ಈ ವರ್ಷ 230 ಉಗ್ರರ ದಮನ
Team Udayavani, Dec 9, 2018, 9:00 AM IST
ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಭದ್ರತಾ ಪಡೆಗಳಿಗೆ ಸಿಕ್ಕ ಮಹತ್ವದ ಯಶಸ್ಸು ಎಂಬಂತೆ, ಪ್ರಸಕ್ತ ವರ್ಷ ಕಣಿವೆ ರಾಜ್ಯದಲ್ಲಿ ಬರೋಬ್ಬರಿ 230 ಭಯೋತ್ಪಾದಕರ ಹುಟ್ಟಡಗಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷದಲ್ಲಿ 230 ಮಂದಿ ಉಗ್ರರನ್ನು ಹತ್ಯೆಗೈಯ್ಯಲಾಗಿದ್ದು, ಕಳೆದ ಕೆಲವು ತಿಂಗಳಿಂದ ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗುತ್ತಿರುವ ಯುವಕರ ಸಂಖ್ಯೆಯೂ ಇಳಿಮುಖವಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.
ಸೇನಾ ಕಮಾಂಡರ್ ಲೆ.ಜ. ರಣಬೀರ್ ಸಿಂಗ್ ಅವರೂ ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯರು ಕೂಡ ಉಗ್ರರ ಚಲನ ವಲನಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ನಾಗರಿಕರ ಬೆಂಬಲವಿದ್ದರೆ ಉಗ್ರವಾದವನ್ನು ಸುಲಭವಾಗಿ ಮಟ್ಟ ಹಾಕಬಹುದು. ಪಾಕಿಸ್ತಾನಕ್ಕೆ ಈ ಬೆಳವಣಿಗೆ ಯಿಂದ ಹತಾಶೆಯಾಗಿದ್ದು, ಇನ್ನಷ್ಟು ಉಗ್ರರನ್ನು ಭಾರತದೊಳಕ್ಕೆ ನುಸುಳುವಂತೆ ಮಾಡಲು ಪ್ರಯತ್ನಿಸುತ್ತಿದೆ. ಆದರೆ, ನಾವು ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಅಲ್ಲದೆ, ಸರ್ಕಾರ ಹಾಗೂ ಭದ್ರತಾ ಪಡೆಗಳು ಕೈಗೊಂಡಿರುವ ಎಲ್ಲ ಯೋಜನೆಗಳಿಗೂ ಸೂಕ್ತ ಪ್ರತಿಫಲ ಸಿಗುತ್ತಿದೆ. ರಾಜ್ಯದಲ್ಲಿ ಯುವಕರನ್ನು ಉಗ್ರವಾದದತ್ತ ಸೆಳೆಯಲು ಸೇನೆ ಬಿಡುತ್ತಿಲ್ಲ. ಹೀಗಾಗಿ, ಯುವಕರ ಸೇರ್ಪಡೆ ಗಣನೀಯ ಇಳಿಕೆ ಕಂಡಿದೆ ಎಂದೂ ಸಿಂಗ್ ತಿಳಿಸಿದ್ದಾರೆ.
ಕಲ್ಲು ತೂರಾಟವೂ ಕಡಿಮೆ: ಪ್ರಸಕ್ತ ಸಾಲಿನಲ್ಲಿ ಈವರೆಗೆ ಲಷ್ಕರ್-ಎ-ತೊಯ್ಬಾ, ಹಿಜ್ಬುಲ್ ಮುಜಾಹಿದೀನ್‌ನಂಥ ಉಗ್ರ ಸಂಘಟನೆಗಳ ಟಾಪ್ ಕಮಾಂಡರ್‌ಗಳು ಸೇರಿದಂತೆ ಒಟ್ಟು 230 ಉಗ್ರರನ್ನು ಹೊಡೆದುರುಳಿಸಲಾಗಿದೆ. ಅದರಲ್ಲೂ ಜೂನ್ 25ರಿಂದ ಸೆಪ್ಟೆಂಬರ್ 14ರವರೆಗೆ ಅಂದರೆ 80 ದಿನಗಳ ಅವಧಿಯಲ್ಲಿ 51 ಮಂದಿ ಹಾಗೂ ಸೆ.15ರಿಂದ ಡಿಸೆಂಬರ್ 5ರ ಅವಧಿಯಲ್ಲಿ 85 ಮಂದಿ ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ. ಅಲ್ಲದೆ, ಕಲ್ಲು ತೂರಾಟಗಳ ಗಾಯಾಳುಗಳ ಸಂಖ್ಯೆಯೂ ಕಡಿಮೆಯಾಗಿದೆ ಎಂದು ಗೃಹ ಇಲಾಖೆಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ವಿದೇಶಿಯರು ಸೇರಿದಂತೆ ಒಟ್ಟಾರೆ 240 ಉಗ್ರರು ಕಣಿವೆ ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ. ಜೂ.24ರಿಂದ ಸೆ.14ರ ನಡುವೆ ಯೋಧರು ಸೇರಿದಂತೆ 8 ಮಂದಿ ಅಸುನೀಗಿದ್ದು, 216 ಮಂದಿ ಗಾಯಗೊಂಡಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಾಗಿನಿಂದಲೂ ಭದ್ರತಾ ಸನ್ನಿವೇಶದಲ್ಲಿ ಗಣನೀಯ ಸುಧಾ ರಣೆ ಕಂಡುಬಂದಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕ್‌ನಿಂದ ಅಪ್ರಚೋದಿತ ದಾಳಿ: ಜಮ್ಮು- ಕಾಶ್ಮೀರದ ರಜೌರಿ ವಲಯದಲ್ಲಿನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನದ ಪಡೆಯು ಶನಿವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತೀಯ ಯೋಧರೂ ಪ್ರತಿದಾಳಿ ನಡೆಸಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. 2 ದಿನಗಳ ಹಿಂದಷ್ಟೇ ಪಾಕ್ ಪಡೆಯು ಕದನ ವಿರಾಮ ಉಲ್ಲಂಘಿಸಿ, ದಾಳಿ ನಡೆಸಿದ ಪರಿಣಾಮ ಬಿಎಸ್‌ಎಫ್ನ ಯೋಧರೊಬ್ಬರು ಹುತಾತ್ಮರಾಗಿದ್ದರು.
18 ಕೋಟಿಯಲ್ಲಿ 180 ಮುಸ್ಲಿಮರು ಮಾತ್ರ ಐಸಿಸ್‌ಗೆ
ದೇಶದ 18 ಕೋಟಿ ಮುಸ್ಲಿಮರ ಪೈಕಿ ಕೇವಲ 180 ಮಂದಿ ಐಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಗುಪ್ತಚರ ದಳದ ಮಾಜಿ ನಿರ್ದೇಶಕ ಸೈಯದ್ ಆಸಿಫ್ ಇಬ್ರಾಹಿಂ ಹೇಳಿದ್ದಾರೆ. ಭಾರತದಲ್ಲಿ ಸಲಫಿ ಹೊರತಾದ ಹಾಗೂ ಸೂಫಿ ಸಿದ್ಧಾಂತದ ಮುಸ್ಲಿಮರು ಇರುವುದರಿಂದಾಗಿ ಉಗ್ರ ಸಂಘಟನೆಯತ್ತ ಜನರು ಆಕರ್ಷಿತರಾಗಿಲ್ಲ. ಈ ಸಿದ್ಧಾಂತವು ಪ್ರಜಾಪ್ರಭುತ್ವ ಪರ ನಿಲುವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ಹೆಚ್ಚು ಧಾರ್ಮಿಕರಾದಷ್ಟೂ ಹೆಚ್ಚು ಉಗ್ರವಾದದತ್ತ ಸೆಳೆಯಲ್ಪಡುತ್ತಾರೆ ಎಂದು ನಂಬಲಾಗಿದೆ. ಆದರೆ ಐಸಿಸ್‌ನಿಂದ ವಾಪಸಾದವರನ್ನು ಇಂಗ್ಲೆಂಡ್‌ನ ಭದ್ರತಾ ಪಡೆಗಳು ಸಂದರ್ಶನ ನಡೆಸಿದಾಗ, ಉಗ್ರವಾದದತ್ತ ಆಕರ್ಷಿತರಾದವರೆಲ್ಲರೂ ಧರ್ಮದ ಬಗ್ಗೆ ಅತ್ಯಂತ ಕಡಿಮೆ ತಿಳಿದುಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದು ಅವರು ಹೇಳಿದ್ದಾರೆ.
259 ಯುವಕರು ಸೇನೆಗೆ ಸೇರ್ಪಡೆ
ಕಣಿವೆ ರಾಜ್ಯದ 259 ಯುವಕರು ಭಾರತೀಯ ಸೇನೆಯ ಜಮ್ಮು ಕಾಶ್ಮೀರ ಲೈಟ್ ಇನ್‌ಫೆಂಟ್ರಿ(ಜೆಕೆಎಲ್‌ಐ) ಬೆಟಾಲಿಯನ್‌ಗೆ ಸೇರ್ಪಡೆಯಾಗಿದ್ದಾರೆ. ಶ್ರೀನಗರದ ರಂಗರೇತ್‌ನಲ್ಲಿರುವ ರೆಜಿಮೆಂಟಲ್ ಕೇಂದ್ರದಲ್ಲಿ ಒಂದು ವರ್ಷದ ತರಬೇತಿ ಪಡೆದ ಬಳಿಕ ಇವರು ಅಧಿಕೃತವಾಗಿ ಸೇನೆಗೆ ಸೇರಿದ್ದಾರೆ. ಉಗ್ರವಾದಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಇಳಿಮುಖವಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಈ ಸಿಹಿಸುದ್ದಿಯೂ ಬಂದಿರುವುದು ಭದ್ರತಾ ಪಡೆಗಳಿಗೆ ಹಾಗೂ ಕಣಿವೆ ರಾಜ್ಯದ ನಾಗರಿಕರಿಗೆ ನೆಮ್ಮದಿ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa; ಸನ್ ಬರ್ನ್ ಫೆಸ್ಟಿವಲ್ ನಲ್ಲಿ ಕುಸಿದು ಬಿದ್ದು ಯುವಕ ಸಾ*ವು!
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್
Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Army Vehicle Tragedy:ಕೊಡಗಿನ ಗಾಯಾಳು ಯೋಧ ಚಿಕಿತ್ಸೆ ಫಲಕಾರಿಯಾಗದೆ ಸಾ*ವು
Ullala: ಸಮುದ್ರ ವಿಹಾರಕ್ಕೆ ಆಗಮಿಸಿದ ವ್ಯಕ್ತಿ ಅಲೆಗಳಿಗೆ ಸಿಲುಕಿ ಮೃತ್ಯು!
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
ಹೊಸ ವರ್ಷದ ಶುಭಾಶಯ ನೆಪದಲ್ಲಿ ವಂಚನೆ ಸಾಧ್ಯತೆ “ಎಪಿಕೆ ಫೈಲ್’ ತೆರೆಯದಂತೆ ಪೊಲೀಸರ ಸೂಚನೆ
Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.