ಕರ್ತವ್ಯನಿಷ್ಠೆಗೆ ಗೃಹರಕ್ಷಕರು ಹೆಸರುವಾಸಿ: ವಸಂತ ಕುಮಾರ್
Team Udayavani, Dec 12, 2018, 2:40 AM IST
ಉಡುಪಿ: ಗೃಹರಕ್ಷಕ ದಳದವರು ಕರ್ತವ್ಯನಿಷ್ಠೆಗೆ ಹೆಸರಾದವರು ಎಂದು ಜಿಲ್ಲಾ ಅಗ್ನಿಶಾಮಕಾಧಿಕಾರಿ ವಸಂತಕುಮಾರ್ ಬಣ್ಣಿಸಿದರು. ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಗೃಹರಕ್ಷಕದಳ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪೊಲೀಸ್, ಅಗ್ನಿಶಾಮಕ ಇಲಾಖೆಯಂತೆ ಗೃಹ ರಕ್ಷಕರೂ ಶಿಸ್ತಿನ ಸಿಪಾಯಿಗಳು. ಸರಕಾರದ ಸೌಲಭ್ಯಗಳು ಕೆಲವು ವೇಳೆ ವಿಳಂಬವಾದರೂ ಕರ್ತವ್ಯನಿಷ್ಠೆಯನ್ನು ಗೃಹರಕ್ಷಕರು ಎಂದಿಗೂ ಮರೆಯುವುದಿಲ್ಲ. ಕರ್ತವ್ಯನಿಷ್ಠೆಯನ್ನು ಮುಂದುವರಿಸಿದರೆ ಸೌಲಭ್ಯ ತಾನಾಗಿ ಬರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಮಾಂಡೆಂಟ್ ಡಾ|ಕೆ.ಪ್ರಶಾಂತ್ ಶೆಟ್ಟಿಯವರು ವಾರ್ಷಿಕ ವರದಿ ವಾಚಿಸಿ ಈ ವರ್ಷ 96 ಗೃಹರಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಮಧ್ಯಪ್ರದೇಶದ ಚುನಾವಣೆಯೂ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಗೃಹರಕ್ಷಕರು ಕರ್ತವ್ಯ ನಿರ್ವಹಿಸಿದ್ದಾರೆಂದರು. ದ.ಕ., ಉಡುಪಿ ಜಿಲ್ಲಾ ಡೆಪ್ಯುಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿ, ಕಾರ್ಕಳ ಘಟಕಾಧಿಕಾರಿ ಪ್ರಭಾಕರ ಸುವರ್ಣ ಪ್ರತಿಜ್ಞಾ ವಿಧಿ ಬೋಧಿಸಿದರು.
ಡೆಪ್ಯುಟಿ ಕಮಾಂಡೆಂಟ್ ರಮೇಶ್, ವಿವಿಧ ಘಟಕಗಳ ಅಧಿಕಾರಿಗಳಾದ ಪಡುಬಿದ್ರಿಯ ನವೀನ್‌ಕುಮಾರ್, ಕಾಪುವಿನ ಲಕ್ಷ್ಮೀನಾರಾಯಣ ರಾವ್, ಬ್ರಹ್ಮಾವರದ ಸ್ಟೀವನ್ ಪ್ರಕಾಶ್ ಅವರ ವಿಶೇಷ ಸೇವೆಗಾಗಿ ಸಮ್ಮಾನಿಸಲಾಯಿತು. ಸಮ್ಮಾನಿತರ ವಿವರಗಳನ್ನು ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ. ವಾಚಿಸಿದರು. ಬ್ರಹ್ಮಾವರದ ಘಟಕಾಧಿಕಾರಿ ಮಂಜುನಾಥ ಶೆಟ್ಟಿಗಾರ್ ವಂದಿಸಿದರು. ಹೈಟೆಕ್ ಪ್ಯಾರಾ ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ ಸಾಯಿನಾಥ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.
ಸರ್ವ ಇಲಾಖಾ ಕಾರ್ಯತತ್ಪರರು
ಅಗ್ನಿಶಾಮಕ ಇಲಾಖೆಯವರಿಗೆ ಬೆಂಕಿ ಜತೆ ಸೆಣೆಸಾಡುವ ಕೆಲ ಗೊತ್ತಿರುತ್ತದೆ ವಿನಾ ಕಾನೂನು ಸುವ್ಯವಸ್ಥೆ ಗೊತ್ತಿರುವುದಿಲ್ಲ. ಪೊಲೀಸ್ ಇಲಾಖೆಗೆ ಕಾನೂನು ಸುವ್ಯವಸ್ಥೆ ಗೊತ್ತಿರುತ್ತದೆ ವಿನಾ ಬೆಂಕಿ ಜತೆ ಸೆಣೆಸಾಡುವ ಕೆಲಸ ಗೊತ್ತಿರುವುದಿಲ್ಲ. ಆದರೆ ಗೃಹರಕ್ಷಕರು ಯಾವುದೇ ಇಲಾಖೆ ಜತೆ ಸೇರಿದಾಗಲೂ ಆ ಕಲೆಯನ್ನು ಕರಗತ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ ಮತ್ತು ಇತರ ಇಲಾಖೆಗಳ ಕೆಲಸ ನಿರ್ವಹಣೆಗೆ ಉತ್ತೇಜಕರಾಗಿರುತ್ತಾರೆ. ಮುಂಬೈಯಲ್ಲಿ ಭಯೋತ್ಪಾದಕರ ದಾಳಿ ನಡೆದಾಗ ಪೊಲೀಸ್ ನಿಯಂತ್ರಣ ಕೊಠಡಿಗೆ ಮೊದಲು ಸುದ್ದಿ ರವಾನೆ ಮಾಡಿದವರು ಗೃಹರಕ್ಷಕರು.
– ವಸಂತಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Love Reddy: ತೆರೆಗೆ ಬಂತು ʼಲವ್ ರೆಡ್ಡಿʼ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.