ಅಪರೂಪದ ಪ್ರಸಂಗ ಕಾಂಡವ ದಹನ
Team Udayavani, Dec 14, 2018, 6:00 AM IST
ಮಾಯಾಸುರ ರಾಕ್ಷಸ ಪ್ರವೇಶ. ಇಲ್ಲಿ ವೇಷಭೂಷಣದಲ್ಲಿ ತಪ್ಪು ಆಯ್ಕೆ ಅಲ್ಲದೇ ಆ ಪಾತ್ರಕ್ಕೆ ತಕ್ಕಂತೆ ಪಾತ್ರದಾರಿಯ ಆಯ್ಕೆಯಿರದೆ ಪ್ರವೇಶದ ಸನ್ನಿವೇಶ ಸೊರಗಿ ಹೋಯಿತು. ಯಾವುದೋ ಬೇಡರ ವೇಷದಂತಿತ್ತು. ಹೀಗಾಗಿ ಪ್ರಸಂಗಕ್ಕೆ ಇದ್ದ ಮತ್ತೂಂದು ತಿರುವು ಕೂಡಾ ಸೋತಿತು
ಕರ್ಕಿ ಮೇಳದ ಕಲಾವಿದರಾಗಿದ್ದ ದಿ. ಪರಮಯ್ಯ ಹಾಸ್ಯಗಾರ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಕೆರೆಮನೆ ಮೇಳದವರ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ಕಿ ಮತ್ತು ಕೆರೆಮನೆ ಮೇಳ ಎರಡೂ ವಿಭಿನ್ನ ಶೈಲಿಯ ಯಕ್ಷಗಾನ ತಂಡಗಳು. ಇಂದು ಕರ್ಕಿ ಮೇಳ ಇಲ್ಲದೇ ಹೋದರೂ ಆ ವಿಶಿಷ್ಟ ಪರಂಪರೆಯ ಉಳಿಸುವ ಹವ್ಯಾಸಿ ಕಲಾವಿದರು ಕೆಲವರು ಇದ್ದಾರೆ. ಅಂದು ಈ ಮೇಳದ ವಿಭಿನ್ನ ಶೈಲಿ ಅಷ್ಟೇ ಅಲ್ಲ ಪ್ರಸಂಗದ ಆಯ್ಕೆ ಕೂಡಾ ವಿಶೇಷತೆಯಿಂದ ಕೂಡಿತ್ತು. ಅಂದಿನ “ಕಾಂಡವ ದಹನ’ ಪ್ರಸಂಗ ಕರ್ಕಿ ಮೇಳಕ್ಕೆ ತುಂಬಾ ಜನಪ್ರಿಯತೆ ತಂದು ಕೊಟ್ಟಿತ್ತು. ಆ ಸವಿ ನೆನಪುಗಳನ್ನು ಮರುಕಳಿಸುವ ಉದ್ದೇಶದಿಂದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅದೇ ಪ್ರಸಂಗವನ್ನು ಕೆರೆಮನೆ ಮೇಳದವರು ರಂಗಕ್ಕೆ ತಂದರು. ಪ್ರಸಂಗ ಪದ್ಯಗಳು ತುಂಬಾ ಚೆನ್ನಾಗಿವೆ ಎಂದು ಹೇಳದೇ ಹೋದರೂ ಚೆನ್ನಾಗಿ ಇಲ್ಲ ಅನ್ನುವ ಹಾಗಂತೂ ಇಲ್ಲ. ಎಲ್ಲಿಯೂ ಬೋರ್ ಅನಿಸುವುದಿಲ್ಲ. ಇಂದ್ರನ ಪ್ರವೇಶದಿಂದಲೇ ಆರಂಭಗೊಂಡ ಪ್ರಸಂಗಕ್ಕೆ ಎಲ್ಲ ಸನ್ನಿವೇಶದಲ್ಲಿಯೂ ಮಾತಿಗೆ, ಅಭಿನಯಕ್ಕೆ ಕುಣಿತಕ್ಕೆ ತುಂಬಾ ಅವಕಾಶವಿದೆ . ಪ್ರೇಕ್ಷಕರು ಅಂದು ಕೆರೆಮನೆ ಶಿವಾನಂದ ನೇತೃತ್ವದ ಪ್ರದರ್ಶನ ಮೂರಕ್ಕೆ ಇಳಿಯದೇ ಆರಕ್ಕೆ ಏರದೇ ಸಾಧಾರಣ ಅನ್ನುವ ಧಾರಣೆ ಕಟ್ಟಿದರು. ಮೊದಲ ಪ್ರವೇಶದ ಇಂದ್ರನಾಗಿ ಶ್ರೀಪಾದ ಹೆಗಡೆ ಅವರ ಪ್ರವೇಶ ಎಂದಿನ ಮಿಂಚಿನ ಪ್ರವೇಶ ಅಂದುಕೊಂಡರೂ ನಂತರ ಅವರು ಇಂದ್ರನ ಪಾತ್ರ ಎನ್ನುವದನ್ನು ಮರೆಯುತ್ತಾರೆ. ಇಂದ್ರನ ಪಾತ್ರವೋ ಇಲ್ಲ ಬೇರೆ ಯಾವುದೋ ಪಾತ್ರದ ಛಾಯೆ ಮೂಡಿಸುತ್ತಾರೆ. ಹಾಗಂತ ಪಾತ್ರಧಾರಿಯಾಗಿ ಶ್ರೀಪಾದರು ಪ್ರೇಕ್ಷಕರ ದೃಷ್ಟಿಯಲ್ಲಿ ಸೋಲುವುದಿಲ್ಲ.ನಂತರದಲ್ಲಿ ಅಗ್ನಿ ಪ್ರವೇಶ. ಸೂಕ್ತ ವೇಷಭೂಷಣ ನಿರರ್ಗಳ ಮಾತು ಎಲ್ಲವೂ ಸಾಮಾನ್ಯ ಎನ್ನಬಹುದು . ಆ ನಂತರ ಅರ್ಜುನ, ಕೃಷ್ಣರಾಗಿ ಶಿವಾನಂದ ಹೆಗಡೆ ಹಾಗೂ ಸದಾಶಿವ ಯಲ್ಲಾಪುರ ಇವರುಗಳ ಪ್ರವೇಶ ಹೊಸ ಪದ್ಧತಿಯಲ್ಲಿ ಆಗುತ್ತದೆ . ಇಬ್ಬರೂ ಸೊಗಸಾದ ನೃತ್ಯ ಸಾಮರ್ಥ್ಯ ಹೊಂದಿರುವವರು. ಅತಿರೇಕ, ವಿಕೃತ ಯಾವುದು ಕಾಣಲಾರೆವು. ಈ ಇಬ್ಬರಲ್ಲಿ ಸದಾಶಿವ ಕೃಷ್ಣ ಪಾತ್ರದಲ್ಲಿ ನೃತ್ಯ, ಮಾತಿನಲ್ಲಿ ಚುರುಕಾಗಿ , ಲವಲವಿಕೆಯಿಂದ ಆಕರ್ಷಿಸುತ್ತಾರೆ. ಅರ್ಜುನ ಪಾತ್ರ ಆ ದಿನದ ಮಟ್ಟಿಗೆ ಸ್ವಲ್ಪ ಸಪ್ಪೆ ಎಂದರೆ ತಪ್ಪಾಗಲಾರದು. ಬಹಳಷ್ಟು ಸಂದರ್ಭದಲ್ಲಿ ತಲೆ ಕೆಳಗೆ ಹಾಕಿ ನೆಲ ನೋಡಿದ್ದೇ ಹೆಚ್ಚು. ಅರ್ಜುನನ ಪಾತ್ರಕ್ಕೆ ಔಚಿತ್ಯ ಅನಿಸುವುದಿಲ್ಲ. ಅವರ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ. ಅನೇಕ ಬಾರಿ ಮಾತು ತೇಲಿ ಹೋಗಿ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಅಗ್ನಿ , ಕೃಷ್ಣ, ಅರ್ಜುನ ಈ ಮೂರು ಪಾತ್ರ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಸಿ ಬಹಳಷ್ಟು ಪ್ರೇಕ್ಷಕರಿಗೆ ರಂಜನೆ ಒದಗಿಸಬಹುದಾಗಿತ್ತು. ಅದಾಗಲೇ ಇಲ್ಲ. ಇನ್ನು ಮಾಯಾಸುರ ರಾಕ್ಷಸ ಪ್ರವೇಶ. ಇಲ್ಲಿ ವೇಷಭೂಷಣದಲ್ಲಿ ತಪ್ಪು ಆಯ್ಕೆ ಅಲ್ಲದೇ ಆ ಪಾತ್ರಕ್ಕೆ ತಕ್ಕಂತೆ ಪಾತ್ರದಾರಿಯ ಆಯ್ಕೆಯಿರದೆ ಪ್ರವೇಶದ ಸನ್ನಿವೇಶ ಸೊರಗಿ ಹೋಯಿತು . ಯಾವುದೋ ಬೇಡರ ವೇಷದಂತಿತ್ತು. ಹೀಗಾಗಿ ಪ್ರಸಂಗಕ್ಕೆ ಇದ್ದ ಮತ್ತೂಂದು ತಿರುವು ಕೂಡಾ ಸೋತಿತು . ಅನೇಕ ಕಡೆ ಲೈಟಿಂಗ್ ಬಳಕೆ ಮಾಡುವ ಅವಕಾಶ ಇತ್ತು . ಅಗ್ನಿ ಕಾಂಡವ ವನ ದಹಿಸುವ ಸಂದರ್ಭ ಆಗಿರಬಹುದು, ರಾಕ್ಷಸ ಮಾಯಾಸುರನ ಪ್ರವೇಶ ಸಂದರ್ಭದಲ್ಲಿ ಕೂಡಾ ಲೈಟಿಂಗ್ ವ್ಯವಸ್ಥೆ ಬಹಳ “ಉಟಾವ್ ‘ ನೀಡುತ್ತಿತ್ತು. ಕರ್ಕಿ ಮೇಳದ ಈ ಪ್ರಸಂಗದ ಸವಿ ಉಂಡವರಿಗೆ ಅಷ್ಟಾಗಿ ಪ್ರದರ್ಶನ ಸಮಾಧಾನ ತರಲಿಲ್ಲ.
ಗೌರೀಶ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ
Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.