ಪೈ ಲಕ್ಕಿ ಡ್ರಾನಲ್ಲಿ 30 ಅದೃಷ್ಟಶಾಲಿ ಗ್ರಾಹಕರಿಗೆ ಹುಂಡೈ ಕಾರು
Team Udayavani, Dec 10, 2018, 6:00 AM IST
ಬೆಂಗಳೂರು: ಪೈ ಇಂಟರ್‌ನ್ಯಾಷನಲ್ ಮೆಗಾ ಫೆಸ್ಟಿವಲ್ ಸೇಲ್ ಜೀನಿಯಸ್ ಲಕ್ಕಿ ಡ್ರಾನಲ್ಲಿ 30 ಅದೃಷ್ಟಶಾಲಿ ಗ್ರಾಹಕರು ಬಹುಮಾನವಾಗಿ ಕಾರ್, ಒಳಗೊಂಡಂತೆ ಸಾವಿರಾರು ಗ್ರಾಹಕರು ಎಂಟು ಕೋಟಿ ರೂ. ಮೌಲ್ಯದ ಬಹುಮಾನ ಹಾಗೂ ಶಾಪಿಂಗ್ ಅವಕಾಶವನ್ನು ಪಡೆದುಕೊಂಡರು.
ಅ.3 ರಿಂದ ನ.26ರವರೆಗೆ ಹಮ್ಮಿಕೊಳ್ಳಲಾಗಿದ್ದ ಮೆಗಾ ಫೆಸ್ಟಿವಲ್ ಸಂದರ್ಭದಲ್ಲಿ ಖರೀದಿಸಿದ್ದ ಗ್ರಾಹಕರಿಗೆ ಈ ಬಂಪರ್ ಬಹುಮಾನಗಳನ್ನು ನಿಗದಿ ಪಡಿಸಿ ಕೂಪನ್ ವಿತರಿಸಲಾಗಿತ್ತು. ಅದರಂತೆ ಈಗ ಲಕ್ಕಿ ಡ್ರಾ ನಡೆದಿದ್ದು, 81,950 ಗ್ರಾಹಕರಿಗೆ ಎಂಟು ಕೋಟಿ ರೂ. ಮೌಲ್ಯದ ಬಹುಮಾನಗಳನ್ನು ಪೈ ಇಂಟರ್‌ನ್ಯಾಷನಲ್ ವಿತರಿಸಿದೆ.
ನಗರದ ಮ್ಯುಸಿಯಂ ರಸ್ತೆಯ ಗುಡ್ ಶಪರ್ಡ್ ಸಭಾಂಗಣದಲ್ಲಿ ಭಾನುವಾರ ನಡೆದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಅದೃಷ್ಟಶಾಲಿ ಕೂಪನ್ ಸಂಖ್ಯೆಗಳನ್ನು ಪುಟ್ಟ ಮಕ್ಕಳಿಂದ ಪಾರದರ್ಶಕವಾಗಿ ಬಿಡುಗಡೆ ಮಾಡಲಾಯಿತು. ಅವುಗಳಲ್ಲಿ 10 ಗ್ರಾಹಕರು ಮೆಗಾ ಬಂಪರ್ ಕೊಡುಗೆಯಾಗಿ ಹುಂಡೈ ಎಕ್ಸೆಂಟ್, 10 ಗ್ರಾಹಕರು ಸೂಪರ್ ಬಂಪರ್ ಕೊಡುಗೆಯಾಗಿ ಗ್ರಾಂಡ್ ಐ10 ಹಾಗೂ 10 ಗ್ರಾಹಕರು ಬಂಪರ್ ಕೊಡುಗೆಯಾಗಿ ಹುಂಡೈ ಇಒನ್ ಕಾರುಗಳನ್ನು ಪಡೆದಿದ್ದಾರೆ.
ಇದಲ್ಲದೇ ಪ್ರಥಮ ಬಹುಮಾನವಾಗಿ 160 ಅದೃಷ್ಟಶಾಲಿಗಳಿಗೆ 50 ಸಾವಿರ ರೂ.ಮೌಲ್ಯದ ಬಹುಮಾನ , ಎರಡನೇ ಬಹುಮಾನವಾಗಿ 160 ಜನರಿಗೆ 25 ಸಾವಿರ ರೂ.ಮೌಲ್ಯ, 1600 ಅದೃಷ್ಟಶಾಲಿಗಳಿಗೆ 5 ಸಾವಿರ ರೂ. ಮೌಲ್ಯದ ಬಹುಮಾನಗಳು ಮತ್ತು 80 ಸಾವಿರ ಅದೃಷ್ಟಶಾಲಿ ಗ್ರಾಹಕರಿಗೆ 500 ರೂ.ಗಳ ಶಾಪಿಂಗ್ ಕೂಪನ್‌ಗಳುನ್ನು ನೀಡಲಾಯಿತು.
ಲಕ್ಕಿ ಡ್ರಾಗೂ ಮುನ್ನ ಮಾತನಾಡಿದ ಪೈ ಇಂಟರ್ ನ್ಯಾಷನಲ್ ಎಲೆಕ್ಟ್ರಾನಿಕ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಪೈ, ಬೆಂಗಳೂರಿನಲ್ಲಿ 1 ಮಳಿಗೆಯೊಂದಿಗೆ ಸಂಸ್ಥೆ ಆರಂಭಗೊಂಡಿತ್ತು. ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಪೈ ಇಂಟರ್‌ನ್ಯಾಷನಲ್‌ನ ಮಳಿಗೆಗಳಿವೆ. ಮುಂದಿನ ದಿನದಲ್ಲಿ ವಹಿವಾಟು ಮತ್ತಷ್ಟು ವಿಸ್ತರಣೆಗೊಳ್ಳಲಿದೆ ಈವರೆಗೆ 234 ಜನರಿಗೆ ಕಾರುಗಳನ್ನು ವಿತರಿಸಲಾಗಿದೆ. ಚಿನ್ನ, ನಗದು ಬಹುಮಾನಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ಫೆಸ್ಟಿವಲ್ ಸೇಲ್‌ನಲ್ಲಿ 8 ಕೋಟಿ ರೂ.ಗಳ ಮೊತ್ತದ ಬಹುಮಾನಗಳನ್ನು ನಿಗದಿ ಪಡಿಸಿ ಒಟ್ಟು 12 ಲಕ್ಷ ಕೂಪನ್‌ಗಳನ್ನು ಮುದ್ರಿಸಲಾಗಿದೆ. ಪಾರದರ್ಶಕ ರೀತಿಯಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಲಕ್ಕಿ ಡ್ರಾ ಮುಂದುವರೆಯಲಿದ್ದು, ಹೊಸ ವರ್ಷದ ಸಂರ್ದದಲ್ಲಿಯೂ ಮಾರಾಟ ಮೇಳ ನಡೆಯಲಿದೆ ಗ್ರಾಹಕರು ಸದುಪಯೋಗ ಪಡೆಯಬೇಕು. ಇನ್ನು ಈ ಬಾರಿ ಲಕ್ಕಿ ಡ್ರಾ ವಿಜೇತರ ಹೆಸರು, ವಿಳಾಸ ಹಾಗೂ ಬಹುಮಾನದ ಮಾಹಿತಿಗಳು ಎಲ್ಲ ಪೈ ಇಂಟರ್‌ನ್ಯಾಷನಲ್ ಮಳಿಗೆಗಳಲ್ಲಿ ಪ್ರಕಟಿಸಲಾಗುತ್ತಿದ್ದು, ಎಲ್ಲ ವಿಜೇತರಿಗೆ ಬಹುಮಾನ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ನಮ್ಮ ಸಂಸ್ಥೆಯು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದ್ದು, ಪ್ರತಿ ವರ್ಷ 20 ಸಾವಿರ ವಿದ್ಯಾರ್ಥಿಗಳಿಗೆ 2 ಲಕ್ಷ ನೋಟ್‌ಬುಕ್‌ಗಳನ್ನು ವಿತರಿಸಲಾಗುತ್ತದೆ. 30 ಅನಾಥ ಮಕ್ಕಳನ್ನು ದತ್ತು ಪಡೆಯಲಾಗಿದೆ.
– ರಾಜ್‌ಕುಮಾರ್ ಪೈ, ಪೈ ಇಂಟರ್ ನ್ಯಾಷನಲ್ ವ್ಯವಸ್ಥಾಪಕ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.