ಸಂಸ್ಕೃತಿ ಮತ್ತು ಪರಂಪರೆ ಪ್ರತೀಕ ಸೈಕಲ್ ಪ್ಯೂರ್ ಅಗರಬತ್ತಿ
Team Udayavani, Dec 10, 2018, 6:00 AM IST
ದೇಶದ ಅಗರಬತ್ತಿ ಉದ್ಯಮದಲ್ಲಿ ಗರಿಷ್ಟ ಮಾರುಕಟ್ಟೆಯ ಪಾಲನ್ನು ಹೊಂದಿರುವ ‘ಸೈಕಲ್ ಪ್ಯೂರ್ ಅಗರಬತ್ತಿ’ ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ.
ವಿಶ್ವದ ಅತಿದೊಡ್ಡ ಧೂಪದ್ರವ್ಯ ತಯಾರಕ ಮತ್ತು ಅಗರಬತ್ತಿ ರಫ್ತುದಾರನಾಗಿ ಗುರುತಿಸಿಕೊಂಡಿರುವ ಮೈಸೂರಿನ ಎನ್‌ಆರ್ ಸಮೂಹದ ಸೈಕಲ್ ಪ್ಯೂರ್ ಅಗರಬತೀ¤ಸ್ ಸಮಗ್ರತೆ, ಗುಣಮಟ್ಟ, ಗ್ರಾಹಕರ ಸ್ಪಂದನೆ, ಪ್ರತಿಕ್ರಿಯೆ ಹಾಗೂ ಬದ್ಧತೆಯನ್ನು ಗೌರವಿಸುವ ಸಂಸ್ಥಾಪಕರ ಮಾರ್ಗದರ್ಶಿ ತತ್ವಗಳಲ್ಲಿ ತನ್ನ ಬ್ರ್ಯಾಂಡ್ನ ಬೆಳವಣಿಗೆ ಅಡಗಿದೆ.
ಸಂಸ್ಥೆ ಅಳವಡಿಸಿಕೊಂಡಿರುವ ನವೀನ ತಂತ್ರಜಾnನದ ಬೆಳವಣಿಗೆಗಳು ಭಾರತೀಯ ಪೂಜಾ ಉತ್ಪನ್ನಗಳ ಮಾರುಕಟ್ಟೆಯಲ್ಲಿ ತಮ್ಮ ಪ್ರಾಬಲ್ಯ ಮೆರೆಯಲು ಸಹಾಯವಾಗಿದೆ. ವಿಶ್ವದ ಅತಿದೊಡ್ಡ ಕಾರ್ಬನ್ ನ್ಯೂಟ್ರಲ್ ಅಗರಬತ್ತಿ ತಯಾರಕರು ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಎನ್‌ಆರ್ ಸಮೂಹ, ಪರಿಸರ ಸುಧಾರಣೆಗೆ ಪ್ರಯತ್ನಿಸುವ ಮೂಲಕ ಬದ್ಧತೆ ಕಾಯ್ದುಕೊಂಡಿದೆ.
ಸೈಕಲ್ ಪ್ಯೂರ್ ಪ್ರಮುಖ ಉತ್ಪನ್ನಗಳು: ಪ್ರೀಮಿಯಂ ವಿಭಾಗದಲ್ಲಿ ವುಡ್ಸ್, ಯಗ್ನ, ದಸರಾ, ಗೋಲ್ಡನ್ ಫ್ಲೋರಾ, ಇಕೊ-ಎವರ್ ಕ್ಲಾಸಿಕ್ ಒರಿಜಿನಲ್ಸ್ ಮತ್ತು ಲಿಯಾ ಮುಂತಾದ ಬ್ರ್ಯಾಂಡ್ಗಳಾದರೆ, ಹೆಸರಾಂತ ಮಾರ್ಕ್ನೂ ಬ್ರ್ಯಾಂಡ್ ಆಗಿ ಥೀÅ-ಇನ್-ಒನ್ ಮತ್ತು ರಿಧಂ, ಗುಡ್ ಲಕ್, ಬಾನ್ಸುರಿ, ಗೋಧೂಳಿ, ಸ್ಯಾಂಡಲಮ್, ಹೆರಿಟೇಜ್, ವಾಸು 100, ಮಾರ್ನಿಂಗ್ ಗ್ಲೋರಿ ಹಾಗೂ ನಾಟ್ಯಕೇಸರಿ ಇವು ಸಾಮಾನ್ಯ ಬ್ರ್ಯಾಂಡ್ಗಳಾಗಿವೆ. ಗ್ರಾಹಕರ ಅಗತ್ಯಗಳನ್ನು ಪೂರೈಸುತ್ತಿರುವ ಸೈಕಲ್ ಪ್ಯೂರ್ ಅಗರಬತೀ¤ಸ್ ಕಂಪನಿ ಪುಷ್ಕರ್ಣಿ, ಓಂ ಶಾಂತಿ ಮತ್ತು ಪರಂಪರಾ ಬ್ರ್ಯಾಂಡ್ಗಳನ್ನು ಸಹ ಪರಿಚಯಿಸಿದೆ.
ಎನ್‌ಆರ್ ಸಮೂಹದ ಹುಟ್ಟು
ಅಂದಿನ ಮೈಸೂರು ಸಂಸ್ಥಾನದ ಮದುರೈ ಜಿಲ್ಲೆಯ ಒತ್ರಾಯಪು (ಇಂದಿನ ತಮಿಳುನಾಡು) ಎಂಬ ಗ್ರಾಮದ ಬಡ ಕುಟುಂಬದಲ್ಲಿ ಹುಟ್ಟಿದ ಎನ್. ರಂಗಾರಾವ್ ಅವರದು ಅರ್ಚಕ ಹಾಗೂ ಶಿಕ್ಷಕ ಪರಂಪರೆ. 2ನೇ ಮಹಾಯುದ್ಧ ಸಂದರ್ಭದಲ್ಲಿ ಕೂನೂರಿನ ನೀಲಗಿರೀಸ್‌ನಲ್ಲಿ ಬುಕ್‌ಕೀಪರ್ ಕೆಲಸಕ್ಕಿದ್ದವರು ಹಲವು ವರ್ಷಗಳು ದುಡಿದು ನಂತರ ಅದನ್ನು ಬಿಟ್ಟು ಕೊಡಗಿನ ಕನ್ಸಾಲಿಡೆಟ್ ಕಾಫಿ ವರ್ಕ್ಸ್ನಲ್ಲಿ ಕೆಲಸಕ್ಕೆ ಸೇರಿದರು. ಇರುವ ಕೆಲಸ ಬಿಟ್ಟು ಕುಟುಂಬ ಸಮೇತ ಮೈಸೂರಿಗೆ ಬಂದು ನೆಲೆಸಿದರು.
1948ರಲ್ಲಿ ಗೃಹ ಕೈಗಾರಿಕೆ ಶುರು ಮಾಡಿದ ಅವರು ತಮ್ಮ ಉತ್ಪನ್ನಕ್ಕೆ ಸೈಕಲ್ ಪ್ಯೂರ್ ಅಗರಬತೀ¤ಸ್ ಎಂಬ ಬ್ರ್ಯಾಂಡ್ ಇಮೇಜ್ ಕೂಡ ಕಟ್ಟಿಕೊಟ್ಟರು. ಅಂದು ರಂಗಾರಾವ್ ಅವರು ಕಟ್ಟಿದ ಅಗರಬತ್ತಿ ಉದ್ಯಮವನ್ನು ಅವರ ಮಕ್ಕಳಾದ ಗುರು, ಮೂರ್ತಿ ಹಾಗೂ ವಾಸು ಅವರು ಬೆಳೆಸಿದ್ದಾರೆ. ನಂತರ ಮೂರನೇ ತಲೆಮಾರಾದ ಅರ್ಜುನ್ ರಂಗ ಮತ್ತು ಸಹೋದರರು ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಎನ್‌ಆರ್ ಸಮೂಹವನ್ನಾಗಿ ಸೃಷ್ಟಿಸಿದ್ದಾರೆ.
ಬ್ರ್ಯಾಂಡ್ ಅಂಬಾಸಿಡರ್‌ಗಳು: ಸೈಕಲ್ ಬ್ರ್ಯಾಂಡ್ ಮತ್ತು ವಾಸು ಅಗರಬತ್ತಿಗೆ ಪ್ರಚಾರ ರಾಯಭಾರಿಗಳಾಗಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಕನ್ನಡದ ನಟ ರಮೇಶ್ ಆರವಿಂದ್, ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ, ಕ್ರಿಕೆಟರ್ ಮಿಥಾಲಿ ರಾಜ್ ಹಾಗೂ ಕ್ರೀಡಾಪಟು ಅರುಣಿಮಾ ಸಿನ್ಹಾ ಅವರು ಸಾಥ್ ನೀಡುತ್ತಿದ್ದಾರೆ.
ಸಿಎಸ್‌ಆರ್ ಚಟುವಟಿಕೆಯಲ್ಲಿ ಎನ್‌ಆರ್ ಸಮೂಹ: ಎನ್‌ಆರ್ ಫೌಂಡೇಷನ್ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿರುವ ಎನ್‌ಆರ್ ಸಮೂಹ ಮೈಸೂರು ನಗರದ ಬೃಂದಾವನ ಬಡಾವಣೆಯಲ್ಲಿ ರಂಗರಾವ್ ಮೆಮೋರಿಯಲ್ ಅಂಧ ಹೆಣ್ಣು ಮಕ್ಕಳ ವಸತಿ ಶಾಲೆ ನಿರ್ಮಿಸಿದೆ. ಕಳೆದ 30 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಶಾಲೆಯಲ್ಲಿ ಸುಮಾರು 120 ಮಕ್ಕಳಿಗೆ ಉಚಿತ ಶಿಕ್ಷಣ, ಊಟ ಮತ್ತು ವಸತಿ ಕಲ್ಪಿಸಿದೆೆ. ಇದಲ್ಲದೆ, ಮೈಸೂರಲ್ಲಿ 10 ಕೊಳಚೆ ಪ್ರದೇಶಗಳನ್ನು ಗುರುತಿಸಿ, ಎನ್‌ಆರ್ ಪ್ರೇರೇಪಣಾ ಸಂಸ್ಥೆಯಡಿ ಕೊಳಚೆ ಪ್ರದೇಶ ಮಕ್ಕಳ ಏಳ್ಗೆಗಾಗಿ ಶ್ರಮಿಸುವ ಕಾರ್ಯವನ್ನು ಮಾಡುತ್ತಿದೆ. ಮಾಹಿತಿ www.nrgroup.co.inನಲ್ಲಿ ದೊರೆಯಲಿದೆ.
ಎನ್.ರಂಗಾರಾವ್ ಆ್ಯಂಡ್ ಸನ್ಸ್ ಪ್ರೈ.ಲಿ.,ನ ನಿರ್ದೇಶಕ ಅರ್ಜುನ್ ಎಂ. ರಂಗ ಅವರೊಂದಿಗೆ ಮಾತುಕತೆ…
-ಸೈಕಲ್ ಪ್ಯೂರ್ ಹೆಸರು ಬರಲು ಕಾರಣ?
ನಮ್ಮ ತಾತ ದಿ.ರಂಗಾರಾವ್ ಅವರಿಗೆ ಮಾರ್ಕೆಟಿಂಗ್ ಬಗ್ಗೆ ಅಪಾರ ಜ್ಞಾನವಿತ್ತು. ಬರೀ ಅಗರಬತ್ತಿ ಉತ್ಪನ್ನ ತಯಾರಿಸಿದರೆ ಸಾಲದು. ಅದಕ್ಕೆ ಒಂದು ಬ್ರ್ಯಾಂಡ್ ವ್ಯಾಲ್ಯೂ ಕೊಡಬೇಕೆಂಬುದನ್ನು ಅವರು ನಿರ್ಧರಿಸಿದರು. ಬ್ರ್ಯಾಂಡ್ ಹೇಗಿರಬೇಕೆಂದರೆ ಎಲ್ಲ ಭಾಷೆಯಲ್ಲೂ ಒಂದೇ ಅರ್ಥ ಬರುವಂತಿರಬೇಕು, ಹೆಸರೇಳಿದ ತಕ್ಷಣ ತಿಳಿಯುವಂತಿರಬೇಕು, ನೋಡಿದಾಕ್ಷಣ ಗುರುತಿಸುವಂತಿರಬೇಕು ಎಂಬ ಯೋಚನೆಯಲ್ಲಿ ‘ಬೈಸಿಕಲ್’ ಅನ್ನು ಬ್ರ್ಯಾಂಡ್ ಆಗಿ ಮಾಡಿಕೊಂಡು ಸೈಕಲ್ ಪ್ಯೂರ್ ಅಗರಬತೀ¤ಸ್ ಎಂದು ಹೆಸರಿಟ್ಟರು.
-ಎನ್‌ಆರ್ ಸಮೂಹ ಯಾವ ಸ್ಥಾನದಲ್ಲಿದೆ?
ಅಗರಬತ್ತಿ ಉದ್ಯಮ ಬಹುದೊಡ್ಡ ಅನ್ ಆರ್ಗನೈಸ್ಡ್ ಉದ್ಯಮ. ಇದರ ಮೂಲ ಸ್ವರೂಪ ಹಾಗೂ ಅಂಕಿಸಂಖ್ಯೆ ಯಾರಿಗೂ ಗೊತ್ತಿಲ್ಲ. ಅದನ್ನು ಆರ್ಗನೈಸ್ಡ್ ಮಾಡುವ ಯತ್ನದಲ್ಲಿದ್ದೇವೆ. ನಮ್ಮಲ್ಲಿ 1600 ಮಾರಾಟಗಾರರಿದ್ದು, 30 ಕಡೆ ಸೇಲ್ ಡಿಪೋಗಳಿವೆ. 5 ಸಾವಿರ ವಿತರಕರಿದ್ದಾರೆ. 15 ಲಕ್ಷ ರಿಟೈಲ್ ಔಟ್‌ಲೆಟ್‌ಗಳಿವೆ ಹಾಗೂ ನೇರ ಮಾರಾಟ ವ್ಯವಸ್ಥೆಯೂ ಇದೆ. ಇದೆಲ್ಲವನ್ನು ಪರಿಗಣಿಸಿ ಎಸಿ ನೀಲ್‌ಸನ್ ಮಾರ್ಕೆಟ್ ರಿಸರ್ಚ್ ಕಂಪನಿ ಅಖೀಲ ಭಾರತದ ಮಟ್ಟದ ನಾನ್-ಫುಡ್ ಎಫ್‌ಎಂಸಿಜಿಯಲ್ಲಿ ಎನ್‌ಆರ್ ಸಮೂಹದ ಉತ್ಪನ್ನಗಳು ಟಾಪ್-20 ಸ್ಥಾನದಲ್ಲಿವೆ ಎಂದು ವರದಿ ಮಾಡಿದೆ.
ನಿಮ್ಮದು ಕಾರ್ಬನ್ ನ್ಯೂಟ್ರಲ್ ಕಂಪನಿ ಹೇಗೆ?
ಅಗರಬತ್ತಿ ಉತ್ಪನ್ನ ತಯಾರಿಕೆಗೆ ಬಳಸುವ ಮೂಲವಸ್ತುಗಳನ್ನು ಮರು ಸೃಷ್ಟಿಸುವ ಕಾರ್ಯ ಮಾಡುತ್ತೇವೆ. ಅಂದರೆ ಬದಲಿ ಗಿಡಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಯ ಕೆಲಸ ಮಾಡುತ್ತಿರುವುದರಿಂದಲೇ ನಮ್ಮದು ಕಾರ್ಬನ್ ನ್ಯೂಟ್ರಲ್ ಕಂಪನಿ ಎನಿಸಿದೆ. ಇದನ್ನು ಯುಕೆ ಕಾರ್ಬನ್ ಕನ್ಸಲ್ಟೆಂಟ್ ಕಂಪನಿ ಪ್ರಮಾಣೀಕರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.