ರಕುಲ್ ಪ್ರೀತಿ
Team Udayavani, Dec 14, 2018, 6:00 AM IST
ದಕ್ಷಿಣದಿಂದ ಇನ್ನೋರ್ವ ಚೆಲುವೆ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾಳೆ. ಅವಳೇ ರಕುಲ್ ಪ್ರೀತ್ ಸಿಂಗ್. ಕನ್ನಡ, ತೆಲುಗು ಮತ್ತು ತಮಿಳ್ ಚಿತ್ರರಂಗದಲ್ಲಿ ಸಖತ್ ಫೇಮಸ್ ಆಗಿರುವ ರಕುಲ್ ಬಾಲಿವುಡ್ ಎಂಟ್ರಿ ಕೂಡಾ ಬಹಳ ಗ್ರ್ಯಾಂಡ್ ಆಗಿಯೇ ಆಗಿದೆ ಎನ್ನುವುದೊಂದು ವಿಶೇಷ. ಅಜಯ್ ದೇವಗನ್ ಮತ್ತು ತಬೂ ತಾರಾಗಣವಿರುವ ಈ ಚಿತ್ರದ ಬೆನ್ನಿಗೆ ರಣಬೀರ್ ಕಪೂರ್, ಆರ್ಶದ್ ವಾರ್ಸಿ, ರಿತೇಶ್ ದೇಶ್‌ಮುಖ್, ಜಾವೇದ್ ಜಾಫ್ರಿ, ಮಾಧುರಿ ದೀಕ್ಷಿತ್ ಮುಂತಾದ ಘಟಾನುಘಟಿಗಳಿರುವ ಇನ್ನೊಂದು ಚಿತ್ರಕ್ಕೂ ರಕುಲ್ ಕಾಲ್‌ಶೀಟ್ ಕೊಟ್ಟಿದ್ದಾಳೆ.
ಹಾಗೆಂದು, ದೇ ದೇ ಪ್ಯಾರ್ ದೇ ಅವಳ ಮೊದಲ ಹಿಂದಿ ಚಿತ್ರವಲ್ಲ. ಇದೇ ವರ್ಷ ಬಿಡುಗಡೆಯಾಗಿರುವ ಅಯ್ನಾರೇ ಚಿತ್ರದಲ್ಲೂ ಅವಳಿಗೊಂದು ಪಾತ್ರವಿತ್ತು. ಆದರೆ ಈ ಚಿತ್ರ ನೆಲಕಚ್ಚಿದ ಕಾರಣ ರಕುಲ್‌ಗೆ ದೇ ದೇ ಪ್ಯಾರ್ ದೇ ಚಿತ್ರವೇ ಮೊದಲ ಹಿಂದಿ ಚಿತ್ರ ಎಂದು ಭಾಸವಾಗುತ್ತಿದೆಯಂತೆ. ಈ ಚಿತ್ರ ಬಿಡುಗಡೆಯಾಗುವುದಕ್ಕೂ ಮೊದಲೇ ಮುಂದಿನ ವರ್ಷ ಶೂಟಿಂಗ್ ಪ್ರಾರಂಭಿಸಲಿರುವ ಮರ್ಜಾವನ್ ಚಿತ್ರದ ನಾಯಕಿಯಾಗಿಯೂ ರಕುಲ್ ಆಯ್ಕೆಯಾಗಿದ್ದಾಳೆ. ದಿಲ್ಲಿಯ ಹುಡುಗಿ ರಕುಲ್‌ಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಕನ್ನಡ ಚಿತ್ರರಂಗ. ಗಿಲ್ಲಿ ಚಿತ್ರದಲ್ಲಿ ನಾಯಕಿಯಾಗುವ ಮೂಲಕ ರಕುಲ್ ಬಣ್ಣ ಹಚ್ಚಲು ತೊಡಗಿದರೂ ಮಿಂಚಿದ್ದು ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ. ಸದ್ಯ 50ಕ್ಕೂ ಹೆಚ್ಚು ಚಿತ್ರಗಳ ಅನುಭವಿ ನಟಿಯಾಗಿರುವ ರಕುಲ್ ಬಾಲಿವುಡ್‌ನಲ್ಲೂ ಯಶಸ್ವಿ ಇನ್ನಿಂಗ್ಸ್ ಆಡುವ ಭರವಸೆಯಲ್ಲಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.