80 ಸಾವಿರ ರೂ. ಧನ ಸಂಗ್ರಹವನ್ನು ವಿತರಿಸಿದ ಭಗವತಿ ಗ್ರೂಪ್
Team Udayavani, Dec 7, 2018, 2:55 AM IST
ಪಡುಬಿದ್ರಿ: ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಹುಟ್ಟು ಹಾಕಲಾಗಿರುವ ಪಡುಬಿದ್ರಿ ಭಗವತಿ ಗ್ರೂಪ್‌ನಿಂದ ನವರಾತ್ರಿ ಉತ್ಸವದ ಕೊನೆಯ 2 ದಿನ ವೇಷಗಳನ್ನು ಹಾಕಿ ಸಹೃದಯಿ ಸಾರ್ವಜನಿಕರಿಂದ ಸಂಗ್ರಹಿಸಿದ್ದ ಎಂಬತ್ತು ಸಾವಿರ ರೂಪಾಯಿಗಳನ್ನು ಅಸೌಖ್ಯದಿಂದ ಬಳಲುತ್ತಿರುವ ಅವಿಭಜಿತ ಜಿಲ್ಲೆಯ ಏಳು ಕುಟುಂಬಗಳಿಗೆ ಅವರ ಮನೆಗೇ ತೆರಳಿ ಸಹಾಯಧನವನ್ನು ಇತ್ತೀಚೆಗೆ ಹಸ್ತಾಂñರಿಸಲಾಯಿತು.
ಯಾವುದೇ ಪದಾಧಿಕಾರಿಗಳಿಲ್ಲದ ಭಗವತಿ ಗ್ರೂಪ್ ಸಂಘಟನೆಯಲ್ಲಿ ಸುಮಾರು ಎಂಭತ್ತು ಜನ ಸದಸ್ಯರಿದ್ದಾರೆ. ದುಡಿದು ತಿನ್ನುವ ಈ ಯುವಕರು ಪ್ರತೀ ತಿಂಗಳು ತಾವು ಪಡೆಯುವ ವೇತನದ ಒಂದಂಶವನ್ನು ಗ್ರೂಪ್‌ನಲ್ಲಿ ಸಂಗ್ರಹಿಸಿ ಅದನ್ನು ಸಮಾಜದ ಅಶಕ್ತರಿಗೆ ಧನ ಸಹಾಯವಾಗಿ ನೀಡುವ ಮೂಲಕ ಅವರ ನೋವಿಗೆ ಸ್ಪಂದಿಸುವ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದಾರೆ. ಈವರೆಗೆ ಲಕ್ಷಾಂತರ ರೂ.ಗಳ ಸಹಾಯಧನವನ್ನು ಹಲವಾರು ಅಶಕ್ತರಿಗೆ ನೀಡಿದ್ದಾರೆ. ಇದೇ ಉದ್ದೇಶದಿಂದ ಈ ಬಾರಿ ವೇಷ ಧರಿಸಿ ನವರಾತ್ರಿಯ ಕೊನೆಯ ಎರಡು ದಿನಗಳಲ್ಲಿ ಊರೂರು ಸುತ್ತಿ ಧನ ಸಂಗ್ರಹಿಸಿ ಅದನ್ನು ಬಡವರಿಗೆ ವಿತರಿಸುವ ಮೂಲಕ ಅವರ ನೋವಿಗೆ ಸ್ಪಂದಿಸಿದ್ದಾರೆ.
ಸಿದ್ದಕಟ್ಟೆ ಸಂಗಬೆಟ್ಟು ಗ್ರಾಮದ ಸಂಜೀವ ಆಚಾರ್ಯ ಮತ್ತು ಸರಸ್ವತಿಯವರ ಮಗಳಾದ ಪ್ರತಿಮಾ ಅವರ ಗರ್ಭಕೋಶದ ಶಸ್ತ್ರ ಚಿಕಿತ್ಸೆಯ ವೈದ್ಯಕೀಯ ವೆಚ್ಚಕ್ಕಾಗಿ ರೂ. 20,000, ಮಂಗಳೂರು ಕೋಟೆಕಾರ್ ಗ್ರಾಮದ ಪಾರ್ಶ್ವವಾಯುವಿಗೆ ತುತ್ತಾದ ರಾಮಣ್ಣ ಕುಲಾಲ್ ರವರಿಗೆ ರೂ.10,000, ಕೆಲಸ ಮಾಡುವಾಗ ಅಕಸ್ಮಿಕವಾಗಿ ಯಂತ್ರಕ್ಕೆ ಸಿಲುಕಿ ಕೈ ಬೆರಳು ತುಂಡಾಗಿ ಚಿಕಿತ್ಸೆ ಪಡೆಯುತ್ತಿರುವ ಪಡುಬಿದ್ರಿ ಪಾದೆಬೆಟ್ಟು ಗ್ರಾಮದ ನಿವಾಸಿ ಸಂಗೀತಾ ಶೆಟ್ಟಿಯವರಿಗೆ ರೂ 10000 ಧನ ಸಹಾಯ ನೀಡಲಾಯಿತು.
ನಂದಿಕೂರು ಶೆಟ್ಟಿಗುಡ್ಡೆ ನಿವಾಸಿ ಜಯಶ್ರೀ ದೇವಾಡಿಗರವರ ಮನೆ ದುರಸ್ತಿಗೆ ರೂ. 10000, ನಂದಿಕೂರು ಆನೆಡ್ಕ ನಿವಾಸಿ ರಿಯಾಜ್ ಸಹೋದರಿಯ ಮದುವೆಯ ಖರ್ಚಿಗೆ ರೂ. 10000, ಉಡುಪಿ ಬಾಲಕಿಯರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕಾಪು ತಾಲೂಕಿನ ಸದಾಶಿವ ನಾಯಕ್- ಲಕ್ಷ್ಮೀ ದಂಪತಿಯ ಪುತ್ರಿ ಸೌಂದರ್ಯ ಅವರ ಬೆನ್ನಿನ ಶಸ್ತ್ರ ಚಿಕಿತ್ಸೆಗಾಗಿ ರೂ. 10,000 ಹಾಗೂ ಅಪಘಾತದಲ್ಲಿ ಕಾಲು ಕಳೆದುಕೊಂಡು ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಕಾರ್ಕಳ ತಾಲೂಕು ನಿಟ್ಟೆ ಕೆಮ್ಮಣ್ಣು ನಿವಾಸಿ ಶೇಖರ್ ದೇವಾಡಿಗರವರ ವೈದ್ಯಕೀಯ ವೆಚ್ಚಕ್ಕೆ ರೂ. 10000 ಸಹಾಯಧನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಗವತಿ ಗ್ರೂಪ್‌ನ ಸದಸ್ಯರು, ಮಂಜಣ್ಣ ಸೇವಾ ಬ್ರಿಗೇಡ್, ಪಾದೆಬೆಟ್ಟು ನಿತ್ಯಾನಂದ ಸೇವಾ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Bramavara: ವಿದ್ಯಾರ್ಥಿ ಕಾಲಿನ ಮೇಲೆ ಸಾಗಿದ ಪಿಕ್‌ಅಪ್
Udupi: ಕಾರು ಡಿಕ್ಕಿ ಹೊಡೆದು ಸ್ಕೂಟರ್ ಸವಾರನಿಗೆ ಗಾಯ… ಕಾರು ಚಾಲಕ ಪರಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.