ಕಾಮಗಾರಿ ಭಾಗಶಃ ಪೂರ್ಣ: 20 ದಿನಗಳಲ್ಲಿ ಸಾರ್ವಜನಿಕರಿಗೆ ಮುಕ್ತ 

Team Udayavani, Dec 13, 2018, 11:02 AM IST

13-december-4.gif

ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ ಲಾಲ್‌ಬಾಗ್‌ನಲ್ಲಿರುವ ಮಂಗಳ ಈಜುಕೊಳ ಮೇಲ್ದರ್ಜೆಗೇರಲು ಮೂರು ತಿಂಗಳ ಹಿಂದೆ ಪ್ರಾರಂಭವಾದ ಕಾಮಗಾರಿ ಇದೀಗ ಅಂತಿಮ ಹಂತದಲ್ಲಿದ್ದು, ಸುಮಾರು 20 ದಿನಗಳಲ್ಲಿ ಈಜುಕೊಳ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಮೂಲಕ ಮಂಗಳ ಈಜುಕೊಳಕ್ಕೆ ಹೈಟೆಕ್‌ ಸ್ಪರ್ಶ ಸಿಗಲಿದೆ.

ಮಂಗಳ ಈಜುಕೊಳದಲ್ಲಿ ಈ ಹಿಂದೆ ಇದ್ದ ನೀರು ಶುದ್ಧೀಕರಣ ಘಟಕ ಸುಮಾರು 28 ವರ್ಷ ಹಳೆಯದ್ದು. ಅಲ್ಲದೆ ನೂತನ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಇದೇ ಕಾರಣಕ್ಕೆಂದು ಇದೀಗ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನವೀಕರಣ ಕಾಮಗಾರಿ ಪ್ರಾರಂಭವಾಗಿದ್ದು, ಈಜು ಕೊಳದ ನೀರನ್ನು ಓಝೋನ್‌ ಘಟಕದಲ್ಲಿ ಸಂಸ್ಕರಿಸುವ ನೂತನ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಈಜುಕೊಳ ಲೇನ್‌ ಮಾರ್ಕ್‌ ಕೆಲಸ, ಡೆಕ್‌ ಏರಿಯಾ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಇನ್ನೇನು 15 ದಿನಗಳಲ್ಲಿ ಈ ಎಲ್ಲಾ ಕಾಮಗಾರಿ ಪೂರ್ಣಗೊಂಡು ಸುಮಾರು 20 ದಿನಗಳ ಒಳಗಾಗಿ ಸಾರ್ವಜನಿಕರಿಗೆ ಲಭ್ಯವಾಗಲು ಪಾಲಿಕೆ ಪ್ರಯತ್ನಿಸುತ್ತಿದೆ.

ಆಧುನಿಕ ತಂತ್ರಜ್ಞಾರ ಅಳವಡಿಕೆ
ಇದೀಗ ಕಾಮಗಾರಿ ಕೆಲಸ ಕೊನೆಯ ಹಂತದಲ್ಲಿದೆ. ಈಜುಕೊಳದ ಸುತ್ತಲೂ ಮಣ್ಣು ಅಗೆದು ನೂತನ ಪೈಲ್‌ ಲೈನ್‌ ಅಳವಡಿಸಲಾಗಿದೆ. ಹಿಂದಿದ್ದ ಶುದ್ಧೀಕರಣ ಘಟಕದಲ್ಲಿ ಮಾನವ ಶ್ರಮದಿಂದಲೇ ಯಂತ್ರಗಳ ಕೆಲಸ ನಡೆಯುತ್ತಿತ್ತು. ಆದರೆ ಈ ನೂತನ ಘಟಕದಲ್ಲಿ ಸ್ವಯಂಚಾಲಿತ ಕಾರ್ಯದಿಂದ ಕೆಲಸಗಳು ನಡೆಯಲಿದೆ.

4 ಡ್ರಮ್‌ ಅಳವಡಿಕೆ
ಈ ಹಿಂದೆ 10 ಎಚ್‌.ಪಿ.ಯ 2 ಪಂಪ್‌ ಗಳಿತ್ತು. ಈಗ ಒಟ್ಟು 4 ಪಂಪ್‌ಗ್ಳನ್ನು ಅಳವಡಿಸಲಾಗಿದೆ. ಹಳೆ ತಂತ್ರಜ್ಞಾನದಲ್ಲಿ ನೀರು ಶುದ್ಧೀಕರಣಕ್ಕೆ 3 ಡ್ರಮ್‌ ಇತ್ತು. ಇದೀಗ 4 ಡ್ರಮ್‌ ಅಳವಡಿಸಲಾಗಿದೆ. ಶುದ್ಧೀಕರಣಗೊಂಡ ನೀರು ಪುನಃ ಬರಲೆಂದು ಈಜುಕೊಳದ ಒಳಗೆ ಎರಡೂ ಬದಿಗಳಲ್ಲಿ 25 ರಂಧ್ರಗಳನ್ನು ಮಾಡಿ ಪೈಪ್‌ ಅಳವಡಿಸಲಾಗಿದೆ.

ಪ್ರಬಲ ರೋಗ ನಿರೋಧಕ ಶಕ್ತಿ
ಈ ಹಿಂದೆ ಈಜುಕೊಳಕ್ಕಿದ್ದ ಪೈಪ್‌ ಗಾತ್ರ ಚಿಕ್ಕದಾಗಿತ್ತು. ಅಲ್ಲದೆ, ಪೈಪ್‌ ಒಳಗೆ ಹಾವನೆ ಹಿಡಿದು ನೀರಿನ ರಭಸ ಕಡಿಮೆಯಾಗಿತ್ತು. ನೂತನ ತಂತ್ರಜ್ಞಾನದಿಂದ ಶುದ್ಧೀಕರಣವಾದ ನೀರು ಪ್ರಬಲ ರೋಗ ನಿರೋಧಕ ಶಕ್ತಿ ಹೊಂದಿದೆ. ಇದರಿಂದಾಗಿ ಯಾವುದೇ ಅಂಟುರೋಗ ಹರಡುವುದಿಲ್ಲ. ನೀರಿನಲ್ಲಿರುವ ಕಲ್ಮಶ, ವೈರಸ್‌ ನಾಶವಾಗಲಿದ್ದು, ಕಣ್ಣು ಮತ್ತು ಚರ್ಮಕ್ಕೆ ಈ ನೀರು ಅತ್ಯಂತ ಸುರಕ್ಷಿತವಾಗಿದೆ. 

ಕೊನೆಯ ಹಂತದ ಕಾಮಗಾರಿ
ಮಂಗಳಾ ಈಜುಕೊಳ ಕಾಮಗಾರಿ ಕೊನೆಯ ಹಂತದಲ್ಲಿದೆ. ಈಜುಕೊಳದ ನೀರನ್ನು ಓಝೋನ್‌ ಘಟಕದಲ್ಲಿ ಸಂಸ್ಕರಿಸುವ ನೂತನ ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಇನ್ನೇನು ಇಪ್ಪತ್ತು ದಿನಗೊಳಳಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ.
– ರಾಜೇಶ್‌,
 ಪಾಲಿಕೆ ಎಂಜಿನಿಯರ್‌

ಟಾಪ್ ನ್ಯೂಸ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

4-sakleshpura

Sakleshpura: ಸತ್ತ ಕೋಳಿ ಬಾಯಲ್ಲಿ ಬೆಂಕಿ! ಗ್ರಾಮಸ್ಥರಿಗೆ ಅಚ್ಚರಿ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

5-hunsur

Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.