“ಫಾರ್ಮ್ಹೌಸ್’ ವಿವಾದದಲ್ಲಿ ರಾಹುಲ್
Team Udayavani, Dec 11, 2018, 6:00 AM IST
ಹೊಸದಿಲ್ಲಿ: ಹಣಕಾಸು ಅಕ್ರಮದ ಸುಳಿಯಲ್ಲಿ ಸಿಲುಕಿರುವ ಉದ್ಯಮಿ ಜಿಗ್ನೇಶ್ ಶಾ ಅವರ ಕಂಪನಿಯೊಂದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ, ತಮಗೆ ಸೇರಿದ ಫಾರ್ಮ್ ಹೌಸ್ ಒಂದನ್ನು ಬಾಡಿಗೆಗೆ ನೀಡಿದ್ದರೆಂದು “ಇಂಡಿಯನ್ ಎಕ್ಸ್‌ಪ್ರೆಸ್’ ಪ್ರಕಟಿಸಿರುವ ವರದಿಯೊಂದು ಹೊಸ ರಾಜಕೀಯ ವಿವಾದವನ್ನು ಎಬ್ಬಿಸಿದೆ.
ವರದಿಯ ಪ್ರಕಾರ, 2013ರಲ್ಲಿ, ಜಿಗ್ನೇಶ್ ಶಾ ಅವರ ನ್ಯಾಷನಲ್ ಸ್ಪಾಟ್ ಎಕ್ಸ್ ಚೇಂಜ್ ಲಿಮಿಟೆಡ್ (ಎನ್‌ಎಸ್‌ಇಎಲ್) ಸಂಸ್ಥೆಯಿಂದ ಸೃಷ್ಟಿಯಾಗಿದ್ದ ಫೈನಾನ್ಷಿಯಲ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್‌ಗೆ (ಎಫ್ಟಿಐಎಲ್) ದಿಲ್ಲಿಯ ಮೆಹರೌಲಿಯಲ್ಲಿರುವ ತಮ್ಮ “ಇಂದಿರಾ ಗಾಂಧಿ ಫಾರ್ಮ್ ಹೌಸ್’ ಅನ್ನು ರಾಹುಲ್ ಹಾಗೂ ಪ್ರಿಯಾಂಕಾ ವಾದ್ರಾಗೆ ಬಾಡಿಗೆಗೆ ನೀಡಿದ್ದರು. 40.2 ಲಕ್ಷ ರೂ. ಮುಂಗಡ (ಅಡ್ವಾನ್ಸ್ ಡೆಪಾಸಿಟ್) ಹಾಗೂ ತಿಂಗಳಿಗೆ 6.7 ಲಕ್ಷ ರೂ.ಗಳ ಬಾಡಿಗೆ ಒಪ್ಪಂದ ಇದಾಗಿತ್ತು. ಹಾಗಾಗಿ, ರಾಹುಲ್ ಬ್ಯಾಂಕ್ ಖಾತೆಗೆ ಡೆಪಾ ಸಿಟ್ ಹಣವನ್ನು 20.1 ಲಕ್ಷ ರೂ.ಗಳ ಎರಡು ಚೆಕ್‌ಗಳ ಮೂಲಕ 40.2 ಲಕ್ಷ ರೂ.ಗಳನ್ನು ಜಮೆ ಮಾಡಲಾಗಿತ್ತು. 11 ತಿಂಗಳ ಈ ಬಾಡಿಗೆ ಕರಾರು ಡಿ. 31, 2013ಕ್ಕೆ ಮುಗಿಯಬೇಕಿತ್ತಾದರೂ, ಅದಕ್ಕೆ ಎರಡು ತಿಂಗ ಳಿಗೂ ಮುನ್ನ ಅಕ್ಟೋಬರ್‌ನಲ್ಲಿ ಈ ಒಪ್ಪಂದ ರದ್ದಾಯಿತು ಎಂದು ಹೇಳಲಾಗಿದೆ.
ರಾಹುಲ್ ಸ್ಪಷ್ಟನೆ ನೀಡಲಿ- ಬಿಜೆಪಿ: ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, “”ಎಫ್ಟಿಐಎಲ್ ಸಂಸ್ಥೆ, ಯುಪಿಎ ಅವಧಿಯಲ್ಲಿ ಕಾನೂನು ಬಾಹಿರವಾಗಿ ಸೃಷ್ಟಿಯಾದ ಸಂಸ್ಥೆ. ಎನ್‌ಎಸ್‌ಇಎಲ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆಯುವ ತಂತ್ರಗಾರಿಕೆಯ ಭಾಗವಾಗಿ ಫಾರ್ಮ್ ಹೌಸ್ ಅನ್ನು ಬಾಡಿಗೆಗೆ ನೀಡಲಾಗಿತ್ತು. ರಾಹುಲ್ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಯಾಗಿರುವುದೇ ಅದಕ್ಕೆ ಸಾಕ್ಷಿ. ಆ ಬಗ್ಗೆ ರಾಹುಲ್ ಸ್ಪಷ್ಟನೆ ನೀಡಲಿ” ಎಂದಿದ್ದಾರೆ.
ಜತೆಗೆ, “”ಯುಪಿಎ ಅವಧಿಯಲ್ಲಿ ರಾಹುಲ್ ಹಾಗೂ ಅವರ ಸಂಗಡಿಗರು “ಅಲಿ ಬಾಬಾ ಹಾಗೂ 40 ಕಳ್ಳರಂತೆ ಲೂಟಿ ಮಾಡಿದ್ದಾರೆ. ಇಂಥವರು, ಮೋದಿಯಿಂದ ಭ್ರಷ್ಟಾಚಾರ ನಿಗ್ರಹ ಏಕಾಗುತ್ತಿಲ್ಲ ಎಂದು ನಾಟಕೀಯವಾಗಿ ಪ್ರಶ್ನಿಸುತ್ತಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ. ಇಂಡಿಯನ್ ಎಕ್ಸ್ ಪ್ರಸ್ ವರದಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪಿಯೂಶ್ ಗೋಯೆಲ್, “”ಭ್ರಷ್ಟಾ ಚಾರದ ಜತೆಗೆ ಕಾಂಗ್ರೆಸ್ ನಡಿಗೆ” ಎಂದು ಟೀಕಿಸಿದ್ದಾರೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಫಾರ್ಮ್ ಹೌಸ್ ಬಾಡಿಗೆಗೆ ನೀಡಿದ್ದು ಸಹಜ ವ್ಯವಹಾರವಷ್ಟೇ. ಅದರಲ್ಲಿ ಹುಳುಕು ಹುಡುಕುವ ಅಗತ್ಯವಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.