ರಾಷ್ಟ್ರದ ಎರಡನೇ ಒಳಾಂಗಣ ಟೆನ್ನಿಸ್‌ ಕೋರ್ಟ್‌

Team Udayavani, Dec 7, 2018, 2:50 AM IST

indoor-stadium-6-12.jpg

ಉಡುಪಿ: ರಾಷ್ಟ್ರದ ಎರಡನೇ ಒಳಾಂಗಣ ಟೆನ್ನಿಸ್‌ ಕೋರ್ಟ್‌ ಕಾಮಗಾರಿ ಪೂರ್ಣಗೊಳ್ಳುತ್ತಾ ಬಂದಿದ್ದು, ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಇದೀಗ ಸಿಂಥೆಟಿಕ್‌ ಟ್ರ್ಯಾಕ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಡಿಸೆಂಬರ್‌ ಅಂತ್ಯದೊಳಗೆ ಪೂರ್ಣಗೊಂಡು ಕ್ರೀಡಾ ಇಲಾಖೆಗೆ ಹಸ್ತಾಂತರವಾಗಲಿದೆ.

2016ರಲ್ಲಿ ಕ್ರೀಡಾ ಸಚಿವರಾಗಿದ್ದ ಪ್ರಮೋದ್‌ ಮಧ್ವರಾಜ್‌ ಮಂಜೂರು ಮಾಡಿದ ಈ ಹೈಟೆಕ್‌ ಟೆನ್ನಿಸ್‌ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿತಿ ಕೇಂದ್ರ ನಿರ್ಮಿಸುತ್ತಿದೆ. 2018ರ ಎಪ್ರಿಲ್‌ಗೆ ಟೆಂಡರ್‌ ಅವಧಿ ಪೂರ್ಣಗೊಂಡಿದ್ದರೂ, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆ 8 ತಿಂಗಳು ಹೆಚ್ಚುವರಿ ಅವಕಾಶ ಪಡೆದು ನಿರ್ಮಿತಿ ಕೇಂದ್ರ ಕಾಮಗಾರಿ ನಡೆಸುತ್ತಿದೆ. ಡಿ.25ರೊಳಗೆ  ಕ್ರೀಡಾ ಇಲಾಖೆಗೆ ಬಿಟ್ಟುಕೊಡುವುದಾಗಿ ನಿರ್ಮಿತಿ ಕೇಂದ್ರ ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರದ 2ನೇ ಒಳಾಂಗಣ ಟೆನ್ನಿಸ್‌ ಕೋರ್ಟ್‌ ದಿಲ್ಲಿಯನ್ನು ಹೊರತುಪಡಿಸಿದರೆ ಬೇರಾವುದೇ ಒಳಾಂಗಣ ಟೆನ್ನಿಸ್‌ ಕೋರ್ಟ್‌ ಇಲ್ಲ. ಇದರಿಂದ ಉಡುಪಿಯಲ್ಲಿ ಆಗುತ್ತಿರುವ ಈ ಟೆನ್ನಿಸ್‌ ಕೋರ್ಟ್‌ ದೇಶದ ಎರಡನೇ ಮತ್ತು ರಾಜ್ಯದ ಪ್ರಥಮ ಒಳಾಂಗಣ ಟೆನ್ನಿಸ್‌ ಕೋರ್ಟ್‌ ಆಗಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಟೆನ್ನಿಸ್‌ ಕೋರ್ಟ್‌ ಇದಾಗಿದೆ.

ಆಟಗಾರಿಗೆ ಸದಾವಕಾಶ
ಬ್ರಹ್ಮಾವರ, ಉಡುಪಿ, ಮಣಿಪಾಲದಲ್ಲಿ ಸಾಕಷ್ಟು ಟೆನ್ನಿಸ್‌ ಆಟಗಾರರಿದ್ದಾರೆ. ಅವರು ಮಣ್ಣಿನ ಕೋರ್ಟ್‌ನಲ್ಲಿ ಆಡುತ್ತಿದ್ದಾರೆ. ಇದೀಗ ಹೈಟೆಕ್‌ ಕೋರ್ಟ್‌ ನಿರ್ಮಾಣ ವಾಗುತ್ತಿರುವುದರಿಂದ ಸಾಕಷ್ಟು ಅನುಕೂಲಕರವಾಗಿದೆ. ಇದರಿಂದ ಸಾಕಷ್ಟು ಯುವ ಪ್ರತಿಭೆಗಳಿಗೆ ಟೆನ್ನಿಸ್‌ನಲ್ಲಿ ಸಾಧನೆ ಮಾಡಲು ಅವಕಾಶ ದೊರೆಯುತ್ತದೆ.

ಕ್ರೀಡಾಂಗಣದ ಹೈಲೆಟ್ಸ್‌
– ಒಟ್ಟು 3.75 ಕೋ.ರೂ.
– 14600 ಚ.ಅ. ವಿಸ್ತೀರ್ಣ
– ಎರಡು ಟೆನ್ನಿಸ್‌ ಕೋರ್ಟ್‌
– ಎರಡು ತರಬೇತುದಾರರ ಕೊಠಡಿ
– 3 ಮಹಿಳಾ, 3 ಪುರುಷರ ಡ್ರೆಸ್ಸಿಂಗ್‌ ರೂಮ್‌
– 600 ಮಂದಿ ಪ್ರೇಕ್ಷಕರಿಗೆ ಅವಕಾಶ
– 600 ಎಲ್‌ಯುಕೆ ಸಾಮರ್ಥ್ಯದ ಎಲ್‌ಐಡಿ ದೀಪ
– ನಿರ್ಮಿತಿ ಕೇಂದ್ರದಿಂದ ನಿರ್ಮಾಣ

ಬಳಸಲಾದ ಅನುದಾನ
– ಕ್ರೀಡಾ ಇಲಾಖೆಯಿಂದ 2.5 ಕೋ.ರೂ.
– ಆಸ್ಕರ್‌ ಫೆರ್ನಾಂಡಿಸ್‌ ರಾಜ್ಯಸಭಾ ಸದಸ್ಯರ ನಿಧಿಯಿಂದ 1 ಕೋ.ರೂ. 
– ಜಿಲ್ಲಾಡಳಿತ 10 ಲ.ರೂ.
– ನಗರಸಭೆ 10 ಲ.ರೂ.
– ಜಿಲ್ಲಾ ಕ್ರೀಡಾ ಸಮಿತಿ 5 ಲ. ರೂ.

ಟೆನ್ನಿಸ್‌ಗೆ ಪ್ರೋತ್ಸಾಹ
ನಮ್ಮಲ್ಲಿ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡಲಾಗುತ್ತಿದ್ದು, ಸೂಕ್ತ ಸೌಕರ್ಯಗಳ ಕೊರತೆಯಿತ್ತು. ಇದೀಗ ಅಜ್ಜರಕಾಡು ಕ್ರೀಡಾ ಸಂಕೀರ್ಣವಾಗಿ ಬೆಳೆದು ಎಲ್ಲ ಕ್ರೀಡೆಗಳಿಗೂ ಅವಕಾಶ ಸಿಕ್ಕಿದೆ. ಈ ಒಳಾಂಗಣ ಕ್ರೀಡಾಂಗಣದಲ್ಲಿ ಉತ್ತಮ ಕೋಚ್‌ ಸಿಕ್ಕಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರ ನಿರ್ಮಾಣ ಸಾಧ್ಯ.
– ದೇವಾನಂದ, ಉಡುಪಿ ಲೇನ್‌ ಟೆನ್ನಿಸ್‌ ಅಸೋಸಿಯೇಶನ್‌ ಅಧ್ಯಕ್ಷ

ವರ್ಷದ ಅಂತ್ಯದೊಳಗೆ ಉದ್ಘಾಟನೆ
ಡಿ. 15ರೊಳಗೆ ನಿರ್ಮಿತಿ ಕೇಂದ್ರ ಒಳಾಂಗಣ ಟೆನ್ನಿಸ್‌ ಕೋರ್ಟ್‌ನ್ನು ಬಿಟ್ಟುಕೊಟ್ಟಲ್ಲಿ ಈ ವರ್ಷಾಂತ್ಯದೊಳಗೆ ಉದ್ಘಾಟನೆಗೊಳ್ಳಲಿದೆ.
– ಡಾ| ರೋಶನ ಕುಮಾರ್‌ ಸ. ನಿರ್ದೇಶಕ, ಕ್ರೀಡಾ ಇಲಾಖೆ

ಟಾಪ್ ನ್ಯೂಸ್

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Brijesh-Chowta-Leter

Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ

New Delhi: BSNL invites tender for 5G service

New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್‌ ಆಹ್ವಾನ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ  

J&K: If Vajpayee had lived, Jammu and Kashmir would not have become a Union Territory: Omar Abdullah

J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

6-udupi

Udupi: ಯತಿಗಳ ಸಮಾಗಮ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

4-kaup

ನ.8 ರಂದು ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವ ಸಮಾರಂಭ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

Mangaluru City Corporation ಮಾಜಿ ಮೇಯರ್‌ ಅಜಿತ್‌ ಕುಮಾರ್‌ ನಿಧನ

6-udupi

Udupi: ಯತಿಗಳ ಸಮಾಗಮ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

Davanagere: ಇನ್ಶೂರೆನ್ಸ್‌ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ

5-udupi

Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Commonwealth ಸಂಸದೀಯ ಸಭೆ; ಸ್ಪೀಕರ್‌ ಯು.ಟಿ. ಖಾದರ್‌ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.