ಕಡಲೆ-ಜೋಳಕ್ಕೆ ರೋಗಬಾಧೆ
Team Udayavani, Dec 13, 2018, 3:56 PM IST
ಗಜೇಂದ್ರಗಡ: ಹಿಂಗಾರು ಹಂಗಾಮಿನ ಕಡಲೆ ಮತ್ತು ಜೋಳ ಬೆಳೆಗಳು ಫಸಲು ಹಂತಕ್ಕೆ ಬಂದಿರುವ ಸಮಯದಲ್ಲಿ ಕಾಯಿಕ ಕೊರಕ ರೋಗ ಕಾಣಿಸಿಕೊಂಡಿದ್ದು, ಕೈಗೆ ಬಂದು ತುತ್ತು ಬಾಯಿಗೆ ಬಾರದಂತ ಪರಿಸ್ಥಿತಿ ಗಜೇಂದ್ರಗಡ ತಾಲೂಕಿನ ರೈತರದ್ದಾಗಿದೆ. ಮಳೆ ಹಾಗೂ ತೇವಾಂಶ ಕೊರತೆಯಿಂದ ಬೆಳೆಗಳಿಗೆ ಕಾಯಿಕ ರೋಗ ಕಾಣಿಸಿಕೊಂಡಿದೆ. ಬೆಳೆಗಳನ್ನು ರಕ್ಷಿಸಿಕೊಳ್ಳಲು ಅನಿವಾರ್ಯವಾಗಿ ಕ್ರಿಮಿನಾಶಕ ಸಿಂಪಡಣೆಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ.
ಮುಂಗಾರು ಹಂಗಾಮು ಬೆಳೆ ಕೈಕೊಟ್ಟಿತ್ತು. ಹಿಂಗಾರು ಹಂಗಾಮಿನ ಮಳೆ ಆಶ್ರಿತ ಎರಿ(ಕಪ್ಪು) ಭೂಮಿಯಲ್ಲಿ ರೈತರಯ ಅಣ್ಣಿಗೇರಿ ತಳಿಯ ಕಡಲೆ ಮತ್ತು ಜೋಳ ಬೀಜಗಳನ್ನು ಬಿತ್ತನೆ ಮಾಡಿದ್ದರು. ಅಲ್ಪಸಲ್ಪ ಹಿಂಗಾರು ಮಳೆಯಾಗಿತ್ತು. ಇದಲ್ಲದೆ ಇರುವ ಚಳಿಗಾಲದ ಹಿಬ್ಬನಿಯ ತೇವಾಂಶದಿಂದ ಬೆಳೆಗಳು ಹಸಿರಾಗಿದ್ದು, ಉತ್ತಮ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡ ಕಾಯಿಕೊರಕ ರೋಗದಿಂದ ಇಳುವರಿ ಕ್ಷೀಣಬಹುದಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಬೆಳೆಯಲ್ಪಡುವ ಜೋಳ ಈ ಬಾರಿ 1,69,00 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಡಲೆ 63,615 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬೆಳೆಗಳಿಗೆ ಕಾಯಿಕೊರಕ ರೋಗ ಕಾಣಿಸಿಕೊಂಡಿದ್ದು, ಕೃಷಿ ತಜ್ಞರ ಸಲಹೆ ಮೇರೆಗೆ ಔಷಧಗಳನ್ನು ಸಿಂಪಡಿಸಿ ರೋಗಬಾಧೆ ಹತೋಟಿಗೆ ತರಲು ಯತ್ನಿಸಲಾಗುತ್ತಿದೆ ಎಂದು ರೈತರು ತಿಳಿಸುತ್ತಾರೆ.
ದೇಶ-ವಿದೇಶದಲ್ಲೂ ಬೇಡಿಕೆ
ಸೂಡಿ, ಕಳಕಾಪುರ, ದಿಂಡೂರ, ಕೊಡಗಾನೂರ, ರಾಜೂರ, ನೆಲ್ಲೂರ, ನಿಡಗುಂದಿ, ಹಾಳಕೇರಿ, ಜಕ್ಕಲಿ, ನೇರೆಗಲ್, ರೋಣ, ಇಟಗಿ, ಪ್ಯಾಟಿ, ಬೇವಿನಕಟ್ಟಿ, ಇನ್ನಿತರ ಗ್ರಾಮಗಳಲ್ಲಿ ಬೆಳೆಯುವ ಅಣ್ಣಿಗೇರಿ ತಳಿಯ ಕಡಲೆ ಕಾಳುಗಳಿಗೆ ದೇಶ, ವಿದೇಶಗಳಲ್ಲೂ ಭಾರಿ ಬೇಡಿಕೆ ಇದೆ. ಗದುಗಿನ ಕೃಷಿ ಮಾರುಕಟ್ಟೆಯಿಂದ ಕಡಲೆ ಹೊರ ದೇಶಗಳಿಗೂ ರವಾನೆಯಾಗುತ್ತದೆ.
ಹಿಂಗಾರಿ ಜೋಳ, ಕಡಲೆ ಬೆಳಿ ಬೆಳದ ನಿಂತಾವ್ರಿ. ಆದ್ರ ಬೆಳೆಗೆ ಕೀಟಬಾಧೆ ಕಾಟ ಶುರುವಾಗೈತ್ರಿ. ಭೂ ತಾಯಿ ತನ್ನ ಮಕ್ಕಳನ್ನ ಎಂದೆಂದಿಗೂ ಕೈಬಿಡುವದಿಲ್ಲಾ. ನಮ್ಮ ಬದುಕು ಹಸನಾಗಿಸುತ್ತಾಳೆ ಅನ್ನುವ ಖಾತ್ರಿ ಐತ್ರಿ.
ಕಳಕಪ್ಪ ಕುಂಬಾರ, ಜೋಳ, ಕಡಲೆ ಬೆಳೆದ ರೈತ
ಪ್ರಸಕ್ತ ಬಾರಿ ತಾಲೂಕಿನಲ್ಲಿ ಜೋಳ ಮತ್ತು ಕಡಲೆ ಸೇರಿ ಒಟ್ಟು 80,515 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬೆಳೆಗಳಿಗೆ ಕೀಟಭಾದೆ ತಗುಲುವುದು ಸಾಮಾನ್ಯ. ರೈತರು ಇಮಾಮೆಟಿನ್ ಬೆಂಜಿವೆಟ್ ಮತ್ತು ಕ್ಲೋರೊಪರಿಪಾಸ್ ರಾಸಾಯನಿಕ ಸಿಂಪಡಿಸಲು ಮುಂದಾಗಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಕ್ರಿಮಿನಾಶಕ ದಾಸ್ತಾನು ಸಂಗ್ರಹಿಸಿ ರೈತರಿಗೆ ವಿತರಿಸಲಾಗುತ್ತಿದೆ.
ಸಿದ್ದೇಶ ಕೋಡಳ್ಳಿ, ಸಹಾಯಕ ಕೃಷಿ ನಿರ್ದೆಶಕ.
ಡಿ.ಜಿ. ಮೋಮಿನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.