.
ಪುಣೆ ಕುಲಾಲ ಸಂಘದ ಗೌರಾವಾಧ್ಯಕ್ಷ ವಿಶ್ವನಾಥ್ ಉಡುಪಿ ಮಾತನಾಡಿ, ಸೊಸೈಟಿಯ ಆಡಳಿತ ಮಂಡಳಿಯ ಅಂದಾಜು ವ್ಯವಹಾ ರಕ್ಕಿಂತಲೂ ಹೆಚ್ಚಿನ ವ್ಯವಹಾರ ಆಗುವಂತೆ ನಾವೆಲ್ಲ ಕಾರ್ಯಪ್ರವೃತ್ತರಾಗಬೇಕು. ಹಾಗೆಯೇ ಪುಣೆ ಕುಲಾಲ ಸಂಘಕ್ಕೆ ಸ್ವಂತ ಭವನದ ನಿರ್ಮಾಣಕ್ಕೆ ಸಹಕಾರವನ್ನು ಈ ಸೊಸೈಟಿಯ ಮೂಲಕ ಕೇಳಿಕೊಳ್ಳುತ್ತೇವೆ. ಎಂದರು.
ಮುಂಬಯಿ ಕುಲಾಲ ಸಂಘದ ಉಪಾಧ್ಯಕ್ಷ ರಘು ಮೂಲ್ಯ, ಅಮೂಲ್ಯ ತ್ತೈಮಾಸಿಕದ ಸಂಪಾದಕ ಶಂಕರ್ ಮೂಲ್ಯ, ಮುಂಬಯಿ ಕುಲಾಲ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಮಮತಾ ಗುಜರನ್, ಪುಣೆ ಕುಲಾಲ ಸಂಘದ ಸ್ಥಾಪಕಾಧ್ಯಕ್ಷ ವಾಸುದೇವ್ ಬಂಟ್ವಾಳ್ ಮಾತನಾಡಿ ಶುಭಹಾರೈಸಿದರು. ಪುಣೆ ಕುಲಾಲ ಸಂಘದ ಪ್ರದಾನ ಕಾರ್ಯದರ್ಶಿ ನವೀನ್ ಬಂಟ್ವಾಳ್, ಉಪಾಧ್ಯಕ್ಷ ದೊಡ್ಡಣ್ಣ ಮೂಲ್ಯ ಮತ್ತು ಪದಾಧಿಕಾರಿಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಮೂಲ್ಯ ಮತ್ತು ಪದಾಧಿಕಾರಿಗಳು ಸಹಕರಿಸಿದರು. ದೇವದಾಸ್ ಕುಲಾಲ್ ಸ್ವಾಗತಿಸಿದರು. ದೇವದಾಸ್ ಕುಲಾಲ್ ಹಾಗು ಭಾರತಿ ಅಕ್ಯಾìನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.
ನಿಸ್ವಾರ್ಥ ಮತ್ತು ಏಕಾಗ್ರತೆಯ ಕಾಯಕವನ್ನು ಮಾಡಿ ತೋರಿಸುವ ಕುಲಾಲ ಬಾಂಧವರು ಪರೋಪಕಾರಿಗಳು. ತನ್ನವರನ್ನು ಮತ್ತು ಇತರರನ್ನು ಒಂದೇ ಭಾವನೆಯಲ್ಲಿ ಕಾಣುವ ಇವರು ಪ್ರೀತಿ ಗೌರವಕ್ಕೆ ಅಧರಣೀಯರು. ಇದೀಗ ಕುಲಾಲ ಸಂಘದ ಆರ್ಥಿಕ ಸಂಸ್ಥೆಯು ಪುಣೆಯಲ್ಲಿ ತನ್ನ ವ್ಯವಹಾರ ಪ್ರಾರಂಭಿಸಿದೆ.ಮುಂದಿನ ದಿನಗಳಲ್ಲಿ ಸಂಸ್ಥೆಯು ಶತ ಶಾಖೆಗಳನ್ನು ಹೊಂದುವಂತಾಗಲಿ.
– ವಿಶ್ವನಾಥ್ ಪೂಜಾರಿ ಕಡ್ತಲ,
ಉಪಾಧ್ಯಕ್ಷರು,ಪುಣೆ ರೆಸ್ಟೋರೆಂಟ್ ಆ್ಯಂಡ್ ಹೊಟೇಲಿಯರ್ಸ್ ಅಸೋ.
ಪುಣೆಯಲ್ಲಿ ಬೇರೆ, ಬೇರೆ ಸಮಾಜದ ಮತ್ತು ಭಾಷಾ ಸಂಘವಿದ್ದರೂ ನಮ್ಮ ತುಳುನಾಡಿನವರು ಒಂದಕ್ಕೊಂದು ಕೊಂಡಿಯಂತೆ ಸಹಕಾರ ನೀಡುತ್ತಾ ಬೆಳೆದು ಬಂದವರು. ಇಂತಹ ಉತ್ತಮಬಾಂಧವ್ಯ ಹೊಂದಿರುವ ಪುಣೆಯ ತುಳು-ಕನ್ನಡಿಗರೆಲ್ಲರ ಸಹಕಾರ ಪ್ರೋತ್ಸಾಹ ದೊರೆತರೆ ಶುಭಾರಂಭ ಗೊಂಡ ಆರ್ಥಿಕ ಸಂಸ್ಥೆಯ ಜ್ಯೋತಿಯಾಗಿ ಬೆಳೆದು ನಿಂತು ಜನಸಾಮಾನ್ಯರ ಬಾಳಿಗೆ ಬೆಳಕು ನೀಡಲಿದೆ.
– ನಗ್ರಿಗುತ್ತು ರೋಹಿತ್ ಡಿ. ಶೆಟ್ಟಿ,
ಪ್ರದಾನ ಕಾರ್ಯದರ್ಶಿ : ಶ್ರೀ ಗುರುದೇವ ಸೇವಾ ಬಳಗ ಪುಣೆ)
ಬ್ರಹ್ಮಶ್ರೀ ನಾರಾಯಣ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬಂತೆ ನಾವೆಲ್ಲರೂ ಒಂದೆ. ಸಂಘಟನೆ ಬೇರೆ ಯಾಗಿದ್ದರು ನಾವುಗಳು ಪರಸ್ಪರ ಪ್ರೀತಿಯಿಂದ ಸಹಬಾಳ್ವೆ ನಡೆಸುವವರು. ಯಾವುದೇ ಸಂಘದ ಕಾರ್ಯ ಕ್ಷೇತ್ರಕ್ಕೆ ಸಹಕಾರ ನೀಡುವುದು ನಮ್ಮ ಧರ್ಮ. ಕಾತ್ರ ಜ್‌ನ ಬೆಟ್ಟದ ಮೇಲೆ ಶ್ರೀ ಅಯ್ಯಪ್ಪ ಸ್ವಾ ಮಿ ಕ್ಷೇತ್ರದ ಕೆಳ ಮಡಿಲಿನಲ್ಲಿ ಇಂದು ಜ್ಯೋತಿ ಕ್ರೆಡಿಟ್ ಸೊಸೈಟಿ ಕಾರ್ಯರಂಭ ಗೊಂಡಿದ್ದು, ಇದು ಶುಭ ಸಂದೇಶವಾಗಿದೆ.
– ಶೇಖರ್ ಪೂಜಾರಿ, ಅಧ್ಯಕ್ಷರು, ಬಿಲ್ಲವ ಸಮಾಜ ಸೇವಾ ಸಂಘ ಪುಣೆ
ಜ್ಯೋತಿ ಕ್ರೆಡಿಟ್ ಸೊಸೈಟಿಯು ರಾಷ್ಟ್ರ ಮಟ್ಟದಲ್ಲಿ ಬೆಳೆಯಬೇಕು. ಅಂತಹ ಬೆಳವಣಿಗೆಗೆ ನಾವೆಲ್ಲರೂ ಸಹಕಾರ ನೀಡಿ ಮುಂಬಯಿ ಕುಲಾಲ ಸಂಘದ ಸಾಧನೆಯ ಶಿಖರಕ್ಕೆ ಜ್ಯೋತಿಯಂತೆ ವಿರಾಜಮಾನವಾಗಿ ಶಾಶ್ವತವಾಗಿರುವಂತೆ ಮಾಡಬೇಕಾಗಿದೆ. ಜ್ಯೋತಿ ಸೊಸೈಟಿಯ ಶಾಖೆ ಪುಣೆಯಲ್ಲಿಯು ಇರಬೇಕು ಎಂಬ ನಮ್ಮ ಬೇಡಿಕೆಯನ್ನು ಸಾಕಾರಗೊಳಿಸಲಾಗಿದೆ.
– ನ್ಯಾಯವಾದಿ ಅಪ್ಪು ಮೂಲ್ಯ,
ಸ್ಥಾಪಕಾಧ್ಯಕ್ಷರು,ಕುಲಾಲ ಸಂಘ ಪಿಂಪ್ರಿ-ಚಿಂಚಾÌಡ್
ಚಿತ್ರ-ವರದಿ : ಹರೀಶ್ ಮೂಡಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.