ಇಂಗ್ಲೆಂಡ್ ಸೆಮಿಫೈನಲ್ಗೆ ಲಗ್ಗೆ
Team Udayavani, Dec 13, 2018, 6:00 AM IST
ಭುವನೇಶ್ವರ: ಒಲಿಂಪಿಕ್ ಚಾಂಪಿಯನ್ ಆರ್ಜೆಂಟೀನಾಕ್ಕೆ 3-2 ಗೋಲುಗಳ ಆಘಾತವಿಕ್ಕಿದ ಇಂಗ್ಲೆಂಡ್ ತಂಡ 14ನೇ ವಿಶ್ವಕಪ್ ಹಾಕಿ ಪಂದ್ಯಾವಳಿಯ ಸೆಮಿ ಫೈನಲ್ಗೆ ಲಗ್ಗೆ ಇರಿಸಿದ ಮೊದಲ ತಂಡವಾಗಿ ಹೊರಹೊಮ್ಮಿದೆ. 17ನೇ ನಿಮಿಷದಲ್ಲಿ ಗೊಂಜಾಲೊ ಪೀಲಟ್ ಗೋಲು ಸಿಡಿಸಿ ಆರ್ಜೆಂ ಟೀನಾಕ್ಕೆ ಮುನ್ನಡೆ ಒದಗಿಸಿದ ಬಳಿಕ ತಿರುಗಿ ಬಿದ್ದ ಇಂಗ್ಲೆಂಡ್ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.
ಬ್ಯಾರಿ ಮಿಡ್ಲ್ಟನ್ (27ನೇ ನಿಮಿಷ) ಮತ್ತು ವಿಲ್ ಕಾಲ್ನನ್ (45ನೇ ನಿಮಿಷ) 2 ಗೋಲು ಬಾರಿಸಿ ಜೋಶ್ ತುಂಬಿದರು. 48ನೇ ನಿಮಿಷದಲ್ಲಿ ಪೀಲಟ್ ಮತ್ತೂಂದು ಗೋಲಿನೊಂದಿಗೆ ಪಂದ್ಯವನ್ನು ಸಮ ಬಲಕ್ಕೆ ತಂದರೂ ಮರು ನಿಮಿಷದಲ್ಲೇ ಹ್ಯಾರಿ ಮಾರ್ಟಿನ್ ಇಂಗ್ಲೆಂಡಿನ 3ನೇ ಗೋಲಿಗೆ ಸಾಕ್ಷಿಯಾದರು. ಈ ಮುನ್ನಡೆಯನ್ನು ಆಂಗ್ಲ ಪಡೆ ಕೊನೆಯ ತನಕವೂ ಉಳಿಸಿಕೊಂಡಿತು.2014ರ ವಿಶ್ವಕಪ್ನಲ್ಲಿ ಕಂಚು ಜಯಿಸಿದ್ದ ಆರ್ಜೆಂಟೀನಾ ಅನೇಕ ಅವಕಾಶಗಳನ್ನು ಕೈಚೆಲ್ಲಿ ಸೋಲನ್ನು ಹ್ವಾನಿಸಿಕೊಳ್ಳಬೇಕಾಯಿತು. ಜರ್ಮನಿ-ಬೆಲ್ಜಿಯಂ ನಡುವಿನ ಕ್ವಾರ್ಟರ್ ಫೈನಲ್ ವಿಜೇತ ತಂಡವನ್ನು ಇಂಗ್ಲೆಂಡ್ ಶನಿವಾರದ ಸೆಮಿಫೈನಲ್ನಲ್ಲಿ ಎದುರಿಸಲಿದೆ.
ಆಸ್ಟ್ರೇಲಿಯ ಸೆಮಿ ಪ್ರವೇಶ
ದಿನದ ದ್ವಿತೀಯ ಕ್ವಾರ್ಟರ್ ಫೈನಲ್ನಲ್ಲಿ ಕಳೆದೆರಡು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ಅಧಿಕಾರಯುತ ಪ್ರದರ್ಶನ ನೀಡಿ ಫ್ರಾನ್ಸ್ಗೆ 3-0 ಗೋಲುಗಳ ಸೋಲುಣಿಸಿತು. ಭಾರತ-ನೆದರ್ಲೆಂಡ್ ನಡುವಿನ ವಿಜೇತ ತಂಡವನ್ನು ಆಸೀಸ್ ಸೆಮಿಫೈನಲ್ನಲ್ಲಿ ಎದುರಿಸಲಿದೆ. ನೆಚ್ಚಿನ ತಂಡವಾಗಿ ಕಣಕ್ಕಿಳಿದಿದ್ದ ಆಸ್ಟ್ರೇಲಿಯ ಪರ ಜೆರೆಮಿ ಹೇವಾರ್ಡ್ 4ನೇ ನಿಮಿಷದಲ್ಲಿ ಗೋಲು ಖಾತೆ ತೆರೆದರು. ಬಳಿಕ 19ನೇ ನಿಮಿಷದಲ್ಲಿ ಬ್ಲೇಕ್ ಗೋವರ್, 37ನೇ ನಿಮಿಷದಲ್ಲಿ ಅರಾನ್ ಝಲೇವ್ಸ್ಕಿ ಮತ್ತೆರಡು ಗೋಲು ಬಾರಿಸಿದರು. ಈ ಮೂರೂ ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕವೇ ಬಂದವು. ಕಾಂಗರೂ ಅಬ್ಬರದ ಮುಂದೆ ಫ್ರೆಂಚರ ಯಾವ ತಂತ್ರವೂ ಫಲಿಸಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chess player; ಕುಟುಂಬ ಸಮೇತ ಮೋದಿ ಭೇಟಿಯಾದ ಕೊನೆರು ಹಂಪಿ
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.