ವಿದೇಶಿ ಹಣ ಸ್ವೀಕರಿಸುವಲ್ಲಿ ಭಾರತಕ್ಕೆ ಮೊದಲ ಸ್ಥಾನ
Team Udayavani, Dec 9, 2018, 9:00 AM IST
ವಾಷಿಂಗ್ಟನ್: ವಿದೇಶದಲ್ಲಿರುವ ಭಾರತೀಯರು ತಮ್ಮ ಕುಟುಂಬಕ್ಕೆ ಹಣವನ್ನು ಕಳುಹಿಸುವಲ್ಲಿ ಮೊದಲಿನಂತೆಯೇ ಬದ್ಧವಾಗಿದ್ದಾರೆ. ವಿಶ್ವಬ್ಯಾಂಕ್ ವರದಿ ಪ್ರಕಾರ, 2018ರಲ್ಲಿ 8000 ಕೋಟಿ ಡಾಲರ್ (5.60 ಲಕ್ಷ ಕೋಟಿ ರೂ.) ಭಾರತಕ್ಕೆ ವಿದೇಶದಿಂದ ಹರಿದು ಬಂದಿದೆ. ನಂತರದ ಸ್ಥಾನ ಚೀನಾ (4.69 ಲಕ್ಷ ಕೋಟಿ ರೂ.), ಮೆಕ್ಸಿಕೋ, ಫಿಲಿಪೀನ್ಸ್ (2.38 ಲಕ್ಷ ಕೋಟಿ ರೂ.) ಮತ್ತು ಈಜಿಪ್ಟ್ಗೆ (1.82 ಲಕ್ಷ ಕೋಟಿ ರೂ.) ಸಿಕ್ಕಿದೆ. ಕಳೆದ ಕೆಲವು ವರ್ಷಗಳಿಂದ ವಿದೇಶದಿಂದ ಭಾರತಕ್ಕೆ ಹರಿದು ಬರುತ್ತಿರುವ ಹಣದಲ್ಲಿ ಭಾರಿ ಏರಿಕೆಯಾಗಿದೆ. 2017ರಲ್ಲಿ ಹೀಗೆ ವಿದೇಶದಿಂದ ಹರಿದು ಬಂದ ಹಣವೇ ಜಿಡಿಪಿಯ ಶೇ. 2.7 ರಷ್ಟಾಗಿತ್ತು. ಸರಾಸರಿ ಶೇ. 10.3 ದರದಲ್ಲಿ ಒಳಹರಿವು ಮೊತ್ತ ಏರಿಕೆಯಾಗಿದ್ದು, ಮುಂದಿನ ವರ್ಷ ಇದು ಶೇ. 3.7ಕ್ಕೆ ಕುಸಿಯಲಿದೆ ಎಂದು ವಿಶ್ವಬ್ಯಾಂಕ್ ನಿರೀಕ್ಷಿಸಿದೆ.
ಅಮೆರಿಕ ಹಾಗೂ ಇತರ ದೇಶಗಳ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದರಿಂದ ಈ ಹಣ ಹರಿವು ಪ್ರಮಾಣ ಹೆಚ್ಚಾಗಿದೆ. ಅಲ್ಲದೆ ಗಲ್ಫ್ ದೇಶಗಳ ಹೊರಹರಿವು ಕೂಡ ಒಟ್ಟು ಶೇ. 13ರಷ್ಟು ಹೆಚ್ಚಳವಾಗಿದ್ದು, ಭಾರತಕ್ಕೆ ಅನುಕೂಲವಾಗಿ ಪರಿಣಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.