ಐದು ರಾಜ್ಯಗಳಲ್ಲಿ ಕರ್ನಾಟಕ ಮಾದರಿ ಮೈತ್ರಿಕೂಟ?
Team Udayavani, Dec 11, 2018, 6:00 AM IST
ಹೊಸದಿಲ್ಲಿ/ಮುಂಬಯಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ಮಂಗಳವಾರ ನಡೆಯಲಿದೆ. ಹಲವು ಸುದ್ದಿ ವಾಹಿನಿ ಗಳು ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಭವಿಷ್ಯ ನುಡಿದಿರುವುದರಿಂದ ಕರ್ನಾಟಕ ಮಾದರಿಯ ಮೈತ್ರಿಕೂಟ ರಚನೆ ಸಾಧ್ಯವಿದೆಯೇ ಎಂಬ ಬಗ್ಗೆ ಬಿಜೆಪಿ, ಕಾಂಗ್ರೆಸ್, ಇತರ ಪಕ್ಷ ಗಳು ಲೆಕ್ಕಾಚಾರ ಹಾಕತೊಡಗಿವೆ. ಈಗಾಗಲೇ ಪ್ರಾದೇ ಶಿಕ ಪಕ್ಷಗಳ ಜತೆಗೆ ಮಾತುಕತೆಯೂ ಶುರುವಾಗಿದೆ. 2018ರ ಮೇಯಲ್ಲಿ ಕರ್ನಾಟಕ ಚುನಾವಣ ಫಲಿತಾಂಶದ ವೇಳೆ, ಆರಂಭದಲ್ಲಿ ಬಿಜೆಪಿಗೆ ಅಧಿ ಕಾರ ಸಿಗಲಿದೆ ಎಂಬ ಟ್ರೆಂಡ್ ಇದ್ದರೂ ಅಂತಿಮವಾಗಿ 7 ಸ್ಥಾನಗಳ ಕೊರತೆ ಉಂಟಾಗಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿತು.
ಅದರಂತೆ ಮಧ್ಯಪ್ರದೇಶದಲ್ಲಿ ಅತಂತ್ರ ವಿಧಾನಸಭೆ ರಚನೆಯಾದರೆ ಪಕ್ಷೇತರರು, ಬಿಎಸ್‌ಪಿ ಮತ್ತು ಗೊಂಡ್ವಾನಾ ಗೋಮಾಂತಕ ಪಕ್ಷದ ಜತೆಗೆ ಸರಕಾರ ರಚಿಸಲು ಬಿಜೆಪಿ ಅಥವಾ ಕಾಂಗ್ರೆಸ್ ಮುಂದಾಗಬಹುದು. ಛತ್ತೀಸ್‌ಗಢ ದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಮಾಜಿ ಸಿಎಂ ಅಜಿತ್ ಜೋಗಿ ಅವರ ಜನತಾ ಕಾಂಗ್ರೆಸ್ ಛತ್ತೀಸ್‌ಗಢ (ಜೆಸಿಸಿ), ಬಿಎಸ್‌ಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳಿಗೆ ಹೆಚ್ಚಿನ ಬಲ ಬಂದಂತಾಗಲಿದೆ. ಏಕೆಂದರೆ ಇಲ್ಲಿ ಸರಕಾರ ರಚಿಸಲು ಪ್ರಮುಖ ಪಕ್ಷಗಳು ಈ ಪಕ್ಷಗಳನ್ನೇ ನೆಚ್ಚಿಕೊಳ್ಳ ಬೇಕಾಗುತ್ತದೆ.
ತೆಲಂಗಾಣದಲ್ಲಿ ಸಂಸದ ಅಸಾದುದ್ದೀನ್ ಒವೈಸಿ ಅವರ ಎಂಐಎಂ ಪಕ್ಷ ಮತ್ತು ಬಿಜೆಪಿ ಪ್ರಬಲ ಪರ್ಯಾಯ ಶಕ್ತಿಯಾಗಿ ಮೂಡಿಬರುವ ವಿಶ್ವಾಸವನ್ನು ಹೊಂದಿವೆ. ಇನ್ನು ಮಿಜೋರಾಂನಲ್ಲಿ ಕಾಂಗ್ರೆಸ್ ಸೋತರೆ, ವಿಪಕ್ಷ ಮಿಜೋ ನ್ಯಾಶನಲ್ ಫ್ರಂಟ್ ಜತೆ ಸೇರಿಕೊಂಡು ಸರಕಾರ ರಚಿಸಲು ಬಿಜೆಪಿ ಉತ್ಸುಕವಾಗಿದೆ. ಅಸ್ಸಾಂ ಸಚಿವ ಹಿಮಾಂತ ಬಿಸ್ವ ಶರ್ಮಾ ಈಗಾಗಲೇ ರಂಗಕ್ಕೆ ಇಳಿದಿದ್ದಾರೆ.
ಷೇರುಪೇಟೆ 714 ಅಂಕ ಕುಸಿತ
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಐದು ರಾಜ್ಯಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಭವಿಷ್ಯ ನುಡಿದ ಹಿನ್ನೆಲೆಯಲ್ಲಿ ಸೋಮವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 714 ಅಂಕ ಕುಸಿತ ಕಂಡಿದೆ. ಕಳೆದ 2 ತಿಂಗಳಲ್ಲಿ ಆಗಿರುವ ಅತ್ಯಧಿಕ ಕುಸಿತ ಇದಾಗಿದೆ. ಇದರ ಜತೆಗೆ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಮಧ್ಯಾಂತರ ವಹಿವಾಟಿನಲ್ಲಿ ಕುಸಿದದ್ದು ಕೂಡ ಸೆನ್ಸೆಕ್ಸ್ ಇಳಿಕೆಗೆ ಕಾರಣ ಎನ್ನಲಾಗಿದೆ. ಬಿಎಸ್‌ಇ, ಎನ್‌ಎಸ್‌ಇನಲ್ಲಿ ವಹಿವಾಟು ನಡೆಸಿದ ಎಲ್ಲ ಮಾದರಿಯ ಕಂಪೆನಿಗಳ ಷೇರುಗಳೂ ಕುಸಿತ ಕಂಡಿವೆ. ಬಿಎಸ್‌ಇ ಸೂಚ್ಯಂಕ ದಿನಾಂತ್ಯಕ್ಕೆ 34,959.19ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ 205 ಅಂಕ ಕುಸಿತ ದಾಖಲಿಸಿ 10,488.45ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.