ವಿದೇಶಕ್ಕೆ ಹಾರುವ ಮುನ್ನ ಇದನ್ನು ಅರಿಯಿರಿ
Team Udayavani, Dec 10, 2018, 2:09 PM IST
ಭಾರತದಲ್ಲಿ ನಿಮಗೆ ಬಾಡಿಗೆ, ಬಡ್ಡಿ, ಡಿವಿಡೆಂಡ್ಸ್ ಇತರೆ ಮೂಲದಿಂದ ಯಾವುದೇ ಆದಾಯ ಬರುತ್ತಿದ್ದರೆ ಅವನ್ನು ಎನ್‌ಆರ್‌ಒ ಖಾತೆಗೆ ಮಾರ್ಪಡಿಸಿ. ನೀವು ವಿದೇಶಕ್ಕೆ ಹೋದ ಅನಂತರವೂ ಭಾರತಕ್ಕೆ ಹಣ ಕಳಿಸಬೇಕೆಂದಿದ್ದರೆ ಅನಿವಾಸಿ ಭಾರತೀಯ ಖಾತೆಯ ಮೂಲಕ ವರ್ಗಾಯಿಸಿ. ಎನ್‌ಆರ್‌ಇ ಹಾಗೂ ಎನ್‌ಆರ್‌ಒ ಖಾತೆಗಳನ್ನು ಪಡೆದುಕೊಳ್ಳಬೇಕಾದರೆ ಗ್ರಾಹಕರು ತಿಳಿದಿರಬೇಕಾದ ನಿಯಮಗಳ ಅನುಸರಣೆಗೆ ಅನುಗುಣವಾಗಿರುತ್ತವೆ ಎಂಬುದನ್ನು ಖಚಿತಪಡಿಸಿಕೊಂಡು ಅದಕ್ಕೆ ಸಂಬಂಧಿತ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ತಮ್ಮ ಹಲವು ಉದ್ದೇಶಗಳ ಕಾರಣದಿಂದ ನಾಗರಿಕರು ವಿದೇಶಕ್ಕೆ ತೆರಳುವುದು ಸಾಮಾನ್ಯವಾಗಿದೆ. ವಿದೇಶದಲ್ಲಿ ನೆಲೆಯೂರುವುದು ಸಂತಸದ ವಿಚಾರವಾದರೂ ನಿಮ್ಮ ಆರ್ಥಿಕ ವಿಚಾರಗಳ ವಿಷಯ ಬಂದಾಗ ಕೆಲವು ಕ್ಲಿಷ್ಟತೆಗಳಿರುತ್ತವೆ. ಆದ ಕಾರಣ ಕೆಲವು ಹಣಕಾಸು ವಿಷಯಗಳಲ್ಲಿ ಕಾಳಜಿ ವಹಿಸುವುದು ನಮ್ಮ ಹಿತದೃಷ್ಟಿಯಿಂದ ಎಚ್ಚರಿಕೆಯ ಮಾರ್ಗವಾಗಿದೆ. ದೇಶ ಬಿಡುವ ಮುನ್ನ ನೀವು ಕೆಳಗಿನ ಕೆಲವು ಆರ್ಥಿಕ ಕ್ರಮಗಳನ್ನು ಅನುಸರಿಸಿದರೆ ಒಳ್ಳೆಯದು.
ಬ್ಯಾಂಕ್ ಖಾತೆಯನ್ನು ಮುಚ್ಚಿರಿ ಅಥವಾ ವಿದೇಶ ಖಾತೆಯೊಂದಿಗೆ ಮಾರ್ಪಡಿಸಿ
ನೀವು ವಿದೇಶದಲ್ಲಿ ವಾಸಿಸುವ ದಿನದಿಂದ ನಿಮ್ಮನ್ನು ಅನಿವಾಸಿ ಭಾರತೀಯ ಎಂದು ಮಾನ್ಯ ಮಾಡಲಾಗುತ್ತದೆ. ನಿಮ್ಮ ಉಳಿತಾಯ ಖಾತೆ, ಸ್ಥಿರ ಠೇವಣಿಗಳು, ಮರುಗಳಿಸುವ ಖಾತೆಗಳನ್ನು ಮುಚ್ಚಿರಿ ಅಥವಾ ಅನಿವಾಸಿ ಖಾತೆಯೊಂದಿಗೆ (ಎನ್‌ಆರ್‌ಒ) ಬದಲಾಯಿಸಿ. ದೇಶ ಬಿಡುವ ಮುನ್ನ ಹಾಲಿಯಿರುವ ಸಾಲಗಳನ್ನು ಅಥವಾ ಕ್ರೆಡಿಟ್ ಕಾರ್ಡ್ ಬಿಲ…ಗಳನ್ನು ತೀರಿಸಬೇಕಾಗುವುದು ಅತಿ ಮುಖ್ಯವಾಗಿರುತ್ತದೆ.
ಎಲ್ಲ ವಿಮೆಗಳನ್ನು ಕೂಡಲೇ ಸ್ಥಗಿತಗೊಳಿಸಬೇಕಿಲ್ಲ
ಹಲವು ವೈಯಕ್ತಿಕ ಜೀವ ಹಾಗೂ ಆರೋಗ್ಯ ವಿಮೆಗಳ ಯೋಜನೆಗಳು ವಿದೇಶಕ್ಕೆ ಹೋಗುವ ಮುನ್ನವೇ ಕೊನೆಗೊಳ್ಳುತ್ತವೆ. ವಿದೇಶದಲ್ಲಿ ನೂತನ ವಿಮೆಗಳನ್ನು ಮಾಡಿಸುವವರೆಗೂ ಅವು ಅಸುರಕ್ಷಿತವಾಗಿರುತ್ತವೆ. ನೀವು ಪ್ರೀಮಿಯಂಗಳನ್ನು ಮುಂದುವರಿಸಬೇಕಾದರೆ ನಿಮ್ಮ ಬ್ಯಾಂಕ್‌ಗಳಿಗೆ ಸಕಾಲಕ್ಕೆ ಇಸಿಎಸ್ ನೀಡುವುದು ಕಡ್ಡಾಯವಾಗಿದೆ. ಕೆಲವೊಂದು ಆರೋಗ್ಯ ವಿಮೆಗಳು ವಾಪಸ್ ಬಂದಾಗ ಮುಂದುವರಿಸುವ ಅವಕಾಶವೂ ಇರುತ್ತದೆ. ನೀವು ನೆಲೆಗೊಳ್ಳುವ ದೇಶದಲ್ಲಿ ಯೋಜನೆ ಮಾನ್ಯಗೊಳ್ಳುವುದಾದರೆ ನಿಮ್ಮ ವಿಮಾದಾರರೊಂದಿಗೆ ಪರಿಶೀಲಿಸಬಹುದು.
ಹಲವು ಖಾತೆಗಳನ್ನು ಸ್ಥಗಿತಗೊಳಿಸಲು ನೀವು ನಿರ್ಧರಿಸಿದ್ದರೂ ಕೆಲವೊಂದು ಆರ್ಥಿಕ ವ್ಯವಹಾರಗಳು ನಿಮ್ಮಲ್ಲೇ ಉಳಿದುಕೊಂಡಿರುತ್ತವೆ. ಇಂತಹ ಆರ್ಥಿಕ ವ್ಯವಹಾರಗಳ ಪವರ್ ಆಫ್ ಅಟಾರ್ನಿಯನ್ನು ನೀವು ಅತೀ ನಂಬುವ ವ್ಯಕ್ತಿಗಳಿಗೆ ಹಸ್ತಾಂತರಿಸಿ. ಅವರು ನಿಮ್ಮ ಹೆಸರಿನ ಪರವಾಗಿ ಭಾರತದಲ್ಲಿ ಕಾನೂನು ಬದ್ಧವಾಗಿ ಆರ್ಥಿಕ ವ್ಯವಹಾರಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ.
ಕಾರ್ತಿಕ್ ಅಮೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.