ಒಂದೇ ದಿನದಲ್ಲಿ ಶೌಚಾಲಯ ನಿರ್ಮಾಣ!
Team Udayavani, Dec 9, 2018, 2:53 PM IST
ಬಡಗನ್ನೂರು: ಯಾವುದೇ ಸರಕಾರಿ ದಾಖಲೆಗಳನ್ನು ಹೊಂದದೇ ಇರುವ ಪರಿಶಿಷ್ಟ ಜಾತಿಯ ಬಡ ಕುಟುಂಬಕ್ಕೆ ಒಂದೇ ದಿನದಲ್ಲಿ ಶೌಚಾಲಯ ನಿರ್ಮಾಣ ಮಾಡುವ ಮೂಲಕ ಒಳಮೊಗ್ರು ಗ್ರಾಮ ಪಂಚಾಯತ್ ವಿಶ್ವ ಪರಿಸರ ದಿನವನ್ನು ಆಚರಿಸಿ ಗಮನ ಸೆಳೆದಿದೆ.
ಇಲ್ಲಿ ಒಟ್ಟು 12 ಕುಟುಂಬಗಳು ದಾಖಲೆಗಳನ್ನು ಹೊಂದಿಲ್ಲ. ಈ ಕಾರಣದಿಂದ ಅವರು ಸರಕಾರದ ಯಾವುದೇ ಸೌಲಭ್ಯಗಳನ್ನು ಪಡೆಯುವಲ್ಲಿ ಅರ್ಹರಾಗುವುದಿಲ್ಲ. ಇದನ್ನು ಮನಗಂಡು ಕಮಲಾ ಕೈಕಾರ ಅವರ ಕುಟುಂಬವನ್ನು ಆಯ್ಕೆ ಮಾಡಿದ ಒಳಮೊಗ್ರು ಗ್ರಾ.ಪಂ. ಅವರಿಗೆ ಒಂದೇ ದಿನದಲ್ಲಿ ಶೌಚಾಲಯ ನಿರ್ಮಿಸಿ ಕೊಟ್ಟಿದೆ. ಗ್ರಾ.ಪಂ. ಅಧ್ಯಕ್ಷರು, ಸದಸ್ಯರು, ಹಾಗೂ ಅಧಿಕಾರಿಗಳ ಸಹಕಾರದಿಂದ ಈ ಕಾರ್ಯಕೈಗೂಡಿದೆ.
ಗ್ರಾಮ ಸ್ವರಾಜ್ಯದ ನನಸು
ಶೌಚಾಲಯ ನಿರ್ಮಾಣಕ್ಕೆ ಬೇಕಾದ ಅಗತ್ಯ ಸೊತ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ಕೆಲಸ ಪ್ರಾರಂಭಿಸಲಾಯಿತು. ಬೆಳಗ್ಗೆ ಕೆಲಸ ಪ್ರಾರಂಭಿಸಿ ಸಂಜೆ ಹೊತ್ತಿಗೆ ಪೂರ್ಣಗೊಳಿಸಲಾಯಿತು. ಒಳಮೂಗ್ರು ಗ್ರಾ.ಪಂ.ನ ಈ ಕಾರ್ಯ ಇತರ ಪಂಚಾಯತ್‌ಗಳಿಗೆ ಮಾದರಿಯಾಗಿದೆ. ಮನೆ ನಂಬರ್, ಹಕ್ಕುಪತ್ರ ಇಲ್ಲದೆ ಸರಕಾರಿ ಸೌಲಭ್ಯಗಳಿಂದ ವಂಚಿತರಾದ ಎಲ್ಲ ಬಡವರ್ಗದ ಕುಟುಂಬಗಳ ಅಭಿವೃದ್ಧಿಯಲ್ಲಿ ಅಧಿಕಾರಿಗಳು ಕೆಲಸ ಮಾಡಿದಾಗ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಯಿತು.
ಎಲ್ಲರಿಗೂ ಶೌಚಾಲಯ
ಡಿಸೆಂಬರ್ ಅಂತ್ಯದೊಳಗೆ ಒಳಮೊಗ್ರು ಗ್ರಾ. ಪಂ. ವ್ಯಾಪ್ತಿಯ ಎಲ್ಲ ಮನೆಗಳಿಗೂ ಶೌಚಾಲಯ ನಿರ್ಮಿಸಿ ಕೊಡುವ ಗುರಿ ಹೊಂದಲಾಗಿದೆ.
-ಗೀತಾ ಎಸ್., ಗ್ರಾ.ಪಂ. ಪಿಡಿಒ
ಬಯಲು ಶೌಚಮುಕ್ತ
ಬಯಲು ಶೌಚ ಮುಕ್ತ ಗ್ರಾಮವನ್ನಾಗಿಸುವುದು ನಮ್ಮ ಉದ್ದೇಶ. ಅನುದಾನ ಕೊರತೆ ಇದೆ. ಗ್ರಾ.ಪಂ. ಆದಾಯ ಕಡಿಮೆ. ಸರಕಾರದಿಂದ ಅನುದಾನ ಬಂದ ತತ್‌ಕ್ಷಣ ಕ್ರಮ ಕೈಗೊಳ್ಳಲಾಗುವುದು.
-ಯತಿರಾಜ ರೈ ನೀರ್ಪಾಡಿ,
ಗ್ರಾ.ಪಂ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.