ಕುಂದಾಪುರ: ಸ್ಪಂದಿಸುವ ಮಾನವೀಯ ಮನೋಭಾವವೇ ಸೌಹಾರ್ದ


Team Udayavani, Dec 12, 2018, 2:25 AM IST

kemaru-shree-11-12.jpg

ಕುಂದಾಪುರ: ಸಮಾಜದಲ್ಲಿ ಇನ್ನೊಬ್ಬರ ನೋವು, ನಲಿವುಗಳಿಗೆ ಸ್ಪಂದಿಸುವ ಮಾನವೀಯ ಮನೋಭಾವವೇ ಸೌಹಾರ್ದ. ಭಾವನೆಗಳ ಭಾವೈಕ್ಯತೆ ತುಂಬಿರುವ ದೇಶದಲ್ಲಿ ಮದರ್‌ ಥೇರೆಸಾ, ಅಬ್ದುಲ್‌ ಕಲಾಂ ನಮಗೆಲ್ಲ ಸ್ಫೂರ್ತಿಯಾಗಬೇಕು ಎಂದು ಕೇಮಾರು ಸಾಂದೀಪನಿ ಆಶ್ರಮದ ಈಶ ವಿಠ್ಠಲದಾಸ ಸ್ವಾಮೀಜಿ ಹೇಳಿದರು. ಅವರು ಕೆಥೋಲಿಕ್‌ ಸಭೆ ಉಡುಪಿ ಪ್ರದೇಶ ಕುಂದಾಪುರ ವಲಯ ಸಮಿತಿ ಆಶ್ರಯದಲ್ಲಿ ಪ.ಪೂ. ಕಾಲೇಜಿನ ಆವರಣದಲ್ಲಿ ರವಿವಾರ ಸಂಜೆ ನಡೆದ ಸೌಹಾರ್ದ ಕ್ರಿಸ್ಮಸ್‌ ಉದ್ಘಾಟಿಸಿ ಮಾತನಾಡಿದರು.

ಎಲ್ಲವೂ ಯಾಂತ್ರಿಕವಾಗಿರುವ ಇಂದಿನ ಕಾಲದಲ್ಲಿ ನಾವು ಯಾವುದೇ ಮಾನವೀಯ ಮೌಲ್ಯವಿಲ್ಲದ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಭಾವನೆಯಿಂದ ಹೊರಬರಲು ಒಗ್ಗಟ್ಟಿನ ಮಂತ್ರ ಪಠಿಸುವ ಅಗತ್ಯವಿದೆ. ಪ್ರೀತಿ, ಪ್ರೇಮ ಮರೆತು ಇಂದಿನ ಯಾಂತ್ರಿಕ ಪ್ರಪಂಚದಲ್ಲಿ ಕಳೆದು ಹೋಗುತ್ತಿರುವ ನಮ್ಮಲ್ಲಿ, ಸಹೋದರತೆ ಅರಿವು ಮೂಡಿ ಸಮಾಜ ಕಟ್ಟುವ ಕಾರ್ಯಗಳು ನಡೆಯಬೇಕು ಎಂದು  ಹೇಳಿದರು.

ಉಡುಪಿ ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಕ್ರಿಸ್‌ಮಸ್‌  ಸಂದೇಶ ನೀಡಿ, ಹರಿವ ನದಿಗಳು ಕೊನೆಗೆ ಒಟ್ಟಾಗಿ ಸಮುದ್ರ ಸೇರುವಂತೆ ವಿವಿಧ ಧರ್ಮದ ದಾರಿಗಳು ಕೊನೆಗೊಳ್ಳುವುದು ಭಗವಂತನ ಮಡಿಲಲ್ಲಿ. ಶ್ರೇಷ್ಠವಾದ ಹಾಗೂ ಶಾಂತಿಯುತವಾದ ಸಮಾಜ ಕಟ್ಟಬೇಕು ಎನ್ನುವುದು ಧರ್ಮವು ನಮಗೆ ಹೇಳಿಕೊಡುತ್ತದೆ ಎಂದರು. ಹೃದಯವೆಂಬ ದೇವ ಮಂದಿರದಲ್ಲಿ ಸರ್ವರನ್ನು ಪೂಜಿಸುವುದು ನೈಜ ಸೌಹಾರ್ದತೆ. ಬಹು ತತ್ವದಲ್ಲಿ ನಂಬಿಕೆ ಇರುವ ಭಾರತದಲ್ಲಿ ರಾಜಕೀಯ ಕಾರಣಕ್ಕಾಗಿ ಕಲುಷಿತ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ದಿಕ್ಸೂಚಿ ಭಾಷಣದಲ್ಲಿ ಸದ್ಭಾವನಾ ವೇದಿಕೆ ರಾಜ್ಯ ಕಾರ್ಯದರ್ಶಿ ಅಕ್ಬರ್‌ ಅಲಿ ಹೇಳಿದರು.

ಕುಂದಾಪುರ ವಲಯ ಪ್ರಧಾನ ಧರ್ಮಗುರು ಸ್ಟ್ಯಾನ್ಲಿ ತಾವ್ರೊ, ಸಿಎಸ್‌ಐ ಇಗರ್ಜಿ ಧರ್ಮಗುರು ಕಿಶೋರ ಕುಮಾರ, ಜಡ್ಕಲ್‌ನ ಸೈಂಟ್‌ ಜಾರ್ಜ್‌ ಇಗರ್ಜಿ ಧರ್ಮಗುರು ವರ್ಗಿàಸ್‌ ಪುದಿಯಡತ್ತ್, ಸಾಸ್ತಾನ ಸೈಂಟ್‌ ಥೋಮಸ್‌ ಆರ್ಥೋಡಕ್ಸ್‌ ಇಗರ್ಜಿ ಧರ್ಮಗುರು ನೋಯಲ್‌ ಲೂವಿಸ್‌, ಕೆಥೊಲಿಕ್‌ ಸಭಾ ಅಧ್ಯಕ್ಷ ಮೈಕಲ್‌ ಪಿಂಟೊ, ಕಾರ್ಯದರ್ಶಿ ಲೀನಾ ತಾವ್ರೊ, ಕಾರ್ಯಕ್ರಮ ಸಂಚಾಲಕ ಎಲ್ರಾಯ್‌ ಕಿರಣ್‌ ಕ್ರಾಸ್ತಾ ಉಪಸ್ಥಿತರಿದ್ದರು. ಸಮಾಜ ಸೇವಕ ವಾಸುದೇವ ಹಂದೆ, ಸೀರಾಜ್‌ ಅಹಮ್ಮದ್‌ ಹಾಗೂ ಲಿಫ್ಟ್‌ನ್‌ ಒಲಿವೇರಾ ಅವರನ್ನು ಗೌರವಿಸಲಾಯಿತು.  ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಆಲ್ವಿನ್‌ ಕ್ವಾಡ್ರಸ್‌ ಸ್ವಾಗತಿಸಿದರು. ವಿನೋದ್‌ ಕ್ರಾಸ್ತಾ, ಜಾನ್ಸ್‌ ಡಿ’ಆಲ್ಮೇಡಾ, ನ್ಯಾನ್ಸಿ ಡಿ’ಸೋಜಾ ಸಮ್ಮಾನ ಪತ್ರ ವಾಚಿಸಿದರು. ಮೇಬಲ್‌ ಡಿಸೋಜಾ ಹಾಗೂ ಫೈವನ್‌ ಡಿಸೋಜಾ ನಿರೂಪಿಸಿದರು.

ಏಕತೆಯ ಸಂಕೇತ
ಶಾಂತಿ, ಪ್ರೀತಿ ಮತ್ತು ದಯೆಯ ಸಂದೇಶವನ್ನು ಪ್ರತೀ ಧರ್ಮ ಪ್ರತಿಪಾದಿಸುತ್ತದೆ. ಎಲ್ಲಧರ್ಮಗಳು ಕೂಡ ಇತರ ಧರ್ಮಗಳನ್ನು ಗೌರವಿಸಬೇಕೆಂದು ಹೇಳುತ್ತದೆ. ಎಲ್ಲರೂ ಒಂದೇ ಮಾನವ ಕುಲದವರಾಗಿದ್ದಾರೆಂದು ಅದು ಪ್ರತಿಪಾದಿಸುತ್ತದೆ.
– ಡಾ| ಜೆರಾಲ್ಡ್‌ ಐಸಾಕ್‌ ಲೊಬೊ, ಧರ್ಮಾಧ್ಯಕ್ಷ, ಉಡುಪಿ ಧರ್ಮ ಪ್ರಾಂತ

ಟಾಪ್ ನ್ಯೂಸ್

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-dam

ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ

1-ran

National Anthem Controversy:ಭಾಷಣ ಮಾಡದೆ ಹೋದ ತಮಿಳುನಾಡು ರಾಜ್ಯಪಾಲ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು

Mangaluru: ಬಾಲಕಿಯ ವೀಡಿಯೋ ಮಾಡಿದ್ದ ಯುವಕನಿಗೆ ಜೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

Udupi: ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

car-parkala

Brahmavar: ಕಂಟೈನರ್‌ ಢಿಕ್ಕಿ; ಬೈಕ್‌ ಸಹಸವಾರೆ ಸಾವು

Kaup ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಂದ ಅಧಿಕಾರ ಸ್ವೀಕಾರ

Kaup ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಂದ ಅಧಿಕಾರ ಸ್ವೀಕಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Koppal-Bjp

Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ

1-shiv

ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ

1-dee

ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗ‌ಳ ದರವೂ ಹೆಚ್ಚಳ

1-devvvi

ಕಂದಹಾರ್‌ ಹೈಜಾಕ್‌ ವೇಳೆಯ ಪೈಲಟ್‌ ದೇವಿ ಶರಣ್‌ ನಿವೃತ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.