ಪ್ರವಾಸಿಗರ ಸೆಳೆಯುತ್ತಿದೆ ಸಸ್ಯಕಾಶಿ


Team Udayavani, Dec 8, 2018, 12:46 PM IST

vij-3.jpg

ಆಲಮಟ್ಟಿ: ಪಟ್ಟಣವು ವಿವಿಧ ಉದ್ಯಾನಗಳು, ಬೃಹತ್‌ ಜಲಾಶಯ ಹೊಂದಿ ರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವತ್ತ ದಾಪುಗಾಲಿಟ್ಟಿದೆ. ಆಲಮಟ್ಟಿ ಎಂದೊಡನೆ ಕೇವಲ ಜಲಾಶಯ ಎಂದುಕೊಂಡವರು ಒಮ್ಮೆ ಆಲಮಟ್ಟಿಗೆ ಭೇಟಿ ನೀಡಿದರೆ ಸಾಕು ಮತ್ತೂಮ್ಮೆ ತಮ್ಮ ಕುಟುಂಬ ಸಮೇತರಾಗಿ ಹಾಗೂ ಗೆಳೆಯರೊಂದಿಗೆ ಭೇಟಿ ನೀಡುವಂತೆ ಆಗುತ್ತದೆ. ಹಸಿರಿನಿಂದ ಕಂಗೊಳಿಸುತ್ತಿರುವ ಉದ್ಯಾನಗಳು, ವಿವಿಧ ಮಾದರಿ ಕಟ್ಟಡಗಳು, ಸಂಗೀತ ನೃತ್ಯ ಕಾರಂಜಿ, ಕೃತಕ ಜಲಪಾತಗಳು, ಜಲಾಶಯದಿಂದ ಭೋರ್ಗರೆಯುತ್ತ ಬೀಳುವ ಹಾಲಿನ ನೊರೆಯಂತೆ ಕಾಣುವ ಜಲಧಾರೆ, ಅಧ್ಯಾತ್ಮಿಕ ಸಾರುವ ಮೂರ್ತಿಗಳು, ಯುವ ಪೀಳಿಗೆಯನ್ನು ತನ್ನಡೆಗೆ ಸೆಳೆಯುವ ಕಲಾಕೃತಿಗಳು ಹೀಗೆ ಒಂದರ ನಂತರ ಒಂದು ಗಮನ ಸೆಳೆಯುವ ಅಂಶಗಳು ಎಲ್ಲ ವಯೋಮಾನದವರನ್ನೂ ತನ್ನೆಡೆ ಸಾವಿರಾರು ಸಂಖ್ಯೆಯಲ್ಲಿ ಸೆಳೆಯುತ್ತಿದೆ.

ಲವ-ಕುಶ ಉದ್ಯಾನ: ರಾಮಾಯಣದಲ್ಲಿ ಬರುವ ಲವ-ಕುಶರ ಜನನ, ಸಕಲ ವಿದ್ಯೆ, ಲವ ಕುಶ ಸಹೋದರರು ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿ ಹನುಮಂತ, ವಾನರ ಸೇನೆ, ಶತೃಘ್ನರೊಂದಿಗೆ ಯುದ್ಧವಲ್ಲದೇ ತಮ್ಮ ತಂದೆ ರಾಮನೊಂದಿಗೂ ಘೋರ ಯುದ್ದ ನಡೆದಿರುವ ಸನ್ನಿವೇಶದ ಕಲಾಕೃತಿಗಳು ಹಾಗೂ ವಾಲುವ ಹಸಿರು ಗೋಡೆ ಗಮನ ಸೆಳೆಯುತ್ತಿದೆ. 

ಗೋಪಾಲಕೃಷ್ಣ ಉದ್ಯಾನ: ಶ್ರೀಕೃಷ್ಣನ ಜನನ ಹಾಗೂ ಆತನ ಬಾಲಲೀಲೆ, ಮಥುರೆ ಪಟ್ಟಣ, ಗೋವುಗಳ ಪಾಲನೆ ಮತ್ತು ಜಲ ಕನ್ಯೆಯರೊಂದಿಗೆ ಚೆಲ್ಲಾಟ ಹೀಗೆ ಗೋಪಾಲಕೃಷ್ಣನ ಲೀಲೆಗಳನ್ನು ಬಿಂಬಿಸುವ ಕಲಾಕೃತಿಗಳು ಜನಮನ ಸೂರೆಗೊಳ್ಳುತ್ತಿವೆ. 

ರಾಕ್‌ ಉದ್ಯಾನ: ಈ ಉದ್ಯಾನದಲ್ಲಿ ಹೆಸರೇ ಸೂಚಿಸುವಂತೆ ವಿವಿಧ ವನ್ಯ ಮೃಗಗಳು, ಜಲಚರಗಳು, ಸರಿಸೃಪಗಳು, ಉಭಯ ವಾಸಿಗಳು, ಗ್ರಾಮೀಣ ಜಾತ್ರೆ ಸೊಗಡು, ಬುಡಕಟ್ಟು ಜನಾಂಗದವರ ಜೀವನ ಶೈಲಿ, ಹೀಗೆ ಹಲವಾರು ವಿಶೇಷಗಳೊಂದಿಗೆ ಮಧ್ಯ ಭಾಗದಲ್ಲಿ ಸೂರ್ಯ ಪಾರ್ಕ್‌ ನಿರ್ಮಿಸಿ ಇದರಲ್ಲಿ ರಾಷ್ಟ್ರೀಯ ನಕ್ಷೆ, ರಾಷ್ಟ್ರೀಯ ಪ್ರಾಣಿ, ಪಕ್ಷಿ, ಹೂವು, ಹಣ್ಣುಗಳ ಕೃತಿ ರಚಿಸಲಾಗಿದೆ. ದೇಶದಲ್ಲಿ ಸರ್ವ ಜನಾಂಗ ಹಾಗೂ ಸರ್ವ ವಯೋಮಾನದವರು, ಲಿಂಗಭೇದವಿಲ್ಲದೇ ಒಂದಾಗಿರುವುದರಿಂದ ಸುಂದರ ಭಾರತ ನಿರ್ಮಾಣವಾಗಿದೆ ಎನ್ನುವುದರ ಸಂಕೇತವಾಗಿ ನಕ್ಷೆ ಸುತ್ತಲೂ ನಿಂತಿರುವ ಮಾನವ ಕೃತಿಗಳು ಭಾವೈಕ್ಯ ಸಂಕೇತವಾಗಿವೆ. ರಾಷ್ಟ್ರೀಯ ನಕ್ಷೆಯಲ್ಲಿ ತ್ರಿವರ್ಣ ಧ್ವಜ ನಿತ್ಯ ಪ್ರವಾಸಿಗರನ್ನು
ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಪುಟಾಣಿ ರೈಲು: ರಾಕ್‌ ಉದ್ಯಾನದಲ್ಲಿ 46.82 ಲಕ್ಷ ವೆಚ್ಚದಲ್ಲಿ ವಿದ್ಯುತ್‌ ಚಾಲಿತ ಪುಟಾಣಿ ರೈಲಿಗೆ ಸುಮಾರು 1.5 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಲಾಗಿದೆ. ರೈಲು ಎಂಜಿನ್‌ನೊಂದಿಗೆ ನಾಲ್ಕು ಬೋಗಿ ಒಳಗೊಂಡಿದೆ. ಒಂದು ಬೋಗಿಯಲ್ಲಿ ನಾಲ್ಕು ಜನರು ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಪ್ರವಾಸಿಗರನ್ನು ಉದ್ಯಾನದಲ್ಲಿ ಕುಟುಂಬ ಪರಿವಾರದೊಡನೆ ಸುತ್ತಾಡಿಸಿಕೊಂಡು ಬರಲು ಪುಟಾಣಿ ರೈಲು ಸಜ್ಜಾಗಿ ನಿಂತಿದೆ.

ರಾಕ್‌ ಉದ್ಯಾನದಲ್ಲಿ ಪ್ರವೇಶಿಸಿದೊಡನೆ ಎದುರಿನಲ್ಲಿ ಕೃತಕ ಕೆರೆ ನಿರ್ಮಿಸಲಾಗಿದ್ದು ಇದರಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ದೋಣಿ ವಿಹಾರ ಕೇಂದ್ರದ ಬಳಿ ನಿರ್ಮಿಸಲಾಗಿರುವ ಚಿಲ್ಡ್ರನ್‌ ಪಾರ್ಕ್‌ನಲ್ಲಿರುವ ಮಕ್ಕಳ ಆಟಿಕೆ ವಸ್ತುಗಳು ಗಮನ ಸೆಳೆಯುತ್ತಿದೆ. ಇದರಿಂದ ಆಟಕ್ಕೆ ಹೋದ ಮಕ್ಕಳು ಪಾಲಕರು ಗದರುವವರೆಗೂ ಪಾರ್ಕಿನಿಂದ ಹೊರ ಬರುವುದೇ ಇಲ್ಲ. ಅಷ್ಟೊಂದು ನವೀನ ಸಲಕರಣೆಗಳನ್ನು ಕೃಷ್ಣಾ ಭಾಗ್ಯ ಜಲ ನಿಗಮ ಅಳವಡಿಸಿದೆ.

ಆಲಮಟ್ಟಿಯಲ್ಲಿರುವ ಎಲ್ಲ ಉದ್ಯಾನಗಳಲ್ಲಿರುವ ಬಹುತೇಕ ಸಸ್ಯಗಳು ಔಷಧಿಯ ಗುಣಗಳನ್ನು ಹೊಂದಿದ್ದು ಆಯುರ್ವೇದ ಪಂಡಿತರನ್ನು ತನ್ನಡೆಗೆ ಸೆಳೆಯುತ್ತಿದೆ. ಮೊಘಲ್‌ ಉದ್ಯಾನದಲ್ಲಿ ನಿರ್ಮಿಸಲಾಗಿರುವ ಶಿವಲಿಂಗ ಪೂಜಾನಿರತ ಆನೆ, ಹಸಿರು ಕರಡಿ, ಮೊಲ, ಆನೆ, ಹೀಗೆ ಹಲವಾರು ಪ್ರಾಣಿಗಳು ಸಸ್ಯದಲ್ಲಿಯೇ ಗಮನ ಸೆಳೆಯುತ್ತಿವೆ.

 ಸಂಗೀತ ನೃತ್ಯ ಕಾರಂಜಿ: ಸಂಜೆ ವೇಳೆಯಲ್ಲಿ ಆರಂಭವಾಗುವ ಸಂಗೀತ ನೃತ್ಯ ಕಾರಂಜಿ ಎಲ್ಲ ವಯೋಮಾನದವರನ್ನೂ ವಿವಿಧ ಸಂಗೀತ ಹಾಗೂ ಗೀತೆಗಳಿಂದ ಆಕರ್ಷಿಸುತ್ತಿದೆ. ಪ್ರವಾಸಿಗರಿಗೆ ಅಗತ್ಯವಾಗಿರುವ ಎಲ್ಲ ಮೂಲಭೂತ ಸೌಲಭ್ಯಗಳೂ ಆಲಮಟ್ಟಿಯಲ್ಲಿದ್ದು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. 

„ಶಂಕರ ಜಲ್ಲಿ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.