ಚಿಣ್ಣರಬಿಂಬ ಮುಂಬಯಿ ಮಧ್ಯ ವಲಯದ ಮಕ್ಕಳ ಪ್ರತಿಭಾ ಸ್ಪರ್ಧೆ ಉದ್ಘಾಟನೆ
Team Udayavani, Dec 12, 2018, 5:22 PM IST
ಮುಂಬಯಿ: ಚಿಣ್ಣರಬಿಂಬ ಸಂಸ್ಥೆ ಮುಂಬಯಿಯಲ್ಲಿ ನಮ್ಮ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕಾರ್ಯ ನಡೆಸುತ್ತಿರುವುದು ಅಭಿಮಾನದ ವಿಷಯ. ಅಂತಹ ಕೆಲಸವನ್ನು ಪ್ರಕಾಶ್ ಭಂಡಾರಿಯವರು ಈ ಸಂಸ್ಥೆಯ ಮುಖಾಂತರ ಮಾಡುತ್ತಿದ್ದಾರೆ ಎಂದು ನಗರ ಸೇವಕರಾದ ದಿಲೀಪ್ ಲಾಂಡೆ ಅವರು ನುಡಿದರು.
ಪೊವಾಯಿಯ ಎಸ್‌ಎಂ ಶೆಟ್ಟಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಚಿಣ್ಣರಬಿಂಬದ ಮಧ್ಯ ವಲಯದ ಮಕ್ಕಳ ಪ್ರತಿಭಾ ಸ್ಪರ್ಧೆಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಚಿಣ್ಣರಬಿಂಬ ಸಂಸ್ಥೆ ಮುಂಬಯಿಯಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆದು ಮಕ್ಕಳಿಗೆ ಸಹಕಾರಿಯಾಗಬೇಕು. ಮಕ್ಕಳನ್ನು ಸುಸಂಸ್ಕೃತರನ್ನಾಗಿ ಆದರ್ಶ ಪ್ರಜೆಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ತನ್ನ ಸಂಪೂರ್ಣ ಸಹಕಾರವಿದೆ ಎಂದರು.
ಮುಖ್ಯ ಅತಿಥಿ ಸಾಯಿಕೇರ್ ಲಾಜಿಸ್ಟಿಕ್‌ನ ಆಡಳಿತ ನಿರ್ದೇಶಕ ಸುರೇಂದ್ರ ಪೂಜಾರಿ ಅವರು ಮಾತನಾಡಿ, ಚಿಣ್ಣರಬಿಂಬ ಸಂಸ್ಥೆಯನ್ನು ನಾನು ತುಂಬಾ ಹತ್ತಿರದಿಂದ ನೋಡಿದವನು. ಮಕ್ಕಳು ಪ್ರತಿಭೆಯನ್ನು ಪ್ರದರ್ಶಿಸುತ್ತಿರುವುದು ಆನಂದವನ್ನು ನೀಡಿದೆ. ಭಜನೆಯ ಮೂಲಕ ಮಕ್ಕಳು ಸುಸಂಸ್ಕೃತರಾಗಿ, ಧಾರ್ಮಿಕವಾಗಿಯೂ ಬೆಳೆಯುವಲ್ಲಿ ಚಿಣ್ಣರಬಿಂಬ ಸಹಕರಿಸುತ್ತಿದೆ ಎಂದು ನುಡಿದರು.
ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದ ಉದ್ಯಮಿ ಯಶವಂತ ಶೆಟ್ಟಿ ಅವರು ಮಾತನಾಡಿ, ನಾವು ಯಾವತ್ತೂ ಸೋತು ಗೆದ್ದಾಗ ಮಾತ್ರ ಆ ಸ್ಪರ್ಧೆಯ ಮಹತ್ವ ತಿಳಿಯುವುದು. ಮತ್ತೆ ಮತ್ತೆ ಸ್ಪರ್ಧಿಸುವ ಛಲ ಮಕ್ಕಳಲ್ಲಿ ಮೂಡಬೇಕು. ಈ ಸಂಸ್ಥೆ ಏರ್ಪಡಿಸುವ ಸ್ಪರ್ಧೆಗಳು ಮಕ್ಕಳಿಗೆ ಗೆಲ್ಲುವ ದಾರಿಯಾಗಿದೆ ಎಂದು ಮಕ್ಕಳ ಪ್ರತಿಭೆಯನ್ನು ಕೊಂಡಾಡಿದರು.
ಅತಿಥಿ ಉದ್ಯಮಿ ದಿವಾಕರ ಶೆಟ್ಟಿ ಅವರು ಚಿಣ್ಣರಿಗೆ ಶುಭಾಶೀರ್ವಾದ ನೀಡಿದರು. ಉದ್ಯಮಿ ಲಕ್ಷಣ ಶೆಟ್ಟಿ ಅವರು ಮಾತನಾಡಿ, ಚಿಣ್ಣರಬಿಂಬ ಸಾವಿರಾರು ಮಕ್ಕಳ ಬಾಳಿಗೆ ಬೆಳಕನ್ನು ನೀಡುವ ಕಾರ್ಯ ಮಾಡುತ್ತಿದೆ ಎಂದರು.
ಉದ್ಯಮಿ ಸಂತೋಷ್ ಶೆಟ್ಟಿ ಅವರು ಮಾತನಾಡಿ, ಮಕ್ಕಳಿಗೂ ದೇವರಿಗೂ ಭೇದವಿಲ್ಲ. ಅವರ ಮನಸಿನಲ್ಲಿ ಯಾವ ಕಪಟವೂ ಇರುವುದಿಲ್ಲ. ಈ ಮಕ್ಕಳು ಕನ್ನಡ ಭಾಷೆಯನ್ನು ತುಂಬಾ ಚೆನ್ನಾಗಿ ಮಾತನಾಡುವುದನ್ನು ಕಂಡು ಬೆರಗಾಗಿದ್ದೇನೆ ಎಂದು ಅವರು ನುಡಿದು ಸಂಸ್ಥೆಯ ಯಶಸ್ಸಿಗೆ ಹಾರೈಸಿದರು.
ಬಂಟರ ಸಂಘ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾ ಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ವೇದಿಕೆಯಲ್ಲಿ ಚಿಣ್ಣರಬಿಂಬದ ಪ್ರಕಾಶ್ ಭಂಡಾರಿ, ಕೇಂದ್ರ ಸಮಿತಿಯ ರಮೇಶ್ ರೈ, ಪ್ರಶಾಂತಿ ಶೆಟ್ಟಿ, ಸವಿತಾ ಶೆಟ್ಟಿ, ಅನಿತಾ ಎಸ್. ಶೆಟ್ಟಿ, ವಿನಯಾ ಶೆಟ್ಟಿ, ಆಶಾ ಶೆಟ್ಟಿ, ವಿಮಲಾ ದೇವಾಡಿಗ, ಅನಿತಾ ಯು. ಶೆಟ್ಟಿ, ಶೋಭಾ ಜೆ. ಶೆಟ್ಟಿ, ಜ್ಯೋತಿ ಶೆಟ್ಟಿ, ಶಾಂತಿ ಶೆಟ್ಟಿ, ಕವಿತಾ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಹೇಮಲತಾ ಪೂಜಾರಿ, ರಾಜವರ್ಮ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಚಿಣ್ಣರ ಬಿಂಬದ ಕನ್ನಡ ವಿಭಾಗದ ಸಂಚಾಲಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಆನಂತರ ಮಕ್ಕಳಿಗೆ ಭಜನೆ, ಭಾವಗೀತೆ, ಜಾನಪದ ಗೀತೆ, ಭಾಷಣ, ಏಕಪಾತ್ರಾಭಿನಯ, ಸಮೂಹ ಗಾಯನ ಇನ್ನಿತರ ಸ್ಪರ್ಧೆಗಳು ನಡೆದವು.
ಚಿಣ್ಣರ ಭಜನೆ ಸ್ಪರ್ಧೆಯ ತೀರ್ಪುಗಾರರಾಗಿ ಲತಾ ಸಂತೋಷ್ ಶೆಟ್ಟಿ, ಶಾಂತಾ ಎಂ. ಆಚಾರ್ಯ, ಶ್ರದ್ಧಾ ಬಂಗೇರ ಅವರು ಸಹಕರಿಸಿದರು. ಚಿಣ್ಣರಾದ ದರ್ಶನ್ ಶೆಟ್ಟಿ, ಶ್ರಾವ್ಯಾ ಶೆಟ್ಟಿ, ಶ್ರಾವ್ಯಾ ಹೆಗ್ಡೆ ಅವರು ಕಾರ್ಯಕ್ರಮ ನಿರೂಪಿಸಿದರು.
ಚಿಣ್ಣರ ಬಿಂಬದ ಮಕ್ಕಳ ಉತ್ಸವವನ್ನು ಕಂಡು ಬಹಳ ಖುಷಿಯಾಗಿದೆ. ಚಿಣ್ಣರ ಉತ್ಸಾಹಕ್ಕೆ ಕಾರಣಕರ್ತರಾದ ಪ್ರಕಾಶ್ ಭಂಡಾರಿ ಮತ್ತು ಅವರ ತಂಡದ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಯಾವಾಗ ಮಕ್ಕಳಿಗೆ ಸ್ಫೂರ್ತಿ ಸಿಗುತ್ತದೋ ಆಗ ಮಕ್ಕಳು ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ. ನಾವು ಶಾಲೆ ಕಾಲೇಜಿಗೆ ಹೋಗುತ್ತಿದ್ದಾಗ ನನಗೆ ಅಪರೂಪದಲ್ಲಿ ಯಾರಾದರೂ ಪ್ರೋತ್ಸಾಹ ನೀಡಿದಾಗ ಅದರಿಂದ ಹುರುಪುಗೊಂಡು ನಾನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮುಂದೆ ಬಂದೆ. ಅದೇ ರೀತಿ ಇಲ್ಲಿನ ಅದೆಷ್ಟೋ ಮಕ್ಕಳಿಗೆ ಶಾಲೆಯಲ್ಲಿ ಅವಕಾಶ ಸಿಗದೇ ಅವರ ಪ್ರತಿಭೆ ಮುರುಟಿ ಹೋಗುವ ಸಮಯದಲ್ಲಿ ಚಿಣ್ಣರಬಿಂಬ ಅವಕಾಶವನ್ನು ಕಲ್ಪಿಸಿ ಅವರ ಪ್ರತಿಭೆ ಅರಳುವಂತೆ ಮಾಡಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಆದ್ದರಿಂದ ಮಕ್ಕಳ ಬೆಳವಣಿಗೆಗೆ ಸ್ಫೂ³ರ್ತಿದಾಯಕ ಸಂಸ್ಥೆ ಚಿಣ್ಣರಬಿಂಬ ಎಂದು ಅಭಿಪ್ರಾಯಪಟ್ಟರು. ¤ ಚಿಣ್ಣರ ಬಿಂಬದಲ್ಲಿ ಕೇವಲ ಮಕ್ಕಳು ಮಾತ್ರವಲ್ಲ ಪಾಲಕರು ಕೂಡಾ ಬೆಳೆಯುತ್ತಿದ್ದಾರೆ. ಹೆಚ್ಚಿನವರು ತಮ್ಮಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸಮಾಜಮುಖೀ ಕಾರ್ಯದಲ್ಲಿ ನಿರತರಾಗಿರುವ ಶ್ರೇಯಸ್ಸು ಈ ಸಂಸ್ಥೆಗೆ ಸಲ್ಲಬೇಕು
– ರತ್ನಾಕರ ಶೆಟ್ಟಿ ಮುಂಡ್ಕೂರು,
ಕಾರ್ಯಾಧ್ಯಕ್ಷರು, ಮಾತೃಭೂಮಿ ಕೋ ಆಪರೇಟಿವ್ ಸೊಸೈಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಕರ್ಣದ ಪ್ರಪ್ರಥಮ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಗ್ರಹಣ!
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.