ನಾವೇನು ಕೋರ್ಟಿನಲ್ಲಿ ಜೋಕ್‌ ಮಾಡ್ತಿದ್ದೀವಾ?


Team Udayavani, Dec 12, 2018, 12:33 PM IST

highcourt2.jpg

ಬೆಂಗಳೂರು: “ಕೋರ್ಟ್‌ ಆದೇಶಗಳೆಂದರೆ ನಿಮಗೆ ಲೆಕ್ಕಕ್ಕೆ ಇಲ್ವಾ? ಇದೇನು ಪಿಕ್‌ನಿಕ್‌ ಜಾಗಾನಾ? ನಾವೇನು ಇಲ್ಲಿ ಜೋಕ್‌ ಮಾಡ್ತಿದ್ದೀವಾ?’ ಕೆಲಸ ಮಾಡಿ ಎಂದು  ಕೋರ್ಟ್‌ ಹೇಳುತ್ತಿರುವುದು ಅರ್ಥ ಆಗುತ್ತಿಲ್ಲ ಎಂದಾದರೆ ನಿಮಗೆ ಅರ್ಥವಾಗುವ ಬೇರೆ ಭಾಷೆಯೂ ನಮಗೆ ಗೊತ್ತಿದೆ’. ಹೀಗೆಂದು ಬಿಬಿಎಂಪಿ ಅಧಿಕಾರಿಗಳನ್ನು ಮಂಗಳವಾರ ಹೈಕೋರ್ಟ್‌ ಚಾಟಿ ನೀಡಿತು.

ನಗರದ ವ್ಯಾಪ್ತಿಯಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ, ಬಿಬಿಎಂಪಿಯ ವಿಳಂಬ ಧೋರಣೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಡಿಮಿಡಿಗೊಂಡಿತು.

ವಿಚಾರಣೆ ವೇಳೆ, ನ್ಯಾಯಪೀಠದ ಎಲ್ಲ ಪ್ರಶ್ನೆಗಳಿಗೆ “ರಸ್ತೆ ಗುಂಡಿ ಮುಚ್ಚುವ ಕೆಲಸ ನಡೆಯುತ್ತಿದೆ, ಮಾಡಲಾಗುವುದು, ಅಧಿಕಾರಿಗಳಿಗೆ ಸೂಚಿಸಲಾಗುವುದು, ಕೋರ್ಟ್‌ ನಿರ್ದೇಶನಗಳನ್ನು ಪಾಲಿಸಲಾಗುವುದು, ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟು ಕಾಲಾವಕಾಶ ಬೇಕು,’ ಎಂಬ ಬಿಬಿಎಂಪಿ ಪರ ವಕೀಲರ ಹೇಳಿಕೆಗೆ ಸಿಟ್ಟಾದ ನ್ಯಾಯಮೂರ್ತಿ,

“ಎಲ್ಲದಕ್ಕೂ ನಿಮ್ಮದು ಒಂದೇ ಸಿದ್ಧ ಉತ್ತರ, ಮಾತೆತ್ತಿದರೆ ಕಾಲಾವಕಾಶ ಕೇಳುತ್ತೀರಿ. ಈ ಅರ್ಜಿ ಸಲ್ಲಿಸಿ ಮೂರು ವರ್ಷ ಆಗಿದೆ. ಕೆಲಸ ಮಾಡಿ ಎಂದು ನಾವು (ಕೋರ್ಟ್‌) ಹೇಳಿ ಆರು ತಿಂಗಳಾಗಿದೆ. ಇದೇನಾ ನೀವು ಕೆಲಸ ಮಾಡುವ ರೀತಿ, ನೀವು ಮಾಡುತ್ತಿರುವುದು ಸರಿಯೇ ಎಂದು ನಿಮ್ಮನ್ನೇ ಪ್ರಶ್ನಿಸಿಕೊಳ್ಳಿ ಎಂದರು.

ಇದೇನು ಪಿಕ್‌ನಿಕ್‌ ಜಾಗವೇ: ವಿಚಾರಣೆ ವೇಳೆ ಬಿಬಿಎಂಪಿ ಇಂಜಿನಿಯರುಗಳು ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದಿದ್ದಕ್ಕೆ ಕೆಂಡಾಮಂಡಲವಾದ ಮುಖ್ಯ ನ್ಯಾಯಮೂರ್ತಿಗಳು, ” ಈ ಇಂಜಿನಿಯರುಗಳು ಇಲ್ಲೇನು ಮಾಡುತ್ತಿದ್ದಾರೆ? ಅವರನ್ನು ಇಲ್ಲಿಗೆ ಬರಲು ಹೇಳಿದವರು ಯಾರು? ಫೀಲ್ಡ್‌ನಲ್ಲಿದ್ದು ಕಾಮಗಾರಿ ನೋಡಿಕೊಳ್ಳಬೇಕಿದ್ದ ಇವರು ಕೋರ್ಟ್‌ಗೆ ಬಂದಿದ್ದಾರೆ ಎಂದರೆ ಇದೇನು (ಕೋರ್ಟ್‌) ಪಿಕ್‌ನಿಕ್‌ ಜಾಗವೇ, ಅವರೆಲ್ಲ ಇಲ್ಲಿ ಪಿಕ್‌ನಿಕ್‌ ಮಾಡಲು ಬಂದಿದ್ದಾರಾ? ನಾವೇನು ಇಲ್ಲಿ ಜೋಕ್‌ ಮಾಡ್ತಿದ್ದೀವಾ? ಎಂದು ಕಿಡಿಕಾರಿದರು. 

ಈ ವೇಳೆ ಮಹದೇವಪುರ ವಲಯದ ಮುಖ್ಯ ಇಂಜಿನಿಯರುಗಳಾದ ಪರಮೇಶ್ವರಯ್ಯ ಹಾಗೂ ಎಸ್‌. ಸೋಮಶೇಖರ್‌ ಆವರನ್ನು ನ್ಯಾಯಪೀಠದ ಎದುರು ಕರೆದ ಮುಖ್ಯ ನ್ಯಾಯಮೂರ್ತಿಗಳು, ಅವರ ಕೆಲಸದ ಬಗ್ಗೆ ವಿಚಾರಣೆ ನಡೆಸಿ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನೀವು ಪರಿಶೀಲಿಸಿದ ಕಡತಗಳನ್ನು ಮುಂದಿನ ವಿಚಾರಣೆ ವೇಳೆಗೆ ಹಾಜರುಪಡಿಸುವಂತೆ ಎಂದು ತಾಕೀತು ಮಾಡಿದರು.

ಡಿಸೆಂಬರ್‌ 17ರ ಗಡುವು: ವಿಚಾರಣೆ ವೇಳೆ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯ ಪ್ರಗತಿಯನ್ನು ಕೇಳಿದ ನ್ಯಾಯಪೀಠ, ಮಹದೇವಪುರ ವಲಯದಲ್ಲಿ ಅತಿ ಹೆಚ್ಚು ಸಮಸ್ಯೆ ಇದೆ ಎಂದು ಬಿಬಿಎಂಪಿ ಪರ ವಕೀಲರು ಹೇಳಿದ್ದಕ್ಕೆ ಡಿ.17ಕ್ಕೆ ಮಹದೇವಪುರ ವಲಯ ರಸ್ತೆ ಗುಂಡಿ ಶೂನ್ಯ ಆಗಿರಬೇಕು.

ಇದನ್ನು ನಿಮ್ಮ ಇಂಜಿನಿಯರುಗಳಿಗೆ ನಿಮ್ಮ ಭಾಷೆಯಲ್ಲಿ ತಿಳಿಸಿ, ಇಲ್ಲದಿದ್ದರೆ ಅವರಿಗೆ ಅರ್ಥವಾಗುವ ಬೇರೆ ಭಾಷೆ ನಮಗೆ ಗೊತ್ತಿದೆ. ನಿಗದಿತ ಗಡುವಿನೊಳಗೆ ಕೆಲಸ ಆಗದಿದ್ದರೆ ಅಧಿಕಾರಿಗಳು ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ. ಮಹದೇವಪುರ ವಲಯದ ಕೆಲಸದಲ್ಲಿ ಬೇರೆ ಕಡೆಗಳ ಕೆಲಸಗಳನ್ನು ಮರೆತು ಬಿಡಬೇಡಿ ಎಂದು ಎಚ್ಚರಿಸಿ ವಿಚಾರಣೆಯನ್ನು ಡಿ.17ಕ್ಕೆ ಮುಂದೂಡಿದರು.

ಬೆಂಗಳೂರು ಮುಚ್ಚಿಬಿಡಿ: ವಿಚಾರಣೆ ವೇಳೆ, ಬಿಬಿಎಂಪಿ ಆಯುಕ್ತರು ಕೋರ್ಟನ್ನು ಲಘುವಾಗಿ ಪರಿಗಣಿಸಿದ್ದಾರೆ. ಅವರು ಇಂದು ಯಾಕೆ ಬಂದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಕೇಳಿದರು. ವಿಧಾನಸಭೆ ಅಧಿವೇಶನ ನಡೆಯುತ್ತಿದೆ ಎಂದು ಬಿಬಿಎಂಪಿ ಪರ ವಕೀಲರು ಹೇಳಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿಗಳು, ಅಧಿವೇಶನ ನಡೆದಾಗ ಕೆಲಸಗಳು ಆಗುವುದಿಲ್ಲ ಎಂದಾದರೆ ಅಧಿವೇಶನ ಮುಗಿಯುವವರೆಗೆ ಬೆಂಗಳೂರು ಅನ್ನು ಮುಚ್ಚಿಬಿಡಿ ಎಂದು ಕಟುವಾಗಿ ಹೇಳಿದರು.

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Ranji Trophy: ಕರ್ನಾಟಕಕ್ಕೆ ನಾಕೌಟ್‌ ಕಷ್ಟ

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.