ದರೋಡೆ ನಾಟಕವಾಡಿದ ಆರೋಪಿ ಸೆರೆ
Team Udayavani, Dec 10, 2018, 3:44 PM IST
ಹಾಸನ: ತಾನು ಕೆಲಸ ಮಾಡುತ್ತಿದ್ದ ಕಂಪನಿಯ 9.5 ಲಕ್ಷ ರೂ. ನಗದನ್ನು ಪಾವತಿಸಿದೆ ದರೋಡೆ ಕೋರರು ಅಪಹರಿಸಿದರು ಎಂದು ನಾಟಕವಾಡಿದ್ದ ನೌಕರರನ್ನು ಪೊಲೀಸರು ಬಂಧಿಸಿ 7 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಸಾಲ ಮಾಡಿಕೊಂಡಿದ್ದ ಚಂದನ್ ತನ್ನ ಇಬ್ಬರು ಸ್ನೇಹಿತರನ್ನು ಬಳಸಿಕೊಂಡು ದರೋಡೆಯ ನಾಟಕ ವಾಡಿ ಕಂಪನಿಯ ಹಣ ಲಪಟಾಯಿಸುವ ಪ್ರಯತ್ನ ನಡೆಸಿದ್ದುದು ತನಿಖೆಯ ವೇಳೆ ಬಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಎ.ಎನ್. ಪ್ರಕಾಶ್‌ಗೌಡ ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.
ಪ್ರಕರಣದ ವಿವರ: ನಗರದ ಕೆ.ಹೊಸಕೊಪ್ಪಲು ಬಡಾವಣೆಯ ನಿವಾಸಿ ಶಾಂತೇಗೌಡ ಎಂಬವರ ಪುತ್ರ ಎಂ.ಎಸ್. ಚಂದನ್ ಎಂಬಾತ ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿರುವ ಪೂಜಾ ಫಿಡ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಚಿಕ್ಕಕಣಗಾಲ್ ಮತ್ತು ಜನಿವಾರ ಗ್ರಾಮಗಳ ಕೋಳಿ ಫಾರಂಗಳಿಗೆ ಪೂಜಾ ಫಿಡ್ಸ್‌ನಿಂದ ಸರಬರಾಜು ಕೋಳಿಗಳು ಮತ್ತು ಫಿಡ್ಸ್‌ನಿಂದ ವಸೂಲಾದ 9.5ಲಕ್ಷ ರೂ. ನಗದನ್ನು ಕಂಪನಿಗೆ ಪಾವತಿಸ ಬೇಕಾಗಿತ್ತು. ಆದರೆ ನ.25 ರಂದು ಭಾನುವಾರ ವಾಗಿದ್ದರಿಂದ ಕಂಪನಿಗೆ ಪಾವತಿಸದೆ ಚಂದನ್ ಮನೆಯಲ್ಲಿಟ್ಟುಕೊಂಡಿದ್ದ. ನ.26 ರ ಸೋಮವಾರ ಸುಮಾರು 11 ಗಂಟೆ ಸಮಯದಲ್ಲಿ ಕಂಪನಿಗೆ ಪಾವತಿಸಲೆಂದು 9.5 ಲಕ್ಷ ರೂ.ಗಳೊಂದಿಗೆ ತನ್ನ ಬೈಕಿನಲ್ಲಿ ಹಾಸನ ಬೈಪಾಸ್ ರಸ್ತೆಯ ರೈಲ್ವೆ ಟ್ರ್ಯಾಕ್‌ನ ಬಳಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬೈಕ್ ನಲ್ಲಿ ಬಂದ ಇಬ್ಬರು ಬೈಕ್‌ನ್ನು ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ ಬ್ಯಾಗ್‌ನಲ್ಲಿದ್ದ 9.5 ಲಕ್ಷ ರೂ.,ಗಳನ್ನು ಅಪಹರಿಸಿದ್ದರು. ದರೋಡೆ ಕೋರರಿಂದ ಹಲ್ಲೆಗೊಳಗಾಗಿ ಸ್ಥಳದಲ್ಲಿಯೇ ಬಿದ್ದಿದ್ದ ಚಂದನ್‌ನನ್ನು ಕಂಡ ರಸ್ತೆಯಲ್ಲಿ ಸಂಚರಿಸಿದವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ವಿಚಾರಣೆಯಿಂದ ಬಯಲಾದ ಸತ್ಯ: ಪೊಲೀಸರು ಸ್ಥಳಕ್ಕೆ ಹೋಗಿ ಚಂದನ್‌ನನ್ನು ಆಸ್ಪತ್ರೆಗೆ ಸಾಗಿಸಿ ಪ್ರಕರಣದ ತನಿಖೆ ನಡೆಸುತ್ತಿದ್ದರು. ಚಂದನ್ ಬಗ್ಗೆಯೇ ಶಂಕೆ ಬಂದಿದ್ದರಿಂದ ಆತನನ್ನು ವಿಚಾರಣೆ ಗೊಳಪಡಿದಾಗ ತಾನೇ ದರೋಡೆಯ ನಾಟಕ ಸೃಷ್ಟಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ತಾನು ಬಹಳಷ್ಟ
ಸಾಲ ಮಾಡಿದ್ದರಿಂದ ಸಾಲ ತೀರಿಸಲು ಕಂಪನಿಗೆ ಕಟ್ಟಬೇಕಾಗಿದ್ದ ಹಣವನ್ನು ಲಪಟಾಯಿಸಲು ತನ್ನ ಸೇಹಿತರಾದ ಲೋಕಿ ಉರುಫ್ ಕೆಂಚ ಹಾಗೂ ನವೀನ ಎಂಬವರನ್ನು ಬಳಸಿಕೊಂಡು ಅವರು ದರೋಡೆ ಮಾಡುವಂತೆ ನಾಟಕ ಮಾಡಿದ್ದೆ. ಲೋಕಿ ಮತ್ತು ನವೀನ 2 ಲಕ್ಷ ರೂ. ತೆಗೆದುಕೊಂಡು ಹೋಗಿದ್ದು, 50 ಸಾವಿರ ರೂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಖರ್ಚಾಗಿದೆ. ಇನ್ನುಳಿದ 7 ಲಕ್ಷ ರೂ. ಹಣ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ
ವೇಳೆ ಚಂದನ್ ಒಪ್ಪಿಕೊಂಡ. ಆನಂತರ ಆತನಿಂದ 7 ಲಕ್ಷ ರೂ. ನಗದು ಹಾಗು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಚಂದನ್‌ಗೆ ಸಹಕರಿಸಿದ್ದ ಲೋಕಿ ಮತ್ತು ನವೀನ 2 ಲಕ್ಷ ರೂ. ನೊಂದಿಗೆ ತಲೆಮರೆಸಿಕೊಂಡಿದ್ದಾರೆ ಎಂದು ವಿವರಿಸಿದರು.
ಅಪರಾಧ ಹಿನ್ನೆಲೆ: ಚಂದನ್‌ಗೆ ಸಹಕರಿಸಿದ್ದ ಲೋಕಿ ಮತ್ತು ನವೀನ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ರೌಡಿಶೀಟರ್‌ಗಳು. ಲೋಕಿಯು ಒಂದು ಅತ್ಯಾಚಾರ, ಒಂದು ಕೊಲೆ, 3 ಸುಲಿಗೆ, 7 ಹೊಡೆದಾಟದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, 7 ವರ್ಷ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಜೈಲಿ ನಿಂದ ಹೊರ ಬಂದಿದ್ದ. ನವೀನನೂ ಒಂದು ಕೊಲೆ, ಓಂದು ಸುಲಿಗೆ, 2 ಕೊಲೆ ಯತ್ನ ಮತ್ತು ಒಂದು ಹೊಡೆದಾಟದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇವರಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.
ಈ ಪ್ರಕರಣವನ್ನು ಭೇದಿಸಲು ಶ್ರಮಿಸಿದ ಇನ್ ಸ್ಪೆಕ್ಟರ್ ಸತ್ಯನಾರಾಯಣ, ಬಡಾವಣೆ ಠಾಣೆ ಪಿಎಸ್‌ಐ ಸುರೇಶ್, ಎಎಸ್‌ಐ ಕೇಶವ ಪ್ರಸಾದ್ ಮತ್ತು ಸಿಬ್ಬಂದಿಯವರಾದ ಸೋಮಶೇಖರ್, ಲೋಹಿತ್, ರಘು, ಪ್ರವೀಣ, ಪದೀಪ್ ಅವರ® ತಂಡಕ್ಕೆ 10 ಸಾವಿರ ರೂ. ಬಹುಮಾನ ಘೋಷಣೆ
ಮಾಡಲಾಗಿದೆ ಎಂ ದರು. ಎಎಸ್ಪಿ ಬಿ.ಎನ್.ನಂದಿನಿ, ಇನ್‌ಸ್ಪೆಕ್ಟರ್ ಸತ್ಯನಾರಾಯಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
ಹಾಸನಾಂಬೆ ದರ್ಶನಕ್ಕೆ ವಿಧ್ಯುಕ್ತ ತೆರೆ; 9 ದಿನದಲ್ಲಿ 19 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Party Clean: ಹೊಂದಾಣಿಕೆ ರಾಜಕಾರಣ ಮಾಡೋರಿಗೆ ಬಿಜೆಪಿಯಿಂದ ಗೇಟ್‌ಪಾಸ್: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.