ಸಾಧಾರಣ ಮೊತ್ತಕ್ಕೆ ಸೌರಾಷ್ಟ್ರ ಕುಸಿತ


Team Udayavani, Dec 7, 2018, 6:00 AM IST

ban07121813medn.jpg

ರಾಜ್‌ಕೋಟ್‌: ಆತಿಥೇಯ ಸೌರಾಷ್ಟ್ರ ವಿರುದ್ಧ ಮೊದಲ್ಗೊಂಡ ರಣಜಿ ಮುಖಾಮುಖೀಯಲ್ಲಿ ಕರ್ನಾಟಕ ಮೊದಲ ದಿನವೇ ಹಿಡಿತ ಸಾಧಿಸಿದೆ. ಜೈದೇವ್‌ ಶಾ ಪಡೆ 9 ವಿಕೆಟಿಗೆ 288 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿದೆ.

ಜಗದೀಶ್‌ ಸುಚಿತ್‌ (104ಕ್ಕೆ 5) ಹಾಗೂ ಪವನ್‌ ದೇಶಪಾಂಡೆ (78ಕ್ಕೆ 3) ಅವರ ದಾಳಿಗೆ ಸಿಲುಕಿ ಸೌರಾಷ್ಟ್ರ ಒದ್ದಾಡಿತು. ಕಮಲೇಶ್‌ ಮಕ್ವಾನ (31) ಹಾಗೂ ಯುವರಾಜ್‌ ಚೂಡಾಸಮ (9) ಶುಕ್ರವಾರಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಜೈದೇವ್‌ ಏಕಾಂಗಿ ಹೋರಾಟ
ಸೌರಾಷ್ಟ್ರ ಪರ ನಾಯಕ ಜೈದೇವ್‌ ಶಾ ಏಕಾಂಗಿಯಾಗಿ ಬ್ಯಾಟಿಂಗ್‌ ಹೋರಾಟ ನಡೆಸಿ 97 ರನ್‌ ಹೊಡೆದರು. 159 ಎಸೆತ ಎದುರಿಸಿದ ಶಾ 9 ಬೌಂಡರಿ, 3 ಸಿಕ್ಸರ್‌ ಸಿಡಿಸಿ ಸೌರಾಷ್ಟ್ರ ತಂಡದ ಬಾದ್‌ಶಾ ಎನಿಸಿದರು. ತಂಡದ ಮೊತ್ತ 250 ರನ್‌ ಆಗಿದ್ದಾಗ ದೇಶಪಾಂಡೆ ಎಸೆತದಲ್ಲಿ ಸಮರ್ಥ್ಗೆ ಕ್ಯಾಚ್‌ ನೀಡಿದ ಶಾ ಕೇವಲ 3 ರನ್ನಿನಿಂದ ಶತಕ ತಪ್ಪಿಸಿಕೊಂಡರು.ಮೊದಲು ಬ್ಯಾಟಿಂಗಿಗೆ ಇಳಿದ ಸೌರಾಷ್ಟ್ರಕ್ಕೆ ಆರಂಭಿಕರಾದ ಹಾರ್ವಿಕ್‌ ದೇಸಾಯಿ (26) ಹಾಗೂ ಸ್ನೆಲ್‌ ಪಟೇಲ್‌ (22) 30 ರನ್‌ ಜತೆಯಾಟ ನಿಭಾಯಿಸಿದರು. ಈ ವೇಳೆ ದಾಳಿಗಿಳಿದ ಸುಚಿತ್‌ ತಮ್ಮ ಸ್ಪಿನ್‌ ಕೈಚಳಕದಿಂದ ವಿಕೆಟ್‌ ಬೇಟೆ ಆರಂಭಿಸಿದರು.

ಅನಂತರ ಕ್ರೀಸ್‌ ಇಳಿದ ಅವಿ ಬರೋಟ್‌ ಖಾತೆ ತೆರೆಯುವ ಮೊದಲೇ ಸುಚಿತ್‌ ಬೌಲಿಂಗ್‌ನಲ್ಲಿ ಬಿ.ಆರ್‌. ಶರತ್‌ ನಡೆಸಿದ ಅದ್ಭುತ ಸ್ಟಂಪ್‌ಗೆ ಬಲಿಯಾದರು. ಅರ್ಪಿತ್‌ ವಸವಾಡ  (38 ರನ್‌) ತಂಡಕ್ಕೆ ಸ್ವಲ್ಪ ಮಟ್ಟಿನ ಚೇತರಿಕೆ ನೀಡಿದರು. ಮೊತ್ತವನ್ನು 70ರ ತನಕ ವಿಸ್ತರಿಸಿದರು. ಈ ವೇಳೆ ಸುಚಿತ್‌ ಎಸೆತವನ್ನು ಅಂದಾಜಿಸಲಾಗದೆ ಶರತ್‌ಗೆ ಕ್ಯಾಚ್‌ ನೀಡಿದ ಹಾರ್ವಿಕ್‌ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಬಳಿಕ ಬಂದ ಶೆಲ್ಡನ್‌ ಜಾಕ್ಸನ್‌ (4) ಅವರನ್ನೂ ಸುಚಿತ್‌ ಬೇಗನೆ ಔಟ್‌ ಮಾಡಿದರು. ಸ್ಕೋರ್‌ 119 ರನ್‌ ಆಗಿದ್ದಾಗ ಪವನ್‌ ಎಸೆತದಲ್ಲಿ ವಿನಯ್‌ ಕುಮಾರ್‌ಗೆ ಕ್ಯಾಚ್‌ ನೀಡಿದ ಅರ್ಪಿತ್‌ ಐದನೆಯವರಾಗಿ  ಔಟಾದರು. 119 ರನ್ನಿಗೆ ಅಗ್ರ 5 ವಿಕೆಟ್‌ ಕಳೆದುಕೊಂಡಿದ್ದ ಸೌರಾಷ್ಟ್ರ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ  ಜೈದೇವ್‌ ಶಾ ಕಪ್ತಾನನ ಆಟವಾಡಿ ತಂಡದ ರಕ್ಷಣೆಗೆ ನಿಂತರು. ಕೆಳ ಕ್ರಮಾಂಕದಲ್ಲಿ ಪ್ರೇರಕ್‌ ಮಂಕಡ್‌ (37) ಗಮನಾರ್ಹ ಬ್ಯಾಟಿಂಗ್‌ ನಡೆಸಿದರು.

ಸಂಕ್ಷಿಪ್ತ ಸ್ಕೋರ್‌: ಸೌರಾಷ್ಟ್ರ-9 ವಿಕೆಟಿಗೆ 288 (ಶಾ 97, ವಸವಾಡ 38, ಮಂಕಡ್‌ 37, ಮಕ್ವಾನಾ ಬ್ಯಾಟಿಂಗ್‌ 31, ಹಾರ್ವಿಕ್‌ 26, ಪಟೇಲ್‌ 22, ಸುಚಿತ್‌ 104ಕ್ಕೆ 5, ದೇಶಪಾಂಡೆ 78ಕ್ಕೆ 3).

ಜೈದೇವ್‌ ಶಾ ಕ್ರಿಕೆಟ್‌ ವಿದಾಯ
ಸೌರಾಷ್ಟ್ರ ರಣಜಿ ತಂಡದ ನಾಯಕ ಜೈದೇವ್‌ ಶಾ ಕರ್ನಾಟಕ ವಿರುದ್ಧದ ಪಂದ್ಯದ ಬಳಿಕ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಲು ತೀರ್ಮಾನಿಸಿದ್ದಾರೆ.

ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್‌ ಶಾ ಅವರ ಮಗನಾಗಿರುವ ಜೈದೇವ್‌ ಸೌರಾಷ್ಟ್ರ ಪರ 111 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ. ಇದು ರಣಜಿ ನಾಯಕತ್ವದ ದಾಖಲೆಯಾಗಿದೆ.

ಜೈದೇವ್‌ ಶಾ ನೇತೃತ್ವದಲ್ಲಿ ಸೌರಾಷ್ಟ್ರ ತಂಡ 2007-08ರ ರಣಜಿ ಟ್ರೋಫಿ ಚಾಂಪಿಯನ್‌ ಆಗಿತ್ತು. ಈ ಯಶಸ್ಸಿನಿಂದ ಅವರಿಗೆ ಇಸ್ರೇಲ್‌ಗೆ ಚುಟುಕ ಪ್ರವಾಸ ಕೈಗೊಂಡ ಭಾರತ “ಎ’ ತಂಡದ ನಾಯಕತ್ವ ಒಲಿದಿತ್ತು. 2002-03ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾಪರ್ಣೆ ಮಾಡಿದ ಶಾ ಒಟ್ಟು 119 ಪಂದ್ಯಗಳನ್ನು ಆಡಿದ್ದು, 29. 67ರ ಸರಾಸರಿಯಲ್ಲಿ 5252 ರನ್‌ ಗಳಿಸಿದ್ದಾರೆ.

ಟಾಪ್ ನ್ಯೂಸ್

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jjjjj

ODI; ಟೀಮ್ ಇಂಡಿಯಾದ ಹೊಸ ಜೆರ್ಸಿ ಬಿಡುಗಡೆ ಮಾಡಿದ ಜಯ್ ಶಾ,ಹರ್ಮನ್ ಪ್ರೀತ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Champions Trophy: If Modi’s visit to Pakistan was right, then Team India should also go: Tejaswi Yadav

Champions Trophy: ಮೋದಿ ಪಾಕ್‌ ಗೆ ಹೋಗಿದ್ದು ಸರಿಯಾದರೆ ಟೀಂ ಇಂಡಿಯಾವೂ ಹೋಗಲಿ: ತೇಜಸ್ವಿ

IPL 2024: Pant has the ambition to become India’s cricket captain: Parth Jindal

IPL 2025: ಭಾರತ ಕ್ರಿಕೆಟ್‌ ನಾಯಕನಾಗುವ ಉದ್ದೇಶ ಪಂತ್‌ ಗಿದೆ: ಜಿಂದಾಲ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

BBK11: ಚೈತ್ರಾ ಅಭಿನಯ ‌ಕಂಡು‌ ಮೂಕವಿಸ್ಮಿತರಾದ ಮನೆಮಂದಿ

byndoor

Bantwal: ಅಪಘಾತ; ಗಾಯಾಳು ಸಾವು

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Katapadi: ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.