ಮೈಕಲ್ ವಿಚಾರಣೆಗೆ ಮತ್ತೂಂದು ಆಯಾಮ
Team Udayavani, Dec 9, 2018, 9:00 AM IST
ನವದೆಹಲಿ: ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ತನ್ನ ವಶದಲ್ಲಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮೈಕಲ್ನನ್ನು ವಿಚಾರಣೆಗೊಳಪಡಿಸಿರುವ ಸಿಬಿಐ, ಅಗಸ್ಟಾ ಕಂಪನಿಯಿಂದ ಆಗಿರಬಹು ದಾದ ಇತರ ಅವ್ಯವಹಾರಗಳ ಬಗ್ಗೆಯೂ ವಿಚಾರಿಸಲಾರಂಭಿಸಿದೆ. ಇದರಲ್ಲಿ ಪ್ರಮುಖವಾದದ್ದು ಭಾರತೀಯ ಸೇನೆಗೆ ಈ ಹಿಂದೆ ಖರೀದಿಸಲು ನಿರ್ಧರಿಸಲಾಗಿದ್ದ ಲಘು ಸಾಮರ್ಥ್ಯದ ಹೆಲಿಕಾಪ್ಟರ್ ವ್ಯವಹಾರವೂ ಒಂದು.
ಏನದು ಪ್ರಕರಣ?: 2012ಕ್ಕೂ ಮೊದಲೇ ಭಾರತೀಯ ಸೇನೆಗೆ ಅಗಸ್ಟಾ ವೆಸ್ಟ್ಲ್ಯಾಂಡ್ನಿಂದ 197 ಲಘು ಸಾಮ ರ್ಥ್ಯದ ಯುದ್ಧ ವಿಮಾನಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿತ್ತು. ಆ ಟೆಂಡರ್ ಗೆಲ್ಲಲು ಯತ್ನಿಸಿದ್ದ ಅಗಸ್ಟಾ ವೆಸ್ಟ್ಲ್ಯಾಂಡ್ನ ಮಧ್ಯವರ್ತಿಯಾಗಿದ್ದವನು ಗೈಡೋ ಹಾಶ್ಕ್. ಈತ ಮೈಕಲ್ನ ಜೊತೆಗಾರ. 2013ರಲ್ಲಿ ಹಾಶ್ಕ್ನನ್ನು ಬಂಧಿಸಿದ್ದ ಇಟಲಿಯ ತನಿಖಾ ಸಂಸ್ಥೆ, ಹಗರಣದ ಅಮೂಲ್ಯ ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಆ ದಾಖಲೆಗಳ ಆಧಾರದಲ್ಲಿ ಕೇಸ್ ದಾಖಲಿಸಿಕೊಂಡಿದ್ದ ಸಿಬಿಐ, 3,000 ಕೋಟಿ ರೂ.ಗಳ ಈ ವ್ಯವಹಾರದಲ್ಲಿ 34 ಕೋಟಿ ರೂ.ಗಳ ಲಂಚದ ಬೇಡಿಕೆಯಿಟ್ಟ ಆರೋಪ ಹೊತ್ತಿದ್ದ ಅಂದಿನ ಸೇನಾ ಬ್ರಿಗೇಡಿಯರ್ ವಿ.ಎಸ್. ಸೈನಿ ಅವರನ್ನು ಪ್ರಮುಖ ಆರೋಪಿಯನ್ನಾಗಿಸಿತ್ತು. ಆದರೆ, ಇದೆಲ್ಲಾ ಆಗುವ ಮೊದಲೇ ವಿವಿಐಪಿ ಕಾಪ್ಟರ್ ಹಗರಣ 2012ರಲ್ಲೇ ಸ್ಫೋಟಗೊಂಡ ಹಿನ್ನೆಲೆಯಲ್ಲಿ, ಲಘು ಸಾಮ ರ್ಥ್ಯದ ಹೆಲಿಕಾಪ್ಟರ್ ಟೆಂಡರ್ ಅನ್ನು ಭಾರತ ಸರ್ಕಾರ ಕೈಬಿಟ್ಟಿತ್ತು. ಆದರೆ, ಸಿಬಿಐನಲ್ಲಿ ಈ ಪ್ರಕರಣ ಇನ್ನೂ ಬಾಕಿ ಉಳಿದಿದ್ದು, ಮೈಕಲ್ ಪ್ರಕರಣದ ನಂತರ ಆ ಪ್ರಕರಣಕ್ಕೂ ಜೀವ ಬಂದಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.