ಕ್ರೇಜ್ ಹುಟ್ಟಿಸುವ ಕ್ರೂಸರ್ ಬೈಕ್
Team Udayavani, Dec 7, 2018, 12:59 PM IST
ಯುವಸಮುದಾಯವನ್ನು ಮೊದಲ ನೋಟಕ್ಕೆ ಸೆಳೆಯುವ ಸಾಮರ್ಥ್ಯ ಬೈಕ್ ಗಳಿಗಿದೆ. ಅದರಲ್ಲೂ ಕ್ರೂಸರ್ ಬೈಕ್ ಗಳನ್ನು ನೋಡಿದ ಕ್ಷಣವೇ ಒಂದು ರೈಡ್ ಹೊರಟೇ ಬಿಡುವ ಅನ್ನುವಷ್ಟು ಕುತೂಹಲ. ಇದಕ್ಕೆಂದೆ ವಿವಿಧ ಕಂಪೆನಿಗಳು ವಿಭಿನ್ನ ವಿನ್ಯಾಸದ ಕ್ರೂಸರ್ ಬೈಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಇಂದಿನ ಯುವಜನತೆ ಕಾರುಗಳಿಗಿಂತ ಜಾಸ್ತಿ ಬೈಕ್ ಗಳನ್ನು ಇಷ್ಟಪಡುತ್ತಾರೆ. ಅದರಲ್ಲಿಯೂ, ರಾಯಲ್ ಲುಕ್, ವಿಶೇಷವಾದ ಸದ್ದಿನೊಂದಿಗೆ ಯುವಕರಿಂದ ಹಿಡಿದು ಎಲ್ಲ ವಯೋಮಾನದವರನ್ನೂ ಮೊದಲ ನೋಟದಲ್ಲೇ ಈ ಬೈಕ್ ಗಳು ಗಮನಸೆಳೆಯುತ್ತದೆ. ನಿಮ್ಮಲ್ಲಿ ಐಷಾರಾಮಿ ಕಾರು ಇರಲಿ, ಬಸ್ ಇರಲಿ, ವಿಶೇಷ ಸದ್ದಿನೊಂದಿಗೆ ಕ್ರೂಸರ್ ಬೈಕ್‌ನಲ್ಲಿ ರಸ್ತೆಯಲ್ಲಿ ಹೋಗುವ ಮಜಾವೇ ಬೇರೆ. ಅದಕ್ಕೆಂದೇ ಈ ಬೈಕ್‌ಗಳು ಇಂದಿನ ಯುವಜನತೆಯ ಹಾಟ್ ಫೇವರೆಟ್. ಅದರಲ್ಲಿಯೂ, ಅಡ್ವೆಂಚರ್ ರೈಡ್‌ಗಳಿಗೆ ಹೇಳಿ ಮಾಡಿಸಿದಂತಿರುವ ಈ ಬೈಕ್ ಗಳನ್ನು ಹೆಚ್ಚಿನ ಮಂದಿ ಇಷ್ಟಪಡುತ್ತಾರೆ.
ಕ್ರೂಸರ್ ಬೈಕ್‌ಗಳ ಪೈಕಿ ಹೆಸರುಗಳಿಸಿದ ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಮೋಟರ್ ಸೈಕಲ್ ಕೂಡ ಒಂದು. ಈ ಬೈಕ್‌ನ ಹೆಸರು ಹೇಳಿದ ತತ್ ಕ್ಷ ಣ ವಾಹನ ಪ್ರಿಯರಿಗೆ ಕಣ್ಣಮುಂದೆ ಬರುವುದು ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500. ಈ ಬೈಕ್‌ಗಳನ್ನು ಖರೀದಿ ಮಾಡಲು ಹೆಚ್ಚಿನ ಮಂದಿ ಮುಗಿಬೀಳುತ್ತಾರೆ. ಏಕೆಂದರೆ ಈ ಬೈಕ್‌ಗಳು ಭಾರತೀಯ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ರಾಯಲ್ ಎನ್ ಫೀಲ್ಡ್ 350-500 ಸಿಸಿ ಬೈಕ್‌ಗಳನ್ನು ಸ್ಟಾಂಡರ್ಡ್ ಬೈಕ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಮಂದಿಯ ಪ್ರಥಮ ಆಯ್ಕೆ ಇದಾಗಿದ್ದು, ಆಧುನಿಕ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ.
ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ಗಳು ಮಿಂಟ್, ಆಶ್, ಚೆಸ್ಟ್ ನಟ್, ಲ್ಯಾಗೂನ್, ಸಿಲ್ವರ್, ಕಪ್ಪು ಬಣ್ಣದಲ್ಲಿ ಮಾರುಕಟ್ಟೆಯಲ್ಲಿದ್ದು, ಅದೇ ರೀತಿ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 500 ಬೈಕ್‌ಗಳು ಕ್ಲಾಸಿಕ್ ಸಿಲ್ವರ್, ಕಪ್ಪು, ಟ್ಯಾನ್, ಸ್ಕ್ವಾ ಡ್ರಾನ್ ಬ್ಲೂ, ಬ್ಯಾಟಲ್ ಗ್ರೀನ್, ಕೋಮ್ ಗ್ರೀನ್‌ನಲ್ಲಿ ಲಭ್ಯವಿದೆ.
ಜಾವಾದ ಗಮ್ಮತ್ತೇ ಬೇರೆ
ದಶಕಗಳ ಹಿಂದೆ ಭಾರತದ ರಸ್ತೆಗಳಲ್ಲಿ ಸದ್ದು ಮಾಡಿದ್ದ ಜಾವಾ ಬೈಕ್‌ಗಳು ಹೊಸ ವಿನ್ಯಾಸ ಮತ್ತು ತಂತ್ರಜ್ಞಾನಗಳೊಂದಿಗೆ ಮತ್ತೂಮ್ಮೆ ಮಾರುಕಟ್ಟೆಗೆ ಬರಲಿವೆ. ಜಾವಾ ಮೋಟರ್ ಸೈಕಲ್ ಕಂಪೆನಿ ಜಾವಾ, ಜಾವಾ 42 ಮತ್ತು ಜಾವಾ ಪೆರಿಕ್ ಎಂಬ ಮೂರು ವೇರಿಯಂಟ್‌ಗಳು ಮಾರುಕ್ಟೆಯಲ್ಲಿವೆ. ಜಾವಾ 42 ಬೈಕ್ 293 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದರೆ, ಜಾವಾ ಪೆರಿಕ್ 334 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಲಿಕ್ವಿಡ್ ಕೂಲ್ಡ್ ಆಗಿದ್ದು, 27 ಬಿಎಚ್‌ಪಿ ಮತ್ತು 28 ಎನ್‌ಎಂ ಗರಿಷ್ಠ ಟಾರ್ಕ್ ಹೊಂದಿದೆ. ಎಂಜಿನ್ 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದ್ದು. ಮುಂದಿನ ವರ್ಷ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ದುಬಾರಿ ಬೈಕ್ ಹಾರ್ಲೆಡೇವಿಡ್‌ಸನ್
ಕ್ರೂಸರ್ ಬೈಕ್‌ಗಳ ಪೈಕಿ ಹಾರ್ಲೆಡೇವಿಡ್ ಸನ್ ಬೈಕ್ ಕೂಡ ಒಂದು. 5.31 ಲಕ್ಷ ದಿಂದ ಪ್ರಾರಂಭವಾಗಿ ಸುಮಾರು 50 ಲಕ್ಷ ರೂ. ವರೆಗೆ ಈ ಬೈಕ್‌ಗೆ ದರವಿದೆ. ಹಾರ್ಲೆಡೇವಿಡ್ ಸನ್ ಸ್ಟ್ರೀಟ್ ಗ್ಲೆ çಡ್ ಸ್ಪೆಷಲ್ ಬೈಕ್‌ಗೆ ಸುಮಾರು 30 ಲಕ್ಷ, ರೋಡ್ ಕಿಂಗ್ ಬೈಕ್ ಗೆ 24.99 ಲಕ್ಷ ರೂ., ಐರನ್ 882 ಮಾಡೆಲ್ ಬೈಕ್‌ಗೆ 9.20 ಲಕ್ಷ, ಪ್ಯಾಟ್ ಬಾಬ್ 14.65 ಲಕ್ಷ ರೂ. ಹೊಂದಿದೆ.
ಶಕ್ತಿಶಾಲಿ ಎಂಜಿನ್
ಬಜಾಜ್ ಆಟೋ ಸಂಸ್ಥೆಯು ಕೆಲವು ತಿಂಗಳುಗಳ ಹಿಂದೆ ಅವೇಂಜರ್ 220 ಸ್ಟ್ರೀಟ್ ಮತ್ತು
ಅವೆಂಜರ್ 180 ಸ್ಟ್ರೀಟ್ ಬೈಕ್‌ನ್ನು ಬಿಡುಗಡೆಗೊಳಿಸಿದೆ. ಬಹುನಿರೀಕ್ಷಿತ ಬಜಾಜ್ ಆವೇಂಜರ್ ಸ್ಟ್ರೀಟ್ 180 ಸಿಸಿ ಕ್ರೂಸರ್ ಬೈಕ್ ಕೂಡ ಮಾರುಕಟ್ಟೆ ಪ್ರವೇಶಿಸಿದ್ದು, ಮಾರುಕಟ್ಟೆಯಲ್ಲಿ ಸುಮಾರು 83,475 ರೂ. ಬೆಲೆ ಹೊಂದಿದೆ. ಈ ಬೈಕ್ 176.6 ಸಿಸಿ ಡಿಟಿಎಸ್-ಐ ಸಿಲಿಂಡರ್ ಏರ್ ಕೂಲ್ಡ್ ಎಂಜಿನ್ ಹೊಂದಿದ್ದು, 15.3 ಬಿಎಚ್‌ಪಿ ಮತ್ತು 13.7 ಎನ್‌ಎಂ ಟಾಕ್ಸ್‌ನ್ನು ಉತ್ಪಾದಿಸುವ ಶಕ್ತಿ ಹೊಂದಿದೆ. ಆದೇ ರೀತಿ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಸುಜುಕಿ ಸಂಸ್ಥೆ ಕೂಡ ಕಳೆದ ಕೆಲವು ತಿಂಗಳುಗಳ ಹಿಂದೆ ಇನ್ಟ್ರುಡರ್ 150 ಎಫ್‌ಐ ಬೈಕ್ ಬಿಡುಗಡೆ ಮಾಡಿದ್ದು, 1.07 ಲಕ್ಷ ರೂ. ಬೆಲೆ ಹೊಂದಿದೆ.
ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.