ಮಕ್ಕಳು ಮೊಬೈಲ್ ಗೇಮ್‌ಗೆ ತುತ್ತಾಗದಂತೆ ಎಚ್ಚರ ವಹಿಸಿ
Team Udayavani, Dec 9, 2018, 6:10 AM IST
ಬೆಂಗಳೂರು : ವಿದ್ಯಾರ್ಥಿಗಳು ಬ್ಲೂ-ವೇಲ್, ಪಬ್‌ಜಿ ಮೊದಲಾದ ಇಂಟರ್‌ನೆಟ್ ಹಾಗೂ ಮೊಬೈಲ್ ಗೇಮ್ ಬಳಸದಂತೆ ಪಾಲಕ, ಪೋಷಕರಿಗೆ ಜಾಗೃತಿ ಮೂಡಿಸಿ, ಶಾಲಾವರಣದಲ್ಲೂ ಇದರ ಬಗ್ಗೆ ಎಚ್ಚರವಹಿಸುವಂತೆ ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಮಂಡಳಿ ಒಕ್ಕೂಟ(ಕ್ಯಾಮ್ಸ್) ಖಾಸಗಿ ಶಾಲೆಗಳಿಗೆ ಸಲಹೆ ನೀಡಿದೆ.
ಅಪಾಯಕಾರಿ ಆಟದಿಂದಾಗಿ ವಿದ್ಯಾರ್ಥಿಗಳು ಖನ್ನತೆ, ಮಾನಸಿಕ ಅಸಮಾತೋಲನ, ಆತ್ಮಹತ್ಯೆ ಪ್ರವೃತ್ತಿ, ಆರೋಗ್ಯದಲ್ಲಿ ವ್ಯತ್ಯಾಸ, ಶೈಕ್ಷಣಿಕ ಸಮಸ್ಯೆ ಜತೆಗೆ ನಿಮ್ಹಾನ್ಸ್‌ನಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಸೃಷ್ಟಿಸಿದೆ. ಹೀಗಾಗಿ ಕ್ಯಾಮ್ಸ್ ವ್ಯಾಪ್ತಿಯ ಎಲ್ಲ ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಮತ್ತು ಪಾಲಕ, ಪೋಷಕರು ಮಕ್ಕಳ ಬಗ್ಗೆ ಜಾಗೃತಿ ವಹಿಸುವಂತೆ ಸೂಚಿಸಿದೆ.
ಅಂತರ್ಜಾಲದ ದುರ್ಬಳಕೆ ಮಾಡದಂತೆ ಮಕ್ಕಳಿಂದ ಸ್ವಘೋಷಿತ ಮುತ್ಛಳಿಕೆ ಪತ್ರ ಬರೆಸಿಕೊಳ್ಳುವುದು ಸೂಕ್ತ. ಪಾಲಕರು ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಮಕ್ಕಳ ಜಾಗೃತಿಯ ಕುರಿತು ತಜ್ಞರ ಮೂಲಕ ಮಾರ್ಗದರ್ಶನ ನೀಡಬೇಕು. ಶಾಲಾವರಣದಲ್ಲಿ ಕಂಡು ಬಂದಲ್ಲಿ ಕ್ಯಾಮ್ಸ್ ಗಮನಕ್ಕೆ ತಂದು ಪರಿಹಾರ ಹಾಗೂ ಸಲಹೆ ಪಡೆದುಕೊಳ್ಳಬಹುದು ಎಂದು ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
MUST WATCH
ಹೊಸ ಸೇರ್ಪಡೆ
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.