“ಮಾರು’ ವೇಷ: ಕ್ಯಾಮೆರಾ ಕಣ್ಣಲ್ಲಿ ಕೆ.ಆರ್. ಮಾರುಕಟ್ಟೆ
Team Udayavani, Dec 8, 2018, 3:29 PM IST
“ಬೆಳಕಿದ್ದಲ್ಲಿ ಕತ್ತಲೆಗೆ ಜಾಗವಿಲ್ಲ’ ಎಂಬುದು ಹಳೆಯ ನಾಣ್ಣುಡಿ. ವಾಸ್ತವವಾಗಿ ಅವೆರಡೂ ಒಟ್ಟೊಟ್ಟಿಗೇ ಇರುವಂಥವು! ಕಲೆ ಅಥವಾ ಛಾಯಾಗ್ರಹಣದಲ್ಲಿ ಸೃಜನಶೀಲ ಕಣ್ಣಿನ ದೃಷ್ಟಿಕೋನವು ಅವೆರಡನ್ನು ಒಂದರೊಡನೆ ಒಂದು ಆಟವಾಡುವಂತೆ ಮಾಡಬಲ್ಲದು. ದೈನಂದಿನ ಚಟುವಟಿಕೆ ಅಚ್ಚರಿಯೆಂದರೆ ಅನೇಕ ಕ್ಷಣಗಳು ನಮ್ಮ ಕಣ್ಣಿಗೆ ಬೀಳದೆ ಕಳೆದುಹೋಗುವುದೇ ಹೆಚ್ಚು. ಇಂಥ ಕ್ಷಣಗಳನ್ನು ಸೆರೆಹಿಡಿದು ಚಿತ್ರಮಾಲಿಕೆಯನ್ನಾಗಿಸಿದವರು ಛಾಯಾಗ್ರಾಹಕ ಕೆ. ಮಂಜುನಾಥ್. ಈ ಬಾರಿ ಅವರು ಆರಿಸಿಕೊಂಡ ಜಾಗ ಕೆ.ಆರ್. ಮಾರುಕಟ್ಟೆ. ಅಲ್ಲಿನ ಕತ್ತಲು ಬೆಳಕಿನ ನಡುವಿನ ಹೋರಾಟವನ್ನು ಮಾತ್ರವಲ್ಲದೆ ಅಸಂಗತ ವಿದ್ಯಮಾನಗಳನ್ನೂ ಗ್ರಹಿಸುವುದು ಅವರ ವೈಶಿಷ್ಟéತೆ.
ಮೇಲುಸೇತುವೆ ಕೆಳಗಡೆ ಸಂಭ್ರಮ ಪಕ್ಕನೆ ನೋಡಿದರೆ ಕಾಣದು. ಧ್ಯಾನಸ್ಥರಾದಾಗ ಮಾತ್ರ ಅದು ಕಾಣುತ್ತದೆ. ನಿಧಾನಗತಿಯಲ್ಲಿ ಸಾಗುವ ವಾಹನಗಳ ಹೆಡ್‌ಲ್ಯಾಂಪುಗಳ ಪ್ರಭೆ, ಕೈಗಳಲ್ಲಿ ತಲೆ ಮೇಲೆ ಬ್ಯಾಗು ಹಿಡಿದು ಅವಸರದಿಂದ ಮನೆಗೆ ತೆರಳುತ್ತಿರುವ ಮಂದಿ ಜೀವಂತಿಕೆಯಲ್ಲಿ ತುಳುಕುತ್ತಿರುತ್ತಾರೆ. ಅಲ್ಲೂ ಒಂದು ಸೌಂದರ್ಯವಿದೆ ಎನ್ನುವುದನ್ನು ಕಂಡುಕೊಂಡವರು ವೆಂಕಟೇಶ್.
ಮಾರುಕಟ್ಟೆಯಲ್ಲಿ ಎಡತಾಕುವ ಗೋಡೆ, ರಸ್ತೆ, ಅಪರಿಚಿತರ ಮನುಷ್ಯರು, ಅಷ್ಟೇ ಯಾಕೆ ನಾಯಿ, ದನ- ಕರುಗಳೂ ಮಾರುಕಟ್ಟೆಯೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ ಎನ್ನುವುದು ಛಾಯಾಗ್ರಾಹಕರ ಅನುಭವದ ಮಾತು. ಕೆ.ಆರ್. ಮಾರುಕಟ್ಟೆಯ ಚಿತ್ರಮಾಲಿಕೆಯ ಹಿಂದೆ ಒಂದು ಅದ್ಭುತ ಹೊಳಹು ಇದೆ. ಸರಕು ಗಾಡಿಗಳನ್ನು ತಳ್ಳುವ, ಮಣಭಾರದ ತರಕಾರಿ ಸಾಮಗ್ರಿ ಹೊತ್ತುಕೊಂಡು ಓಡಾಡುವ, ಸೂರ್ಯ ಮೂಡುವ ಮುಂಚೆಯೇ ನೆಲದ ಮೇಲೆ ಹಾಸು ಹಾಸಿ ಕುಳಿತು ರಾತ್ರಿ ಕತ್ತಲಲ್ಲಿ ಕರಗಿ ಹೋಗುವ, ಹೋರಾಟ ಜೀವನ ನಡೆಸುತ್ತಾ ಜೀವನದ ಬಂಡಿಯನ್ನು ಎಳೆಯುತ್ತಿರುವ ಶ್ರೀಸಾಮಾನ್ಯರಿಂದಲೇ ಕಲಿಯಬಹುದಾದ್ದು ತುಂಬಾ ಇವೆ. ಇಲ್ಲಿನ ಚಿತ್ರಗಳನ್ನು ನೋಡುತ್ತಿದ್ದರೆ ಅದು ದಿಟವಾಗುತ್ತದೆ.
ಜೀವನದಲ್ಲಿ ಎಲ್ಲಾ ಕಷ್ಟಗಳೂ, ಅಂದುಕೊಂಡರೆ ಮಾತ್ರ ಕಷ್ಟ. ಮಾರುಕಟ್ಟೆಯಲ್ಲೇ ಜೀವನ ನಡೆಸುವ ಜೀವಗಳಿಂದ ಮನಗೊಂದಿಷ್ಟು ಜೀವನೋತ್ಸಾಹ ಸಿಕ್ಕಲಿ ಎಂಬ ಆಶಯವೇ ಈ ಚಿತ್ರಸರಣಿಯ ಆಶಯ– ಕೆ. ವೆಂಕಟೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru: ತ್ಯಾಜ್ಯ ವರ್ಗಾವಣೆ ಘಟಕಕ್ಕೆ ಸಿದ್ದರಾಮಯ್ಯ ಚಾಲನೆ
Bengaluru: ಜೀವಾ ಆತ್ಮಹತ್ಯೆ: ಡಿವೈಎಸ್ಪಿಗೆ ಸಿಸಿಬಿ ನೋಟಿಸ್ ಸಾಧ್ಯತೆ
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
Bengaluru: ಸಾಲ ಕೊಡಿಸುವುದಾಗಿ 37 ಲಕ್ಷ ವಂಚನೆ
Maharashtra: ದಿಢೀರನೆ ಊರಿಗೆ ತೆರಳಿದ ಶಿಂಧೆ; ಮತ್ತೆ ಮುಂದುವರಿದ ʼಮಹಾ ಸಿಎಂʼ ಕಗ್ಗಂಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.