ಪ್ರೀತಿ, ಶಾಂತಿ ಏಸು ಜಗತ್ತಿಗೆ ನೀಡಿದ ಭವ್ಯ ಕಾಣಿಕೆ
Team Udayavani, Dec 11, 2018, 10:55 AM IST
ಉಡುಪಿ: ಪ್ರಭು ಏಸು ಜಗತ್ತಿಗೆ ನೀಡಿರುವ ಭವ್ಯ ಕಾಣಿಕೆ ಪ್ರೀತಿ ಮತ್ತು ಶಾಂತಿ ಎಂದು ಉಡುಪಿ ಬಿಷಪ್ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು. ಫೆಲೋಶಿಪ್ ಆಫ್ ಉಡುಪಿ ಡಿಸ್ಟ್ರಿಕ್ಟ್ ಚರ್ಚಸ್ ವತಿಯಿಂದ ಉಡುಪಿ ಕ್ರಿಶ್ಚಿಯನ್ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ “ಸಮಾಧಾನ ಮಹೋತ್ಸವ’ವನ್ನು (ಫೆಸ್ಟಿವಲ್ ಆಫ್ ಪೀಸ್) ಶುಕ್ರವಾರ ಉದ್ಘಾಟಿಸಿ ಅವರು ಸಂದೇಶ ನೀಡಿದರು.
ಜಗತ್ತಿನಲ್ಲಿ ದ್ವೇಷ ಅಸೂಯೆಗಳಿವೆ. ಇಂತಹ ಸಂದರ್ಭದಲ್ಲಿ ಶಾಂತಿ, ಸಮಾಧಾನ ಮತ್ತು ಪ್ರೀತಿಯ ಅಗತ್ಯವಿದೆ. “ಶಾಂತಿಗಾಗಿ ಶ್ರಮಿಸುವವರು ಭಾಗ್ಯವಂತರು’ ಎಂಬುದಾಗಿ ಪ್ರಭು ಏಸು ಉಪದೇಶ ನೀಡಿದ್ದಾರೆ. ಪ್ರತಿಯೋರ್ವರ ಮನೆ ಮನಗಳಲ್ಲಿ ಶಾಂತಿ ನೆಲೆಸುವುದಕ್ಕಾಗಿ ಶ್ರಮಿಸಬೇಕಾಗಿದೆ ಎಂದು ಬಿಷಪ್ ಹೇಳಿದರು.
ವಂ| ಸ್ಯಾಮ್ ಪಿ. ಚೆಲ್ಲದೊರೈ ಮುಖ್ಯ ಸಂದೇಶ ನೀಡಿದರು. ಉಡುಪಿ ಡಿಸ್ಟ್ರಿಕ್ಟ್ ಫುಲ್ ಗೋಸ್ಪೆಲ್ ಫಾಸ್ಟರ್ ಅಸೋಸಿಯೇಶನ್ ಅಧ್ಯಕ್ಷ ಫಾಸ್ಟರ್ ಜೋಸೆಫ್ ಜಮಖಂಡಿ, ದ.ಕ., ಕೊಡಗು ಮತ್ತು ಉಡುಪಿ ಜಿಲ್ಲಾ ಯುನೈಟೆಡ್ ಬಾಸೆಲ್ ಮಿಷನ್ ಅಧ್ಯಕ್ಷ ಜಯಪ್ರಕಾಶ್ ಸೈಮನ್, ಮಂಜುಳಾ ಚೆಲ್ಲದೊರೈ, ಜಾನ್ ಅಬ್ರಹಾಂ ಉಪಸ್ಥಿತರಿದ್ದರು. ಸುಚೇತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು. 200 ಸದಸ್ಯರನ್ನೊಳಗೊಂಡ ಗಾಯನ ಮಂಡಳಿಯಿಂದ ವಿಶೇಷ ಕೂಟ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.