ಓಡುವಾಗ ಶೂ ಕಳಚಿ ಯಾಸಿರ್ ರನೌಟ್!
Team Udayavani, Dec 7, 2018, 6:20 AM IST
ಅಬುಧಾಬಿ: ನ್ಯೂಜಿಲೆಂಡ್-ಪಾಕಿಸ್ತಾನ ವಿರುದ್ಧ ಇಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ತಮಾಷೆಯ ಘಟನೆಯೊಂದು ಜರುಗಿದೆ. ಭಾರೀ ಮೊತ್ತದ ಕನಸಿಟ್ಟುಕೊಂಡಿದ್ದ ಪಾಕಿಸ್ತಾನ ದಿಢೀರನೆ ಕುಸಿತ ಕಂಡಿತ್ತು.
ಈ ಹಂತದಲ್ಲಿ ಮೊತ್ತವನ್ನು ಏರಿಸಲು ನಾಯಕ ಸಫ್ರಾìಜ್ ಅಹ್ಮದ್ ಹರಸಾಹಸ ಮಾಡುತ್ತಿದ್ದರು. ಆ ವೇಳೆ ಸಫ್ರಾìಜ್ 2 ರನ್‌ಗಳಿಗಾಗಿ ಓಡುತ್ತಿದ್ದರು. 1 ರನ್ ಓಟ ಮುಗಿಸಿ ಇನ್ನೇನು 2ನೇ ರನ್ ಓಟವನ್ನೂ ಮುಗಿಸಬೇಕು ಅಷ್ಟರಲ್ಲಿ ಯಾಸಿರ್ ಶಾ ವಿಚಿತ್ರ ರೀತಿಯಲ್ಲಿ ರನೌಟಾದರು! ಯಾಸಿರ್ ಓಡುತ್ತಿದ್ದಾಗ ಅವರ ಶೂ ಕಳಚಿಕೊಂಡು ಹೋಗಿದ್ದು ಇದಕ್ಕೆ ಕಾರಣ. ಇದರಿಂದ ಓಟದ ಗತಿ ನಿಧಾನಗೊಂಡು ಅವರು ರನೌಟಾದರು. ನಾಯಕ ಸಫ್ರಾìಜ್ ಹತಾಶೆಯಿಂದ ಪರಿಸ್ಥಿತಿಯನ್ನು ನೋಡುತ್ತಿದ್ದರು! 346 ರನ್‌ಗೆ ಯಾಸಿರ್ ರೂಪದಲ್ಲಿ 8ನೇ ವಿಕೆಟ್ ಕಳೆದುಕೊಂಡ ಪಾಕ್, ಇನ್ನೆರಡು ರನ್ ಜೋಡಿಸುವಷ್ಟರಲ್ಲಿ ಆಲೌಟಾಯಿತು.
ಬರೀ 33 ಟೆಸ್ಟ್‌ನಲ್ಲಿ 200 ವಿಕೆಟ್: ಯಾಸಿರ್ ವಿಶ್ವದಾಖಲೆ!
ಪಾಕಿಸ್ತಾನದ ಬಲಗೈ ಲೆಗ್‌ಸ್ಪಿನ್ನರ್ ಯಾಸಿರ್ ಶಾ ವಿಶ್ವದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. 33 ವರ್ಷದ ಯಾಸಿರ್ ತಾವಾಡಿದ 33ನೇ ಟೆಸ್ಟ್‌ನಲ್ಲಿ 200 ವಿಕೆಟ್ ಗಳಿಸಿದ್ದಾರೆ. ಇದು ಅತಿವೇಗವಾಗಿ 200 ವಿಕೆಟ್ ಗಳಿಸಿದ ವಿಶ್ವದಾಖಲೆ. ಯಾಸಿರ್ ತಮ್ಮ ಅದ್ಭುತ ಸಾಧನೆಯೊಂದಿಗೆ 82 ವರ್ಷದ ಹಿಂದಿನ ದಾಖಲೆಯನ್ನು ಪುಡಿ ಮಾಡಿದರು. 1936ರಲ್ಲಿ ಆಸ್ಟ್ರೇಲಿಯದ ಲೆಗ್‌ಸ್ಪಿನ್ನರ್ ಕ್ಲಾರಿ ಗ್ರಿಮೆಟ್ 36 ಟೆಸ್ಟ್‌ಗಳಲ್ಲಿ 200 ವಿಕೆಟ್ ಗಳಿಸಿ ದಾಖಲೆ ನಿರ್ಮಿಸಿದ್ದರು. ಟೆಸ್ಟ್‌ನಲ್ಲಿ ಇಷ್ಟು ಅದ್ಭುತ ಬೌಲಿಂಗ್ ದಾಖಲೆ ಹೊಂದಿದ್ದರೂ, ಏಕದಿನ ಮತ್ತು ಟಿ20ಯಲ್ಲಿ ಯಾಸಿರ್ ಪಾತ್ರ ತುಂಬಾ ಕಡಿಮೆ. ಇದುವರೆಗೆ ಅವರು ಕೇವಲ 19 ಏಕದಿನ, 2 ಟಿ20 ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.