ಅಕ್ಷರಗಳಲ್ಲಿ ಅಮರರಾದ ಕಲಾವಿದ


Team Udayavani, Dec 9, 2018, 6:00 AM IST

yakshagana-sss.jpg

ಯಕ್ಷಗಾನ ರಂಗದಲ್ಲಿ ತಮ್ಮ ವಿಶಿಷ್ಟ ಶೈಲಿಯ ಲಯಸಂಪನ್ನ ನೃತ್ಯ ಭಂಗಿ-ಹಾವ-ಭಾವಗಳಿಂದಲೇ ಪ್ರೇಕ್ಷಕರನ್ನು ಪ್ರಬಲವಾಗಿ ಸೆಳೆದುಕೊಂಡವರು ಚಿಟ್ಟಾಣಿ ರಾಮಚಂದ್ರ ಹೆಗಡೆ. ಸಾಂಪ್ರದಾಯಿಕ ಹೆಜ್ಜೆಗಾರಿಕೆಯೊಂದಿಗೆ ಹೊಸ ಕಲ್ಪನೆಯ ಹೆಜ್ಜೆಗತಿಗಳನ್ನು ಬೆರೆಸಿ ಯಕ್ಷನೃತ್ಯದ ಹೊಸ ಪರಿಭಾಷೆಯನ್ನು ಹುಟ್ಟುಹಾಕಿ ಪ್ರೇಕ್ಷಕರಲ್ಲಿ ರೋಮಾಂಚನಕಾರಿ ಅನುಭವವನ್ನು ಮೂಡಿಸಿದವರು. ಪದ್ಮಶ್ರೀ ಪುರಸ್ಕೃತರಾಗಿ ಈ ಕ್ಷೇತ್ರಕ್ಕೆ ವಿಶೇಷ ಗೌರವದ ಕಿರೀಟವನ್ನು ತೊಡಿಸಿದವರು. 

ಕಳೆದ ವರ್ಷವಷ್ಟೆ ನಿಧನರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಆರು ದಶಕ ಕಾಲದ ಕಲಾಯಾನದ ವಿವಿಧ ಮಗ್ಗುಲುಗಳನ್ನು ನೋಡಿ, ಮೆಚ್ಚಿ ಆನಂದಿಸಿದ ಅವರ ಅಭಿಮಾನಿಗಳು, ಸಹಕಲಾವಿದರು, ಮೇಳ-ಪ್ರದರ್ಶನಗಳಲ್ಲಿ ಸಹಯಾನ ನಡೆಸಿದ ಭಾಗವತರು, ಯಕ್ಷಗಾನ ಕಲಾವಿಮರ್ಶಕರು, ಮಕ್ಕಳು, ಬಂದು-ಮಿತ್ರರು ಸಲ್ಲಿಸಿರುವ ನುಡಿ-ನಮನಗಳ ಸಂಕಲನ ಇದು. ಇಲ್ಲಿನ ಹೆಚ್ಚಿನ ಬರಹಗಳಲ್ಲಿ ಜೀವಂತರಾಗಿದ್ದಾಗಲೇ ದಂತಕತೆಯಾಗಿದ್ದ ಚಿಟ್ಟಾಣಿಯವರ ಬಗೆಗಿನ ಅಭಿಮಾನ ಹೇಗೋ ಹಾಗೆಯೇ ಅವರ ಕಲೆಗಾರಿಕೆ-ಕಸುಬುಗಾರಿಕೆಯ ವಸ್ತುನಿಷ್ಠ ಅವಲೋಕನವೂ ಇದೆ. ಅವರು ಯಕ್ಷಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಅಧ್ಯಯನ ನಡೆಸಿ ಡಾಕ್ಟರೇಟ್‌ ಪದವಿ ಗಳಿಸಿರುವ ಸಂಪಾದಕರು ಇಲ್ಲಿ ತಾವು ಸಂಕಲಿಸಿರುವ ಬರಹಗಳ ಬಗ್ಗೆ ಹೇಳುತ್ತ “ಚಿಟ್ಟಾಣಿಯವರ ಲಯಸಿದ್ಧಿ’ ನೃತ್ಯದ ಲಯದಲ್ಲಿ ಮಾತ್ರವಲ್ಲ, ಅದು ಪಾತ್ರಗಳ ಶೀಲಸ್ವಭಾವವೂ ಹೌದು; ಸಾಂಪ್ರದಾಯಿಕ ಕುಣಿತದೊಂದಿಗೆ ಹೊಸ ಕುಣಿತವನ್ನೂ ನೀಡಿದರು; ಅದಿಂದು “ಚಿಟ್ಟಾಣಿ ಕುಣಿತ’ವೆಂದೇ ಕರೆಸಿಕೊಳ್ಳುವಷ್ಟು ಪ್ರಸಿದ್ಧವಾಗಿದೆ’ ಎನ್ನುತ್ತಾರೆ. ಈ ಸಂಕಲದಲ್ಲಿರುವ “ನವರಸ ನಾಯಕ ಚಿಟ್ಟಾಣಿ’ ಎಂಬ ಅವರದೇ ಬರಹ ಈ ಮಾತಿಗೆ ಪುರಾವೆಗಳನ್ನು ಒದಗಿಸುತ್ತದೆ. 

“ಉದ್ಭವ ಕಲಾವಿದ’ (ಕಡತೋಕ ಗೋಪಾಲಕೃಷ್ಣ ಭಾಗವತ), “ಯಕ್ಷಗಾನದ ಕೋಲಿ¾ಂಚು-ಚಿಟ್ಟಾಣಿ’ (ಅಂಬಾತನಯ ಮುದ್ರಾಡಿ), “ರಂಗಮಂಚದ ಮಿಂಚು’ (ಉಮಾಕಾಂತ ಭಟ್ಟ), “ಮಮತೆಯ ಕಡಲು’ (ಸುಶೀಲಾ ರಾಮಚಂದ್ರ ಹೆಗಡೆ) ಮುಂತಾದ ಇಲ್ಲಿನ ನುಡಿಚಿತ್ರಗಳು ಅಭಿಮಾನದ ಅತಿರೇಕವಿಲ್ಲದೆ ಕಲಾ ಸಾಧಕನೊಬ್ಬನನ್ನು ಬೇರೆ ಬೇರೆ ನೆಲೆಗಳಿಂದ ಹೇಗೆ ನೋಡಬಹುದೆಂಬುದನ್ನು ಶ್ರುತಪಡಿಸುವ ಅಕ್ಷರರೂಪೀ ಗೌರವಾರ್ಪಣೆಯ ನುಡಿಕುಸುಮಗಳಾಗಿ ಸಾರ್ಥಕತೆ ಪಡೆದಿವೆ. ಜತೆಗೆ ಅವರ ನಿಲುವನ್ನು ಕಾಣಿಸುವ ಸಂದರ್ಶನ ಬರಹಗಳು, ಕಾವ್ಯರೂಪಿ ಶ್ರದ್ಧಾಂಜಲಿಗಳು, ಅವರ ಕಲಾಯಾನದ ಮಹಣ್ತೀದ ಕ್ಷಣಗಳನ್ನು ಕಾಣಿಸುವ ಅಪರೂಪದ ಛಾಯಾಚಿತ್ರಗಳು, ಅವರು ಪಡೆದ ವಿಶೇಷ ಪ್ರಶಸ್ತಿಗಳ ಪಟ್ಟಿ ಕೂಡ ಇದ್ದು , ಇವೆಲ್ಲವೂ ಈ ಗ್ರಂಥಕ್ಕೆ ಸೊಬಗು ಹಾಗೂ ಘನತೆಯನ್ನು ನೀಡಿವೆ.

– ಜಕಾ

ಟಾಪ್ ನ್ಯೂಸ್

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

Jnanpith Award: ಭೃಂಗದ ಬೆನ್ನೇರಿ ಬಂತು ಜ್ಞಾನಪೀಠ!

6

ಐರನ್‌ ಮ್ಯಾನ್: ರೀಲ್‌ ಅಲ್ಲ, ರಿಯಲ್‌ ಹೀರೋಗಳ ಕಥೆ!

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

ಹೆಸರಾಯಿತು ಕರ್ನಾಟಕ: ಮರು ನಾಮಕರಣ ಹೋರಾಟದ ಆ ದಿನಗಳು…

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

1-modi

BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ

Exam 2

SSLC ಪರೀಕ್ಷೆ ನೋಂದಣಿ: ನ.30ರವರೆಗೆ ಅವಧಿ ವಿಸ್ತರಣೆ

R Ashok (2)

R. Ashok; ಪಾಪ, ನಿಖಿಲ್‌ ಅದೃಷ್ಟವೇ ಸರಿಯಿಲ್ಲ…

1-dkkk

HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್‌

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.