ರ್‍ಯಾಂಕಿಂಗ್: ಕೊಹ್ಲಿಯೇ ನಂಬರ್ ವನ್
Team Udayavani, Dec 12, 2018, 6:00 AM IST
ದುಬಾೖ: ಭಾರತ-ಆಸ್ಟ್ರೇಲಿಯ ನಡುವಿನ ಅಡಿಲೇಡ್ ಟೆಸ್ಟ್ ಪಂದ್ಯದ ಬಳಿಕ ಐಸಿಸಿ ರ್‍ಯಾಂಕಿಂಗ್ ಯಾದಿಯನ್ನು ಪರಿಷ್ಕರಿಸಲಾಗಿದ್ದು, ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಬ್ಯಾಟಿಂಗ್ ಯಾದಿಯ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ನ್ಯೂಜಿಲ್ಯಾಂಡಿನ ನಾಯಕ ಕೇನ್ ವಿಲಿಯಮ್ಸನ್ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ.
ವಿರಾಟ್ ಕೊಹ್ಲಿ 920 ಹಾಗೂ ವಿಲಿಯಮ್ಸನ್ 913 ಅಂಕ ಹೊಂದಿದ್ದಾರೆ. ನ್ಯೂಜಿಲ್ಯಾಂಡಿನ ಬ್ಯಾಟ್ಸ್‌ಮನ್ ಓರ್ವ ಟೆಸ್ಟ್ ರ್‍ಯಾಂಕಿಂಗ್‌ನಲ್ಲಿ 900 ಅಂಕ ಸಂಪಾದಿಸಿದ ಮೊದಲ ದೃಷ್ಟಾಂತ ಇದಾಗಿದೆ. ಇದಕ್ಕೂ ಮುನ್ನ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಕಿವೀಸ್‌ನ ರಿಚರ್ಡ್ ಹ್ಯಾಡ್ಲಿ 900 ಪ್ಲಸ್ ಅಂಕ ಗಳಿಸಿದ ಸಾಧನೆಗೈದಿದ್ದರು (909). ವಿರಾಟ್ ಕೊಹ್ಲಿ ಅಡಿಲೇಡ್‌ನಲ್ಲಿ ಗಳಿಸಿದ್ದು 37 ರನ್ ಮಾತ್ರ. ಇದರಿಂದ ಅವರು 15 ಅಂಕಗಳನ್ನು ಕಳೆದುಕೊಳ್ಳಬೇಕಾಯಿತು. ಈಗ ಕೊಹ್ಲಿ-ವಿಲಿಯಮ್ಸನ್ ನಡುವೆ ಕೇವಲ 7 ಅಂಕಗಳ ಅಂತರವಿದೆ.
ಇತ್ತೀಚೆಗಷ್ಟೇ ನ್ಯೂಜಿಲ್ಯಾಂಡ್ ತಂಡ ಯುಎಇಯಲ್ಲಿ ಪಾಕಿಸ್ಥಾನ ವಿರುದ್ಧ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದಿತ್ತು. 49 ವರ್ಷಗಳ ಬಳಿಕ ಏಶ್ಯನ್ ತಂಡದ ವಿರುದ್ಧ ವಿದೇಶದಲ್ಲಿ ಟೆಸ್ಟ್ ಸರಣಿ ಗೆದ್ದ ಹಿರಿಮೆ ಕಿವೀಸ್ ತಂಡದ್ದಾಗಿತ್ತು. ಈ ಸರಣಿಯೊಂದಿಗೆ ನ್ಯೂಜಿಲ್ಯಾಂಡಿನ ಈ ವರ್ಷದ ಟೆಸ್ಟ್ ಆಟ ಮುಗಿದಿದೆ. ಕೇನ್ ವಿಲಿಯಮ್ಸನ್ ಈ ವರ್ಷದ 5 ಟೆಸ್ಟ್‌ಗಳಿಂದ 63.75ರ ಸರಾಸರಿಯಲ್ಲಿ 510 ರನ್ ಗಳಿಸಿದ್ದಾರೆ. ಇದರಲ್ಲಿ 228 ರನ್ ಪಾಕ್ ಎದುರಿನ ಕಳೆದ 3 ಪಂದ್ಯಗಳ ಸರಣಿಯಲ್ಲಿ ದಾಖಲಾಗಿತ್ತು.
ಪೂಜಾರ 4 ಸ್ಥಾನ ಜಿಗಿತ
ಅಡಿಲೇಡ್‌ನಲ್ಲಿ ಒಟ್ಟು 194 ರನ್ ಬಾರಿಸಿದ ಚೇತೇಶ್ವರ್ ಪೂಜಾರ ಆರರಿಂದ ಮೇಲೇರಿ 4ನೇ ಸ್ಥಾನಕ್ಕೆ ಬಂದಿದ್ದಾರೆ. ಅಜಿಂಕ್ಯ ರಹಾನೆ 2 ಸ್ಥಾನಗಳ ಪ್ರಗತಿ ಸಾಧಿಸಿದ್ದು, 17ನೇ ರ್‍ಯಾಂಕಿಂಗ್ ಹೊಂದಿದ್ದಾರೆ. ರಿಷಬ್ ಪಂತ್ 7 ಸ್ಥಾನ ಮೇಲೇರಿ 59ನೇ ಸ್ಥಾನ ತಲುಪಿದ್ದಾರೆ. ಕೆ.ಎಲ್. ರಾಹುಲ್ (26), ಮುರಳಿ ವಿಜಯ್ (45), ರೋಹಿತ್ ಶರ್ಮ (53) ಅವರ ರ್‍ಯಾಂಕಿಂಗ್‌ನಲ್ಲಿ ಕುಸಿತ ಸಂಭವಿಸಿದೆ. ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ (13), ಆರನ್ ಫಿಂಚ್ (89), ಶಾನ್ ಮಾರ್ಷ್ (38), ಟಿಮ್ ಪೇನ್ (55), ಟ್ರ್ಯಾವಿಸ್ ಹೆಡ್ (17) ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಕೆಲವು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡಿನ ಹೆನ್ರಿ ನಿಕೋಲ್ಸ್ ಪ್ರಗತಿ ಸಾಧಿಸಿದ್ದಾರೆ.
ಬುಮ್ರಾ ಜೀವನಶ್ರೇಷ್ಠ “33′
ಬೌಲಿಂಗ್ ರ್‍ಯಾಂಕಿಂಗ್‌ನ ಟಾಪ್-10 ಯಾದಿಯಲ್ಲಿ ವಿಶೇಷ ಬದಲಾವಣೆ ಸಂಭವಿಸಿಲ್ಲ. ಅಡಿಲೇಡ್‌ನಲ್ಲಿ 6 ವಿಕೆಟ್ ಕಿತ್ತ ಜಸ್‌ಪ್ರೀತ್ ಬುಮ್ರಾ ಜೀವನಶ್ರೇಷ್ಠ 33ನೇ ರ್‍ಯಾಂಕಿಂಗ್ ಗಳಿಸಿದ್ದಾರೆ. ಕಾಗಿಸೊ ರಬಾಡ, ಜೇಮ್ಸ್ ಆ್ಯಂಡರ್ಸನ್ ಮತ್ತು ವೆರ್ನನ್ ಫಿಲಾಂಡರ್ ಮೊದಲ 3 ಸ್ಥಾನದಲ್ಲಿದ್ದಾರೆ. ತಂಡ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದು (116), ಪರಾಜಿತ ಆಸ್ಟ್ರೇಲಿಯ 5ರಲ್ಲಿದೆ (102).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್
IPL Auction 2025: ಸೇಲ್ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..
IPL Mega Auction: ಮೂರನೇ ಸೆಟ್ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.