ಡಿ. 15ರಿಂದ ಏಕಗವಾಕ್ಷಿ ವ್ಯವಸ್ಥೆ: ಖಾದರ್
Team Udayavani, Dec 10, 2018, 10:32 AM IST
ಮಂಗಳೂರು: ಬಿಲ್ಡಿಂಗ್ ಪ್ಲಾನ್ ಹಾಗೂ ಲೇಔಟ್ ಪ್ಲಾನ್‌ಗಳಿಗೆ ಅಂಗೀಕಾರ ವ್ಯವಸ್ಥೆಯನ್ನು ಸುಗಮ ಹಾಗೂ ತ್ವರಿತಗೊಳಿಸುವ ನಿಟ್ಟಿನಲ್ಲಿನಗರಾಭಿವೃದ್ಧಿ ಇಲಾಖೆ ರೂಪಿಸಿರುವ ಏಕಗವಾಕ್ಷಿ ವ್ಯವಸ್ಥೆಗೆ (ಸಿಂಗಲ್ ವಿಂಡೋ) ಡಿ. 15ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್ ಬೆಂಗಳೂರಿನಲ್ಲಿ ಚಾಲನೆ ನೀಡುವರು ಎಂದು ನಗರಾಭಿವೃದ್ಧಿ ಮತ್ತು ವಸತಿ ಖಾತೆ ಸಚಿವ ಯು.ಟಿ. ಖಾದರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿದಾರರು ಬಿಲ್ಡಿಂಗ್ ಅಥವಾ ಲೇಔಟ್ ಪ್ಲಾನ್‌ಗೆ ಅಂಗೀಕಾರ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಮರ್ಪಕವಾಗಿದ್ದರೆ ಕೂಡಲೇ ಸ್ವೀಕೃತಗೊಳ್ಳುತ್ತದೆ ಇಲ್ಲದಿದ್ದರೆ ತಿರಸ್ಕೃತವಾಗುತ್ತದೆ. ಸರಿಪಡಿಸಿ ಮತ್ತೆ ಸಲ್ಲಿಸ ಬೇಕು. ಅರ್ಜಿ ಸ್ವೀಕಾರವಾದ ಒಂದು ವಾರದೊಳಗೆ ನಿರಾಕ್ಷೇಪಣ ಪತ್ರ (ಎನ್‌ಒಸಿ)ಕ್ಕೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ಅದು ಆನ್‌ಲೈನ್ ಮೂಲಕ ಹೋಗುತ್ತದೆ. ಅವರು ಇದನ್ನು ಪರಿಶೀಲಿಸಿ ವಾರದೊಳಗೆ ಅಭಿಪ್ರಾಯ ತಿಳಿಸಬೇಕು. ಸ್ಥಳ ಪರಿಶೀಲನೆಗೆ ಸಂಬಂಧಿಸಿದ ಎಲ್ಲ ಇಲಾಖೆಗಳನ್ನು ಒಟ್ಟು ಸೇರಿಸಿ ನಿರ್ದಿಷ್ಟ ದಿನಾಂಕ ಹಾಗೂ ಸಮಯ ನಿಗದಿಪಡಿಸಿ ಮೊಬೈಲ್‌ನಲ್ಲಿ ಸಂದೇಶ ಹೋಗುತ್ತದೆ. ಅಂದು ಸ್ಥಳಕ್ಕೆ ತೆರಳಿ ಅಧಿಕಾರಿಗಳು ಪರಿಶೀಲಿಸುತ್ತಾರೆ. ಅಲ್ಲಿಂದಲೇ ದಿನಾಂಕ ಹಾಗೂ ಸಮಯವನ್ನು ಮೊಬೈಲ್‌ನಲ್ಲಿ ನಮೂದಿಸಿ ಕಳುಹಿಸಬೇಕು. ಇದು ಸಿಂಗಲ್ ವಿಂಡೋ ವ್ಯವಸ್ಥೆಯ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ ಎಂದವರು ವಿವರಿಸಿದರು.
ವಾರದೊಳಗೆ ಎನ್‌ಒಸಿ ಬಗ್ಗೆ ವರದಿ ನೀಡದಿದ್ದರೆ ಆಕ್ಷೇಪವಿಲ್ಲ ಎಂದು ಪರಿಗಣಿಸಲಾಗುತ್ತದೆ ಮತ್ತು ಅದಕ್ಕೆ ಸಂಬಂಧಿಸಿ ಮುಂದಿನ ಯಾವುದೇ ವಿಚಾರಗಳಿಗೆ ಆಯಾ ಇಲಾಖೆಯನ್ನೇ ಹೊಣೆಯಾಗಿಸಲಾಗುವುದು. ಎಲ್ಲ ಪ್ರಕ್ರಿಯೆಗಳು ಮುಗಿದು ತಿಂಗಳೊಳಗೆ ಅಂಗೀಕಾರ ಪತ್ರ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದರು.
30×40 ನಿವೇಶನ
30×40 ನಿವೇಶನಗಳಲ್ಲಿ ಮನೆ ನಿರ್ಮಿಸಲು ಎನ್‌ಒಸಿ ಅಗತ್ಯವಿಲ್ಲ; ಸ್ವಯಂ ಆಗಿ ಆನ್‌ಲೈನ್‌ನಲ್ಲಿ ಸಮಗ್ರ
ವಿವರ ದಾಖಲಿಸಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದಾಗಿದೆ. 94ಸಿ, 94 ಸಿಸಿ ಅಡಿಯಲ್ಲಿ ಹಕ್ಕುಪತ್ರ ಪಡೆದವರಿಗೆ ಆರ್‌ಟಿಸಿ ಕೊಡಲು 9/11 ಪತ್ರ ಅಥವಾ ಸಿಂಗಲ್ ಸೈಟ್ ಅಂಗೀಕಾರ ಪತ್ರ ಸಲ್ಲಿಕೆ ಅಗತ್ಯವಿಲ್ಲ. ಹಕ್ಕುಪತ್ರ ನೀಡುವಾಗಲೇ ಕಂದಾಯ ಇಲಾಖೆಯವರು ನಕ್ಷೆ ಮಾಡಿಸಿರು ತ್ತಾರೆ. ಅದ್ದರಿಂದ ಕೂಡಲೇ ಅಧಿಕಾರಿ ಗಳು ಆರ್‌ಟಿಸಿ ನೀಡಬೇಕು ಎಂದರು.
ಪ್ರತಾಪಸಿಂಹ ತಪ್ಪು ಮಾಹಿತಿ
ಕೊಡಗಿನ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ಸಮಾರಂಭದಲ್ಲಿ ಸಂಸದ ಪ್ರತಾಪಸಿಂಹ ಮಾಹಿತಿ ಕೊರತೆಯಿಂದ ಮತ್ತು ಪ್ರಚಾರಕ್ಕಾಗಿ ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ. ಸಂತ್ರಸ್ತರ ಮನೆ ನಿರ್ಮಾಣಕ್ಕೆ ನೆರವು ಕಲ್ಪಿಸಲು ಕೇಂದ್ರ ಸರಕಾರದಿಂದ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಅವರು ಬಹಿರಂಗ ಪಡಿಸಲಿ. ನೈಜ ಕಾಳಜಿ ಇದ್ದರೆ ಸಂಸತ್‌ನಲ್ಲಿ ಮಾತನಾಡಲಿ. ರಾಜ್ಯ ಸರಕಾರ ಪ್ರತಿ ಸಂತ್ರಸ್ತನಿಗೂ 9.5 ಲಕ್ಷ ರೂ. ವೆಚ್ಚದಲ್ಲಿ 2 ಬೆಡ್‌ರೂಂ ಮನೆ ನೀಡುತ್ತಿದೆ. 8 ಜಿಲ್ಲೆಗಳಲ್ಲಿ ಆಗಿರುವ ಹಾನಿಗೆ ರಾಜ್ಯ ಸರಕಾರ 2,000 ಕೋ.ರೂ. ಕೇಳಿತ್ತು. ಆದರೆ ಬರೇ 546 ಕೋ.ರೂ. ಮಂಜೂರಾಗಿದೆ ಎಂದರು.
ಮರಳು ದೂರಿಗೆ ದೂರವಾಣಿ
ಸಿಆರ್‌ಝಡ್ ವಲಯದಲ್ಲಿ ಪರವಾನಿಗೆ ಪಡೆದವರಿಂದ ಮರಳುಗಾರಿಕೆ ಆರಂಭವಾಗಿದೆ. ಇಲ್ಲಿ ಜನರಿಗೆ ಮರಳು ಪಡೆಯಲು ಸಮಸ್ಯೆಯಾದರೆ ದೂರು ದಾಖಲಿಸಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಚಿತ ದೂರವಾಣಿ ಕರೆ ನಂಬರ್ (ಟೋಲ್‌ಫ್ರೀ) ಸ್ಥಾಪಿಸಲಾಗುವುದು. ಇದು ಲಭ್ಯವಾಗಲು ಸ್ವಲ್ಪ ಕಾಲಾವಕಾಶ ತಗಲುವುದರಿಂದ ಸದ್ಯಕ್ಕೆ ಒಂದು ಮೊಬೈಲ್ ನಂಬರ್ ಪ್ರಕಟಿಸಲಾಗುವುದು. ಮರಳಿಗೆ ದರ ನಿಗದಿ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ ಎಂದು ಸಚಿವ ಖಾದರ್ ತಿಳಿಸಿದರು. ತುಂಬೆ ವೆಂಟೆಡ್ ಡ್ಯಾಂನಲ್ಲಿ ತುಂಬಿರುವ ಮರಳು ತೆಗೆದು ವಿಲೇವಾರಿ ಮಾಡುವ ಬಗ್ಗೆ ಮಹಾನಗರ ಪಾಲಿಕೆ ಟೆಂಡರ್ ಪ್ರಕ್ರಿಯೆ ನಡೆಸಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.