ಮಳೆಬಿಲ್ಲು ಚಿತ್ರೀಕರಣ ಮುಕ್ತಾಯ
Team Udayavani, Dec 12, 2018, 11:35 AM IST
ದರ್ಶನ್ ಅಭಿನಯದ “ಚಕ್ರವರ್ತಿ’ ಚಿತ್ರದಲ್ಲಿ “ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ..’ ಎಂಬ ಹಾಡು ಸಿಕ್ಕಾಪಟ್ಟೆ ಮೆಚ್ಚುಗೆ ಪಡೆದಿದ್ದು ಗೊತ್ತೇ ಇದೆ. ಆ ಹಾಡಿನ ಸಾಲೊಂದು ಹೊಸಬರ ಚಿತ್ರದ ಶೀರ್ಷಿಕೆ ಕೂಡ ಆಗಿದೆ. “ಮಳೆಬಿಲ್ಲು’ ಎಂಬ ಹೆಸರಿಟ್ಟುಕೊಂಡು ಮಾಡಿರುವ ಚಿತ್ರ ಈಗಾಗಲೆ ಸದ್ದಿಲ್ಲದೆಯೇ ಪೂರ್ಣಗೊಂಡಿದೆ. ಈ ಚಿತ್ರಕ್ಕೆ ನಾಗರಾಜ್ ಹಿರಿಯೂರು ನಿರ್ದೇಶಕರು.
ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ. ಅನನ್ಯ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ನಿಂಗಪ್ಪ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಇತ್ತೀಚೆಗೆ ಚಿತ್ರದುರ್ಗ, ಹಿರಿಯೂರು ಹಾಗೂ ವಾಣಿವಿಲಾಸ ಸಾಗರ ಸುತ್ತಮುತ್ತಲಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದ ನಾಯಕ ಶರತ್ ಹಾಗೂ ನಾಯಕಿ ನಯನಾ ಕಾಂಬಿನೇಷನ್‌ನಲ್ಲಿ “ಮೊದಲಾಯಿತು ಮೊದಲು ಮೊದಲು ಶುರುವಾಯಿತು..’
ಹಾಗು “ಓ ಪ್ರೀತಿ, ಓ ಪ್ರೀತಿ…’ ಎಂಬ ಎರಡು ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಹೈಟ್ ಮಂಜು ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಾಡುಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ. “ಮಳೆಬಿಲ್ಲು’ ಕಥೆ ಬಗ್ಗೆ ಹೇಳುವುದಾದರೆ, ಪ್ರತಿಯೊಬ್ಬ ಯುವಕರ ಲೈಫಲ್ಲಿ ಹುಡುಗಿಯೊಬ್ಬಳ ಪ್ರೀತಿ ಇದ್ದೇ ಇರುತ್ತೆ. ಅಂತಹ ಹುಡುಗಿಯೊಬ್ಬಳು ಚಿತ್ರದ ನಾಯಕನ ಲೈಫಲ್ಲಿ ಬಂದಾಗ, ಅವನ ಬದುಕು ಹೇಗೆ ಬಲದಾಗುತ್ತದೆ’ ಎಂಬುದು ಕಥೆ.
ಈ ಚಿತ್ರಕ್ಕೆ ಸಿ.ನಾರಾಯಣ್ ಛಾಯಾಗ್ರಹಣವಿದೆ. ಗಣೇಶ್-ನಾರಾಯಣ್ ಸಂಗೀತ ನೀಡಿದ್ದಾರೆ. ಎಂ.ಮುನಿರಾಜು ಸಂಕಲನ ಮಾಡಿದರೆ, ನಾಗಾರಾಜ್ ಸಾಹಿತ್ಯವಿದೆ. ಎಂ.ಆರ್.ಕಪಿಲ್, ಹೈಟ್ ಮಂಜು ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿಫರೆಂಟ್ ಡ್ಯಾನಿ ಸಾಹಸವಿದೆ. ಚಿತ್ರದಲ್ಲಿ ಶರತ್, ನಯನಾ, ಸಂಜನಾ, ಕಿರ್ಲೋಸ್ಕರ್ ಸತ್ಯನಾರಾಯಣ್, ಮೈಕೋ ನಾಗಾರಾಜ್, ಶ್ರೀನಿವಾಸ ಪ್ರಭು, ಮಹಾದೇವ್, ಚಂದನ್, ಡಿಫರೆಂಟ್ ಡ್ಯಾನಿ, ಮೀಸೆ ಅಂಜನಪ್ಪ, ಕೃಷ್ಣ ಮೂರ್ತಿ, ಡಿ.ಕೆ.ಯಶೋಧ, ರವಿತೇಜ, ಹರ್ಷಿತ, ಪ್ರಜ್ವಲ್, ದಮಯಂತಿ ನಾಗಾರಾಜ್, ಸೌಮ್ಯ, ಲಾವಣ್ಯ ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.