ಕಾರಂತರ ಕರ್ಮಭೂಮಿಯಲ್ಲಿ ಈಜುಕೊಳ ಹೆಮ್ಮೆ: ನಳಿನ್
Team Udayavani, Dec 7, 2018, 3:04 PM IST
ಪುತ್ತೂರು: ಜ್ಞಾನಪೀಠ ಪುರಸ್ಕೃತ ಡಾ| ಕೆ. ಶಿವರಾಮ ಕಾರಂತರ ಕರ್ಮ ಭೂಮಿಯಾಗಿ ಹೆಸರು ಮಾಡಿದ ಪುತ್ತೂರಿನ ಬಾಲವನ ಈಗ ಇಲ್ಲಿನ ಈಜು ಕೊಳದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಪಟುಗಳನ್ನು ಬೆಳೆಸುವ ಮೂಲಕ ಹೆಮ್ಮೆಯನ್ನು ಇಮ್ಮಡಿಗೊಳಿಸಿದೆ ಎಂದು ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದರು.
ಪುತ್ತೂರಿನ ಪರ್ಲಡ್ಕ ಡಾ| ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಗುರುವಾರ ಆರಂಭಗೊಂಡ 4 ದಿನಗಳ ರಾಜ್ಯಮಟ್ಟದ ಶಾರ್ಟ್‌ಕೋರ್ಸ್ ಅಕ್ವೆಟಿಕ್ ಚಾಂಪಿಯನ್‌ಶಿಪ್ ಉದ್ಘಾಟನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕರ್ನಾಟಕ ಸ್ವಿಮ್ಮಿಂಗ್ ಅಸೋಸಿಯೇಶನ್ (ಕೆಎಸ್‌ಎ) ನೇತೃತ್ವದಲ್ಲಿ ಪುತ್ತೂರು ಅಕ್ವೆಟಿಕ್ ಕ್ಲಬ್ ಸಹಯೋಗದಲ್ಲಿ ಆಯೋಜನೆಗೊಂಡಿರುವ ರಾಜ್ಯಮಟ್ಟದ ಸ್ಪರ್ಧೆಯ ಅವಕಾಶ ಪುತ್ತೂರಿಗೆ ಸಿಗಬೇಕಾದರೆ ಪುತ್ತೂರಿನ ಈಜುಕೊಳ ಹೊಂದಿರುವ ಸೌಲಭ್ಯ ಮತ್ತು ಇಲ್ಲಿ ಸಿಗುತ್ತಿರುವ ಅಂತಾರಾಷ್ಟ್ರೀಯ ಗುಣಮಟ್ಟದ ತರಬೇತಿ ಕಾರಣವಾಗಿದೆ. ತಾ| ಕೇಂದ್ರದಲ್ಲಿ ಇಂತಹ ಸೌಲಭ್ಯ ಇರುವುದು ಹೆಮ್ಮೆಯ ವಿಷಯ, ಉತ್ತಮ ಅವಕಾಶ ಎಂದರು.
ಕ್ರೀಡಾರಂಗದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಗುರುತಿಸುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರಸರಕಾರ ಹಲವು ಯೋಜನೆಗಳನ್ನೂ ಜಾರಿಗೊಳಿಸಿದೆ. ಪ್ರತಿಷ್ಟಿತ ಈಜುಕೊಳವಾಗಿ ಹೆಸರು ಮಾಡುತ್ತಿರುವ ಬಾಲವನದ ಈಜುಕೊಳಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಜಾಗತಿಕ ಮಟ್ಟದ ಹೆಗ್ಗಳಿಕೆ
ಬಾಲವನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಉದ್ಘಾಟನೆ ನೆರವೇರಿಸಿ, ಡಾ| ಕಾರಂತರ ಪ್ರಯೋಗ ಭೂಮಿ ರಾಜ್ಯಮಟ್ಟದ ಈಜುಕೊಳವನ್ನು ಹೊಂದಿ ಉತ್ತಮ ಹೆಸರು ಗಳಿಸಿದೆ. ಇಲ್ಲಿ ಆಧುನಿಕ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಅನುದಾನ ನೀಡಿದ್ದು, ಜಾಗತಿಕ ಮಟ್ಟದ ಕೊಳ ಗಮನ ಸೆಳೆದಿದೆ ಎಂದರು.
ಕಾರಂತರಿಗೂ ಖುಷಿ
ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಡಾ| ಶಿವರಾಮ ಕಾರಂತರು ಬಾಲವನದಲ್ಲಿ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ರೂಪಿಸಿದ್ದರು. ಈಗ ಈಜುಕೊಳದ ಮೂಲಕ ಸಾವಿರಾರು ಮಕ್ಕಳು ಸಾಧನೆ ಮಾಡುತ್ತಿರುವುದು ಕಾರಂತರ ಆತ್ಮಕ್ಕೆ ಅತ್ಯಂತ ಸಂತೋಷ ಕೊಡುವ ವಿಚಾರವಾಗಿದೆ ಎಂದರು. ಕೆಎಸ್‌ಎ ಉಪಾಧ್ಯಕ್ಷರಾದ ವಿಜಯ ರಾಘವನ್, ಎಸ್.ಆರ್. ಸಿಂಧ್ಯಾ, ಕಾರ್ಯದರ್ಶಿ ಸತೀಶ್ ಕುಮಾರ್ ಎಂ., ಜತೆ ಕಾರ್ಯದರ್ಶಿ ಎಂ.ಪಿ. ನಾಗರಾಜ್, ಹಿರಿಯರಾದ ಕೃಷ್ಣಮೂರ್ತಿ ವಾರಣಾಶಿ, ಅಶ್ವಿನಿ ಕೃಷ್ಣಮೂರ್ತಿ ಶುಭ ಹಾರೈಸಿದರು. ಈಜುಕೊಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಸ್ವಾಗತಿಸಿ, ಈಜುಕೊಳದ ಪ್ರಧಾನ ತರಬೇತುದಾರ, ನಿರ್ವಾಹಕ ಪಾರ್ಥ ವಾರಣಾಶಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುತ್ತೂರು ಅಕ್ವೆಟಿಕ್ ಕ್ಲಬ್ ಅಧ್ಯಕ್ಷೆ ಪ್ರತಿಮಾ ಹೆಗ್ಡೆ ವಂದಿಸಿದರು. ಕಾರ್ಯದರ್ಶಿ ದಿವ್ಯಾ ಅನಿಲ್ ರೈ ಸಹಕರಿಸಿದರು. ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.